ಮಂಡ್ಯ: ನೋಯ್ಡಾ, ಗುರುಗ್ರಾಮ್ ಮತ್ತು ದೆಹಲಿಯಲ್ಲಿ ಕಾರ್ಮಿಕರ ಹೋರಾಟಗಳ ಮೇಲೆ ನಡೆಸುತ್ತಿರುವ ದಮನಕಾರಿ ಕ್ರಮ ಮತ್ತು ಅಕ್ರಮ ಬಂಧನವನ್ನು ಸಿಐಟಿಯು ಖಂಡಿಸಿದೆ.

ಬಿಜೆಪಿ ಸರ್ಕಾರಗಳು ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸಲು ಕಾರ್ಮಿಕರ ಹಕ್ಕುಗಳನ್ನು ತೀವ್ರತರವಾಗಿ ಕುಗ್ಗಿಸುತ್ತಿದೆ. ಕಾರ್ಮಿಕರನ್ನು ಬಂಧಿಸಿ ಅವರ ಮನೆಗಳು ಮತ್ತು ಹಳ್ಳಿಗಳ ಮೇಲೆ ದಾಳಿ ನಡೆಸಲಾಗಿದೆ. ಟ್ರೇಡ್ ಯೂನಿಯನ್ ನಾಯಕರು, ವಿಶೇಷವಾಗಿ ಸಿಐಟಿಯು ನಾಯಕರನ್ನೂ ಅಧಿಕೃತವಾಗಿ ಬಂಧಿಸಿ, ಮಹಿಳಾ ಕಾರ್ಮಿಕರ ಮೇಲೆ ಕ್ರೂರ ಹಲ್ಲೆಗಳನ್ನು ಮಾಡಿ, ರಾಷ್ಟ್ರ ವಿರೋಧಿ ಹೊರಾಟ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಾರ್ಮಿಕರ ಹೋರಾಟಗಳ ಮೇಲೆ ನಡೆಸುತ್ತಿರುವ ದಮನವು ನಿಲ್ಲಬೇಕು. ಕಾರ್ಮಿಕರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ₹26 ಸಾವಿರ ಕನಿಷ್ಠ ವೇತನ ನೀಡಬೇಕು. ಕಾರ್ಮಿಕರ ಹಕ್ಕುಗಳನ್ನು ಪ್ರತಿಪಾದಿಸಿ ಏಪ್ರಿಲ್ 17ರಂದು ದೇಶವ್ಯಾಪಿ ಕ್ರಮಕ್ಕೆ ಸಿಐಟಿಯು ಕರೆ ನೀಡಿದೆ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಶಿವಕುಮಾರ್ ಮತ್ತು ಪ್ರಧಾನ ಕಾರ್ಯದರ್ಶೀ ಸಿ.ಕುಮಾರಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-40-1049425395

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.