ಮಂಡ್ಯ: ಮಾದರಿ ರಸ್ತೆ, ಸೇತುವೆಗಳ ನಿರ್ಮಾಣ, ಉದ್ಯಾನಗಳ ಅಭಿವೃದ್ಧಿ, ವೃತ್ತಗಳ ಆಧುನೀಕರಣ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಕ್ರಮಗಳು ಸೇರಿದಂತೆ ಮಂಡ್ಯ ನಗರಕ್ಕೆ ಹೊಸ ಕಾಯಕಲ್ಪ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಸೋಮವಾರ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕುಮಾರ ಅವರು 2026–27ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ ನಂತರ ಮಂಡ್ಯ ನಗರದಲ್ಲಿ ಕೈಗೊಳ್ಳಲಿರುವ ಹೊಸ ಯೋಜನೆಗಳ ಬಗ್ಗೆ ಶಾಸಕರು ಸಮಗ್ರ ಮಾಹಿತಿ ನೀಡಿದರು.

ನಗರ ಭೂಸಾರಿಗೆ ನಿರ್ದೇಶನಾಲಯ ಮತ್ತು ಮಂಡ್ಯ ನಗರಸಭೆಯ ಸಹಭಾಗಿತ್ವದಲ್ಲಿ ನಗರದ ವಿ.ವಿ. ರಸ್ತೆಯನ್ನು ‘ವೆಹಿಕಲ್ ಫ್ರೀ ಝೋನ್’ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವಿದೇಶಿ ನಗರಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲಾಗುವುದು. ಇದಕ್ಕೂ ಮುನ್ನ ಸಾರ್ವಜನಿಕರು ಮತ್ತು ವ್ಯಾಪಾರಿಗಳೊಂದಿಗೆ ಸಭೆ ನಡೆಸಿ, ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದರು.

ಆಯವ್ಯಯದ ಸಾರಾಂಶ:

ಆರಂಭಿಕ ಶಿಲ್ಕು ₹15.63 ಕೋಟಿ ಹಾಗೂ 2026-27ನೇ ಸಾಲಿಗೆ ನಗರಸಭೆಯ ಸ್ವಂತ ಸಂಪನ್ಮೂಲಗಳಿಂದ ತೆರಿಗೆ ಮತ್ತು ತೆರಿಗೆಯೇತರ ನಿರೀಕ್ಷಿತ ಆದಾಯ ₹29.32 ಕೋಟಿ, ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಗಳು ಮತ್ತು ಕರಗಳ ಬಾಬ್ತು ₹10,56 ಕೋಟಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಿರೀಕ್ಷಿತ ಅನುದಾನಗಳು ₹68 ಕೋಟಿ ಸೇರಿದಂತೆ ಒಟ್ಟು ₹123.62 ಕೋಟಿ ಬಜೆಟ್ ಅನ್ನು ಈ ಬಾರಿ ಮಂಡಿಸಲಾಯಿತು.

2026-27ನೇ ಸಾಲಿಗೆ ನೌಕರರ ವೇತನ, ನಿರ್ವಹಣಾ ವೆಚ್ಚಗಳು, ಬಂಡವಾಳ ಕಾಮಗಾರಿಗಳು, ಕಲ್ಯಾಣ ಕಾರ್ಯಕ್ರಮಗಳು ಮತ್ತು ಸರ್ಕಾರಕ್ಕೆ ಪಾವತಿಸಬೇಕಾದ ಕರಗಳು ಹಾಗೂ ಶಾಸನಬದ್ಧ ತೆರಿಗೆಗಳು ಸೇರಿದಂತೆ ಒಟ್ಟಾರೆ ಖರ್ಚು ₹121 ಕೋಟಿ ತಗುಲಲಿದೆ. ₹2.51 ಕೋಟಿ ಉಳಿತಾಯ ಬಜೆಟ್ ಅನ್ನು ಜಿಲ್ಲಾಧಿಕಾರಿ ಕುಮಾರ ಮಂಡಿಸಿದರು.

‘ಹಸಿರು ಮಂಡ್ಯಕ್ಕೆ ಆದ್ಯತೆ’

ಮೈಸೂರು–ಬೆಂಗಳೂರು ಮುಖ್ಯರಸ್ತೆಯಲ್ಲಿ ನಗರದ ಸೌಂದರ್ಯೀಕರಣ ಹೆಚ್ಚಿಸಲು ರಸ್ತೆಯ ಫುಟ್ಪಾತ್ನ ಎರಡೂ ಇಕ್ಕೆಲಗಳಲ್ಲಿ ಹೊಸದಾಗಿ ಆಕರ್ಷಕ ಆಲಂಕಾರಿಕ ಗಿಡಗಳನ್ನು ನೆಟ್ಟು ಪೋಷಿಸಲು ₹30 ಲಕ್ಷ ಮೊತ್ತವನ್ನು ನಿಗದಿಪಡಿಸಲಾಗಿದೆ. ಅಮೃತ್ 2.0 ಯೋಜನೆಯಡಿ ನಗರಸಭೆ ಕಚೇರಿಯ ಮುಂಭಾಗದ ಮಹಾತ್ಮ ಗಾಂಧಿ ಉದ್ಯಾನ ಬಿ.ವಿ.ಕೆ.ಬಡಾವಣೆಯಲ್ಲಿರುವ ಉದ್ಯಾನ ಮತ್ತು ಹಾಲಹಳ್ಳಿಯ ಉದ್ಯಾನವನ್ನು ₹1.08 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಸಿಲ್ವರ್ ಜ್ಯುಬಿಲಿ ಉದ್ಯಾನಕ್ಕೂ ಕಾಯಕಲ್ಪ ಮಾಡಲಿದ್ದೇವೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

‘ಸುಸಜ್ಜಿತ ವಿದ್ಯುತ್ ಚಿತಾಗಾರ’

ಸಂಜಯ ವೃತ್ತದಲ್ಲಿ ಆಕರ್ಷಕ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ₹2 ಕೋಟಿ ಮೊತ್ತದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾಗುವುದು. ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಪ್ರತಿಮೆ ನಿರ್ಮಾಣವಾಗಲಿದೆ. ಕಲ್ಲಹಳ್ಳಿ ಸ್ಮಶಾನದ ಆವರಣದಲ್ಲಿ ಆಧುನಿಕ ಸುಸಜ್ಜಿತ ವಿದ್ಯುತ್ ಚಿತಾಗಾರ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಮಂಡ್ಯ ನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್ಬಾಲ್ ಕ್ರೀಡಾಂಗಣವನ್ನು ₹3 ಕೋಟಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುವುದು. ಹೆಬ್ಬಳ್ಳದ ಹಳ್ಳಕ್ಕೆ ಕಾವೇರಿ ನೀರಾವರಿ ನಿಗಮದ ವತಿಯಿಂದ ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ₹10 ಕೋಟಿ ಮೊತ್ತದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.