ಭಾರತೀನಗರ: ಸಮೀಪದ ಅಣ್ಣೂರು ಹೊರವಲಯದ ಹೊಂಬೇಗೌಡನದೊಡ್ಡಿ ಗಡಿ ಭಾಗದಲ್ಲಿ ಭಾರತೀನಗರ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾಗಿದ್ದ ಘನತ್ಯಾಜ್ಯಕ್ಕೆ ಬೆಂಕಿ ಬಿದ್ದ ಪರಿಣಾಮ ಸಮೀಪದ ರೈತರ ಜಮೀನಿನಲ್ಲಿದ್ದ ಮರಗಳಿಗೂ ವ್ಯಾಪಿಸಿ ಮರಗಳು ನಾಶಗೊಂಡಿವೆ.

ಸದರಿ ಘನತ್ಯಾಜ್ಯಕ್ಕೆ ಕಳೆದ 15 ದಿನಗಳ ಹಿಂದೆ ಬೆಂಕಿ ತಗುಲಿದ್ದು, ಭಾರತೀನಗರ ಗ್ರಾ.ಪಂನವರು ಅಗ್ನಿಶಾಮಕ ದಳವನ್ನು ಕರೆಯಿಸಿ ಬೆಂಕಿಯನ್ನು ನಂದಿಸಿದ್ದರು. ತದ ನಂತರ ಈ ಹಿಂದೆ ಬೆಂಕಿ ಹತ್ತಿದ್ದ ಸ್ಥಳದಲ್ಲಿಯೇ ಹೊಸದಾಗಿ ಘನತ್ಯಾಜ್ಯವನ್ನು ವಿಲೇವಾರಿ ಮಾಡಿದ್ದರು.

ಬೂದಿಮುಚ್ಚಿನ ಕೆಂಡದಂತಿದ್ದ ಬೆಂಕಿಯೂ ಬೇಸಿಗೆಯ ಬಿಸಿಲಿನಿಂದ ಹೊಸದಾಗಿ ವಿಲೇವಾರಿ ಮಾಡಲಾಗಿದ್ದ ಘಟನ ತ್ಯಾಜ್ಯಕ್ಕೆ ಹತ್ತಿಕೊಂಡು ಬೆಂಕಿಯ ಕೆನ್ನಾಲಿಗೆ ಇಡೀ ಘನ ತ್ಯಾಜ್ಯ ಘಟಕಕ್ಕೆ ಹರಡಿತು. ಬಯಲು ಪ್ರದೇಶವಾದ್ದರಿಂದ ಗಾಳಿ ಬೀಸಿ ಬೆಂಕಿ ಸಮೀಪದಲ್ಲಿದ್ದ ನೀಲಗಿರಿ ತೋಪಿಗೂ ವ್ಯಾಪಿಸಿತು. ಅಲ್ಲದೆ ಅಕ್ಕಪಕ್ಕದ ಜಮೀನುಗಳಿಗೂ ವ್ಯಾಪಿಸಿದ್ದು ಸುಮಾರು 15 ಎಕರೆ ಪ್ರದೇಶದಲ್ಲಿರುವ ಮರಗಿಡಗಳು ಬೆಂಕಿಯ ಶಾಖದಿಂದ ಸುಟ್ಟುಹೋಗಿವೆ.

ಮಣಿಗೆರೆ ರೈತರ ಕೆಲವು ಜಮೀನು, ಅಣ್ಣೂರು ಗ್ರಾಮದ ಬಿ.ಸಿದ್ದೇಗೌಡ, ಎ.ಎಸ್.ರಾಮಕೃಷ್ಣ, ಸಂಪತ್ಕುಮಾರ್, ಆನಂದ ಎಂಬುವವರ ಜಮೀನಿನಲ್ಲಿದ್ದ ನೀಲಗಿರಿ ಹಾಗೂ ತೆಂಗಿನ ಮರಗಳು ಸುಟ್ಟುಹೋಗಿವೆ. ಈ ಹಿಂದೆ ಬೆಂಕಿಹತ್ತಿದ್ದ ಸ್ಥಳಕ್ಕೆ ಮತ್ತೆ ಘನ ತ್ಯಾಜ್ಯವನ್ನು ಹಾಕಿ ಬೆಂಕಿ ಹೊತ್ತಿಕೊಳ್ಳುವಂತೆ ಮಾಡಿರುವ ಗ್ರಾ.ಪಂ ನವರು ಪರಿಹಾರ ನೀಡಬೇಕು. ಇಲ್ಲದಿದ್ದರೆ ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-40-1360204993

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.