ಮಂಡ್ಯ: ‘ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆದದ್ದೇ ಈ ದೇಶದ ದೊಡ್ಡ ಬಂಡವಾಳಗಾರರ ಹುನ್ನಾರದಿಂದ, ಇಂದು ತೈಲ ಟ್ಯಾಂಕರ್ ನಾಶಪಡಿಸಿ ಇದರಿಂದ ಬಿಕ್ಕಟ್ಟು ತಂದೊಡ್ಡಲಾಗಿದೆ. ಬಿಕ್ಕಟ್ಟು ಎದುರಾದರೆ ದಿನಬಳಕೆ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಲಿ ಎಂಬುದೇ ಇವರ ಮೂಲ ಉದ್ದೇಶ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಎಚ್.ಎಸ್.ಸುನಂದಾ ಆರೋಪಿಸಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ಸ್ ವತಿಯಿಂದ ಭಾನುವಾರ ಮುಕ್ತಾಯಗೊಂಡ ಕಾರ್ಮಿಕ ಕಾನೂನುಗಳ ಉಳಿವು, ನಾಲ್ಕು ಲೇಬರ್ ಕೋಡ್ ರದ್ದು ಪಡಿಸಲು, ವೈಜ್ಞಾನಿಕ ಕನಿಷ್ಠ ವೇತನಕ್ಕೆ ಆಗ್ರಹ ಹಾಗೂ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಅಡುಗೆ ಅನಿಲಕ್ಕೆ ಬಹಳಷ್ಟು ಸಮಸ್ಯೆ ಆಗಿದ್ದು, ಬೆಂಗಳೂರು, ಮಂಡ್ಯ ಸೇರಿದಂತೆ ಫುಟ್ಪಾತ್ ಅಂಗಡಿಗಳು ಸೇರಿದಂತೆ ಕೆಲವು ಹೋಟೆಲ್ಗಳು ಮುಚ್ಚಿ ಹೋದವು. ವಾಣಿಜ್ಯ ಅಡುಗೆ ಅನಿಲ ಕೊಂಡುಕೊಳ್ಳುವುದಕ್ಕೆ ಸಾಧ್ಯವಾಗದ ಸ್ಥಿತಿಗೆ ಇಂದು ತಂದು ಬಿಟ್ಟಿದ್ದಾರೆ, ಇದರಿಂದ ಕೆಲಸಗಳನ್ನು ಕಳೆದುಕೊಳ್ಳಲಾಗಿದೆ. ಜನಸಾಮಾನ್ಯರ ಮೇಲೆ ಯುದ್ಧ ಪರಿಣಾಮ ಬೀರಿದಿಯೇ ಹೊರತು ರಾಜಕಾರಣಿಗಳು ಮತ್ತು ಬಂಡವಾಳಗಾರರ ಮೇಲೆ ಬೀರಿಲ್ಲ’ ಎಂದು ಆರೋಪಿಸಿದರು.

‘ಇಂಧನ ಮೇಲೆ ಬಿಕ್ಕಟ್ಟು ತಂದೊಡ್ಡಿ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಮತ್ತು ತಯಾರಿಕೆಗೆ ಉತ್ತೇಜನಕ್ಕೆ ಇಷ್ಟೆಲ್ಲಾ ಮಾಡಲಾಗುತ್ತಿದೆ. ಕಾರು, ಬೈಕ್ ಬಳಸಬೇಡಿ, ಚಿನ್ನ ಕೊಂಡುಕೊಳ್ಳಬೇಡಿ ಎಂದು ಭಾಷಣದಲ್ಲಿ ಹೇಳುವ ಮೋದಿ ಅವರೇ ಇದಕ್ಕೆ ಪರಿಹಾರ ಏಕೆ ಕಂಡುಕೊಡುತ್ತಿಲ್ಲ. ಇಲ್ಲಿ ಬಿಸಿಯೂಟ ನೌಕರರ, ಬಡವರು, ಅಂಗನವಾಡಿಯವರು, ಕಟ್ಟಡ ಕಾರ್ಮಿಕರು, ದೇಶದ ರೈತರು ಚಿನ್ನದ ಬಿಸ್ಕೆಟ್ ತೆಗೆದುಕೊಳ್ಳುತ್ತಿದ್ದಾರೆಯೇ, ಇವರಿಗೆ ತಿನ್ನಲು ಊಟವೇ ಇಲ್ಲ, ಕೊಡುವ ಸಂಬಳ ಒಪ್ಪತ್ತಿನ ಗಂಜಿಗೆ ಸಾಕಾಗುತ್ತಿಲ್ಲ, ಇದು ಕಾಣಿಸುತ್ತಿಲ್ಲವೇ’ ಎಂದು ಕಿಡಿಕಾರಿದರು.

