ಭಾರತೀನಗರ: ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದ ದುಸ್ಥಿತಿ ಖಂಡಿಸಿ ರೈತಸಂಘದ ಕಾರ್ಯಕರ್ತರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಆಸ್ಪತ್ರೆಯ ಮುಂಭಾಗ ಜಮಾಯಿಸಿದ ನೂರಾರು ರೈತ ಕಾರ್ಯಕರ್ತರು ಸರ್ಕಾರ, ಆರೋಗ್ಯ ಇಲಾಖೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತಮುಖಂಡ ಸೋಶಿ ಪ್ರಕಾಶ್ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ಹಾಗೂ ಸ್ತ್ರಿರೋಗ ತಜ್ಞರು, ಮಕ್ಕಳ ತಜ್ಞರು, ದಂತ ವೈದ್ಯರು ಇರಬೇಕಾಗಿದ್ದು ಈ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರು ಇದ್ದಾರೆ. ಕಳೆದ ಕೆಲ ದಿನಗಳ ಹಿಂದೆ 5 ಮಂದಿ ವೈದ್ಯರಿದ್ದರು. ಸರ್ಕಾರದ ನಿರ್ಧಾರಗಳಿಂದಾಗಿ 4 ಮಂದಿ ವೈದ್ಯರು ಕೌನ್ಸಲಿಂಗ್ ಮೂಲಕ ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆಂದು ದೂರಿದರು.

‘ಭಾರತೀನಗರ ಸಮುದಾಯ ಆರೋಗ್ಯ ಕೇಂದ್ರವು ರಾಜ್ಯ ಹೆದ್ದಾರಿಯಾಗಿದ್ದು ಇಲ್ಲಿ ಸಾಕಷ್ಟು ಅವಘಡಗಳು ನಡೆಯುತ್ತಿರುತ್ತವೆ. ಆದರೆ ಗಾಯಾಳುಗಳನ್ನು ಉಪಚರಿಸಲು ಸರ್ಕಾರದ ನಿಯಾಮಾವಳಿಗಳಿಂದ ಕಷ್ಟವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ರಾಮಲಿಂಗೇಗೌಡ ಮಾತನಾಡಿ, ‘ಆಸ್ಪತ್ರೆ ಮೇಲ್ದರ್ಜೆಗೆ ಏರಬೇಕಾಗಿತ್ತು, ಆದರೆ ಸರ್ಕಾರದ ನಿಮಾವಳಿಗಳಿಂದ ಸಮುದಾಯ ಆರೋಗ್ಯ ಕೇಂದ್ರವು ಇಂದು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ದೂರಿದ ಅವರು ಕೂಡಲೇ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮವನ್ನು ಜರುಗಿಸಿ ಆಸ್ಪತ್ರೆಗೆ ಅಗ್ಯವಿರುವ ನುರಿತ ವೈದ್ಯರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ಕ್ಯಾತಘಟ್ಟ ಅಂದಾನಿ ಮಾತನಾಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭುಲಿಂಗು, ಮಳವಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜು, ಮಣಿಗೆರೆ ರಾಮಣ್ಣ, ಸೋಶಿಪ್ರಕಾಶ್, ತಾಲ್ಲೂಕು ಕಾರ್ಯದರ್ಶಿ ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಕ್ಯಾತಘಟ್ಟ ಬಿಳೀಗೌಡ, ಹನುಮಂತನಗರದ ಹನುಮಂತು, ಕರಡಕೆರೆ ರಾಮಣ್ಣ, ಕೆ.ಕೆ.ದೊಡ್ಡಿ ಪುಟ್ಟಸ್ವಾಮಿ, ಹೊಸಹಳ್ಳಿ ಶಿವಣ್ಣ, ಬೊಪ್ಪಸಮುದ್ರ ಮಲ್ಲೇಶ್, ಗೆಜ್ಜಲಗೆರೆ ಲಿಂಗರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-40-871418645

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.