ಮಂಡ್ಯ: ದೇಶದಾದ್ಯಂತ ಜನಗಣತಿ–2027 ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲ ಹಂತದ ‘ಮನೆ ಗಣತಿ’ ಕಾರ್ಯ ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿರುವ 6,84,767 ಮನೆಗಳನ್ನು ಗಣತಿ ಮಾಡಿದ್ದು, ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ.

ಮೊದಲ ಹಂತದಲ್ಲಿ 2026ರ ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ನಡೆದಿದೆ. ಎರಡನೇ ಹಂತದ ಜನಗಣತಿಯು 2027ರ ಫೆಬ್ರವರಿ 1ರಿಂದ ಫೆಬ್ರವರಿ 28ರವರೆಗೆ ನಡೆಯಲಿದೆ.

3737 ಮನೆಪಟ್ಟಿ ಬ್ಲಾಕ್ (ಎಚ್.ಎಲ್.ಬಿ)ಗಳಲ್ಲಿ ಒಟ್ಟು 6,84,767 ಮನೆಗಳ ಗಣತಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಗಣತಿ ಕಾರ್ಯದಿಂದ ಜಿಲ್ಲೆಯಲ್ಲಿ 17,89,706 ಜನಸಂಖ್ಯೆ ಇರುವುದು ದಾಖಲಾಗಿದೆ. 78,637 ಖಾಲಿ ಮನೆಗಳು ಮತ್ತು 194 ಬೀಗ ಹಾಕಿದ ಮನೆಗಳು ಕಂಡುಬಂದಿವೆ. ಬೀಗ ಹಾಕಿದ ಮನೆಗಳನ್ನು ಪುನರ್ ಗಣತಿ ಮಾಡಲು ಜಿಲ್ಲಾಧಿಕಾರಿ ಕುಮಾರ ಸೂಚಿಸಿದ್ದಾರೆ.

ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಸಾರ್ವಜನಿಕರಿಗೆ ‘ಸ್ವಯಂ ಗಣತಿ’ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ತಮ್ಮ ಮನೆ ಮತ್ತು ವೈಯಕ್ತಿಕ ವಿವರಗಳನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿದವರ ಸಂಖ್ಯೆ 1926 ಮಾತ್ರ. ಜಿಲ್ಲೆಯಾದ್ಯಂತ ಒಟ್ಟು 3115 ಗಣತಿದಾರರು ಹಾಗೂ 622 ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು.

ಈ ಸಂಬಂಧ ಮೂರು ದಿನಗಳ ತರಬೇತಿ ಕೂಡ ನೀಡಲಾಗಿತ್ತು. ಯಾವುದೇ ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲು ಶೇ 10ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ಮೀಸಲಿರಿಸಲಾಗಿತ್ತು.

ತಂತ್ರಾಂಶ ಬಳಕೆ: ಗಣತಿದಾರರು ಸೆನ್ಸಸ್ ಮ್ಯಾನೇಜ್ಮೆಂಟ್ ಅಂಡ್ ಮಾನಿಟರಿಂಗ್ ಸಿಸ್ಟಂ (ಸಿ.ಎಂ.ಎಂ.ಎಸ್) ತಂತ್ರಾಂಶದ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಮೇಲ್ವಿಚಾರಕರು ಪರಿಶೀಲಿಸಿ, ತಮ್ಮ ಲಾಗಿನ್ ಮೂಲಕ ಅಂತಿಮಗೊಳಿಸಿದ್ದಾರೆ.

ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಗಣತಿದಾರರಿಗೆ ನಿಖರ ಮತ್ತು ಸಂಪೂರ್ಣ ಮಾಹಿತಿ ನೀಡಿ ಈ ರಾಷ್ಟ್ರೀಯ ಕಾರ್ಯಕ್ಕೆ ಸಹಕರಿಸುವಂತೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳಿಂದ ಜಾಗೃತಿ ಮೂಡಿಸಲಾಗಿತ್ತು.

ಜನಗಣತಿ ಸಮಿತಿ ರಚನೆ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಜನಗಣತಿ ಸಮಿತಿ ರಚಿಸಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿವಿಧ ಹಂತಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು 'ಚಾರ್ಜ್ ಅಧಿಕಾರಿ'ಗಳನ್ನಾಗಿ ನೇಮಿಸಲಾಗಿತ್ತು.

ಅಷ್ಟೇ ಅಲ್ಲದೆ, ತಾಲ್ಲೂಕು ಮಟ್ಟದಲ್ಲಿ ಗ್ರಾಮೀಣ ಮತ್ತು ನಗರ ಭಾಗಕ್ಕೆ ಪ್ರತ್ಯೇಕವಾಗಿ ‘ಮಾಸ್ಟರ್ ಟ್ರೈನರ್’ ಕೂಡ ನಿಯೋಜಿಸಲಾಗಿತ್ತು.

ಗಣತಿದಾರರಾಗಿ ಶಿಕ್ಷಕರು, ಅಂಗನವಾಡಿ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-40-824658642

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.