‘2014ರಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದ ದೇಶದ ಸ್ವಾತಂತ್ರ್ಯ ನಾಶವಾಯಿತು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿ ಪಡೆದುಕೊಂಡಿದ್ದನ್ನು ಮೊಟಕುಗೊಳಿಸಲಾಯಿತು. ಇದು ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮಾಡಿದ್ದಾರೆ, 40 ಕಾರ್ಮಿಕ ಕಾನೂನುಗಳನ್ನು 29ಕ್ಕೆ ಮಾರ್ಪಾಟು ಮಾಡಲಾಯಿತು, ಕಾರ್ಮಿಕ ಹೋರಾಟ ಮಾಡಬಾರದೆಂದು ಸಭೆ ಕಡೆಯುವ ಅಧಿಕಾರಿಗಳು, ಸರ್ಕಾರದ ಮುಂದೆ ನಿಮ್ಮ ಬೇಡಿಕೆ ಇಡುತ್ತೇವೆ, ನಿಮ್ಮ ಹೋರಾಟಕ್ಕೆ ಬೆಂಬಲವಿದೆ ಎಂದು ಹೇಳಿ ಪ್ರತಿಭಟನೆ ಹತ್ತಿಕ್ಕುತ್ತಾರೆ ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಸಲಹೆ ನೀಡಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ‘ಮೇ 30ರಂದು ಕನಿಷ್ಠ ವೇತನ ಪರಿಷ್ಕರಣೆಗೆ ಒತ್ತಾಯಿಸಿ, ಸಹಿ ಸಂಗ್ರಹ ಮತ್ತು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಕರೆ ನೀಡಲಾಗಿದೆ. ಕಾರ್ಮಿಕರ ಕನಿಷ್ಠ ವೇತನವನ್ನು 2022ರಲ್ಲೇ ಪುನರ್ ವಿಮರ್ಶೆಗೆ ಒಳಪಡಿಸಬೇಕಿತ್ತು. ಆದರೆ ಆಗಿನ ಬಿಜೆಪಿ ಸರ್ಕಾರ ಅವೈಜ್ಞಾನಿಕ ಹಾಗೂ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸಿ ಅತಿ ಕಡಿಮೆ ಮಟ್ಟದ ವೇತನ ಪರಿಷ್ಕರಣೆಯನ್ನು ಮಾಡಿತು. ಈ ಅವೈಜ್ಞಾನಿಕವಾದ ಪರಿಷ್ಕರಣೆಯನ್ನು ಮಾಡುವಂತೆ ರಾಜ್ಯ ಸರ್ಕಾರಕ್ಕೂ ಆದೇಶ ನೀಡಿತು. ರಾಜ್ಯ ಸರ್ಕಾರ ಸೂಚಿಸಿದ ಪರಿಷ್ಕೃತ ವೇತನ ಕನಿಷ್ಠ ತಿಂಗಳಿಗೆ ₹36,000 ನಿಗದಿ ಆಗಬೇಕು’ ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಶಿವಕುಮಾರ್, ಕಾರ್ಯದರ್ಶಿಗಳಾದ ಚಂದ್ರಶೇಖರ್, ಬಿ.ಹನುಮೇಶ್, ಗ್ರಾಮೀಣ ಕೃಷಿ ಕಾರ್ಮಿಕರ ಸಂಘ ಎನ್.ಸುರೇಂದ್ರ, ಮುಖಂಡರಾದ ಮಹಾದೇವಮ್ಮ, ಚಂದ್ರಶೇಖರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-40-524011916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.