ಮಂಡ್ಯ: ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿ ದಲಿತ ಸಮುದಾಯದ ಗೃಹ ಪಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರೊಬ್ಬರಿಗೆ ಕಿರುಕುಳ ನೀಡಿ ಕೆಲಸ ಬಿಡುವಂತೆ ಮಾಡಿದ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ, ಮಾನವ ಬಂಧುತ್ವ ವೇದಿಕೆ, ಆಟೊ ಚಾಲಕರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಕಚೇರಿ ಸಹಾಯಕಿ ರೋಹಿಣಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗೃಹ ಪಾಲಕಿಯಾಗಿ ಕೆಲಸ ನಿರ್ವಹಿಸುತ್ತಿರುವ ರಾಧಾ ಅವರು, ಮೇಲಧಿಕಾರಿಯಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿ ಒತ್ತಡದಲ್ಲಿ ಕೆಲಸ ನಿರ್ವಹಿಸಿದ್ದಾರೆ, ಜೊತೆಗೆ ಸ್ವತಃ ಕೆಲಸ ಬಿಟ್ಟು ಹೋಗುವಂತೆ ನಡೆದುಕೊಂಡಿರುವ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಾರೋಗ್ಯದ ಸಂದರ್ಭದಲ್ಲಿ ರಾಧಾ ಅವರಿಗೆ ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೂ ಕೆಲಸ ನಿರ್ವಹಿಸುವಂತೆ ಕಿರುಕುಳ ನೀಡಿದ್ದಾರೆ. ದಲಿತ ಸಮುದಾಯದವರು ಎಂಬ ಕಾರಣಕ್ಕಾಗಿ ಇವರಿಗೆ ರಜೆ ನೀಡದೆ ಉಳಿದ ಶನಿವಾರ ಭಾನುವಾರ ದಿನಗಳಲ್ಲಿ ಇತರೆ ಸಮುದಾಯದ ಸಿಬ್ಬಂದಿಗೆ ರಜೆ ನೀಡಿ ