ಮಂಡ್ಯ: ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಮೂವರು ಕಿಡಿಗೇಡಿಗಳು ಬಸ್ಸಿನ ಗಾಜಿಗೆ ಕಲ್ಲು ಒಡೆದು ಭಾನುವಾರ ಪರಾರಿಯಾಗಿದ್ದಾರೆ.

ನಗರದ ಕೆಎಸ್ಆರ್ಟಿಸಿ ನಿಲ್ದಾಣದಿಂದ ಮದ್ದೂರು ಕಡೆಗೆ ಹೊರಟಿದ್ದ ಬಸ್ ಫ್ಯಾಕ್ಟರಿ ವೃತ್ತದ ಬಳಿ ಸಮೀಪ ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೊರಟಿದೆ.

ಫ್ಯಾಕ್ಟರಿ ವೃತ್ತದಲ್ಲಿ ನಿಲುಗಡೆ ಇಲ್ಲದಿದ್ದರೂ ದ್ವಿಚಕ್ರ ವಾಹನದಲ್ಲಿ ನಿಂತಿದ್ದ ಮೂವರು ವ್ಯಕ್ತಿಗಳು ಬಸ್ ನಿಲ್ಲಿಸಲಿಲ್ಲ ಎಂದು ಬಸ್ ಹಿಂಬದಿ ಗ್ಲಾಸ್ಗೆ ಕಲ್ಲು ತೂರಿದ್ದಾರೆ. ರಭಸಕ್ಕೆ ಗಾಜು ಪುಡಿಯಾಗಿದೆ.

ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರು ಚೀರಿದ್ದಾರೆ, ತಕ್ಷಣ ಎಚ್ಚೆತ್ತ ಚಾಲಕ ಮಧು ಬೆಸಗರಹಳ್ಳಿ ಅವರು ಬಸ್ ಅನ್ನು ರಸ್ತೆ ಬದಿ ನಿಲ್ಲಿಸಿ, ಸಮೀಪದಲ್ಲಿದ್ದ ಟ್ರಾಫಿಕ್ ಪೊಲೀಸ್ ಜೊತೆ ಕಿಡಿಗೇಡಿಗಳನ್ನು ಹಿಂಬಾಲಿಸಿದ್ದಾರೆ ಅಷ್ಟರಲ್ಲಿ ಅವರು ಕಣ್ಮರೆಯಾಗಿದ್ದಾರೆ.

ಘಟನೆಯಿಂದ ಹಿಂಬದಿ ಕುಳಿತಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-14-160275526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.