ಮಂಡ್ಯ: ‘ಜನಿವಾರದ ಸುದ್ದಿ ಇರಬಹುದು ಅಥವಾ ಬೇರೆ ಯಾವುದಾದರೂ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿ ಕೊಂಡು ಹೀಯಾಳಿಸುವಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಿವೆ. ಇದರಿಂದ ಸಾಮಾಜಿಕ, ರಾಜಕೀಯ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಬ್ರಾಹ್ಮಣರು ವಿಮುಖರಾಗಿದ್ದೇವೆ’ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಆರ್. ಪ್ರದೀಪ ವಿಷಾದಿಸಿದರು.

ನಗರದ ಬ್ರಾಹ್ಮಣ ಸಮುದಾಯ ಭವನದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ವತಿಯಿಂದ ಭಾನುವಾರ ನಡೆದ ‘ವಿಪ್ರೋತ್ಸವ–2026’ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜನಿವಾರದ ವಿಷಯ ಇಟ್ಟುಕೊಂಡು ಕೆಲವು ಜನರು ಅಮಾನವೀಯ, ಅವಮಾನ ಮಾಡುವ ರೀತಿಯಲ್ಲಿ ಕಾರ್ಯತಂತ್ರ ಹೆಣೆದಿದ್ದಾರೆ, ಕಳೆದ 50–60 ವರ್ಷಗಳಿಂದಲೂ ದಬ್ಬಾಳಿಕೆ ನಡೆಸಿಕೊಂಡು ಬರಲಾಗುತ್ತಿದೆ. ಯಾವುದೇ ಅವಕಾಶಗಳು ಸಿಗದಂತೆ ರೋಸ್ಟರ್ ಪದ್ಧತಿ ಮತ್ತು ಜಾತಿ ವ್ಯವಸ್ಥೆಯಿಂದ ವಿಮುಖರಾಗಿ ಖಾಸಗಿ ವಲಯಕ್ಕೆ ಮುಖ ಮಾಡಿದ್ದೇವೆ, ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆಯುತ್ತಿಲ್ಲ, ಇದೆಲ್ಲವನ್ನು ನೋಡಿದರೆ ಹೋರಾಟವೇ ಜೀವನನಾ’ ಎಂದು ಪ್ರಶ್ನಿಸಿದರು.

‘ಸಣ್ಣಮಕ್ಕಳಿಗೂ ಜನಿವಾರ ಎನ್ನುವ ಕೂಗು ತಟ್ಟಿದೆ, ಅವರು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಬ್ರಾಹ್ಮಣ ಸಮುದಾಯದವರು ತಮ್ಮ ಸಮಾಜ ಉಳಿವಿಗಾಗಿ ಸಭಾಂಗಣ, ಕಟ್ಟಡ ಕಟ್ಟಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡಿದ್ದೇವೆ, ನಮ್ಮ ನಡುವೆಯೇ ಇತರೆ ಜಾತಿಗಳು ಯಶಸ್ಸು ಹಾಗೂ ಅಭಿವೃದ್ಧಿ ಹೊಂದುತ್ತಿದ್ದಾರೆ, ಪ್ರಸ್ತುತದಲ್ಲಿ ಬ್ರಾಹ್ಮಣರು ಇರುವ ಆಸ್ತಿಯನ್ನು ಕಳೆದುಕೊಂಡು ಬೆಂಗಳೂರಿನಂತಹ ಮಹಾನಗರಗಳಲ್ಲಿ ಆಕಾಶದೆತ್ತರದ ಅಪಾರ್ಟ್ಮೆಂಟ್ ತೆಗೆದುಕೊಂಡು ಬದುಕುವ ಸ್ಥಿತಿಗೆ ತಲುಪಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಷಿ ಮಾತನಾಡಿ, ‘ನೆಟ್ವರ್ಕ್ ಸಿಸ್ಟಮ್ನಲ್ಲಿ ಯೋಜನೆಗಳನ್ನು ರೂಪಿಸಿಕೊಂಡು ವ್ಯಾಪಾರೀಕರಣದ ಆದಾಯವು ಬ್ರಾಹ್ಮಣರಲ್ಲಿಯೇ ಉಳಿಯುವಂತೆ ಮಾಡಬೇಕು. ಇದರಿಂದ ನಮ್ಮ ಸಮುದಾಯದ ಆದಾಯವು ಹೆಚ್ಚಿ ಅಭಿವೃದ್ದಿ ಹೊಂದ ಬಹುದು’ ಎಂದು ಅಭಿಪ್ರಾಯಪಟ್ಟರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಪತಿ ಭಾರದ್ವಾಜ್, ಬ್ರಾಹ್ಮಣ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸರಾಳು ಮಧುಸೂಧನ್, ಮಾಧವ ಸಂಘದ ಅಧ್ಯಕ್ಷ ಸದಾಶಿವಭಟ್, ಮುಖಂಡರಾದ ಅನಂತನಾರಾಯಣ ಶಾಸ್ತ್ರಿ, ಪ್ರೇಮ ರಾಮಚಂದ್ರ ಹಂಬೆ, ಮಮತಾ ರಮೇಶ್, ವೆಂಕಟೇಶ್, ಭಾರತಿ, ಗೋಪಿನಾಥ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-40-2076953945

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.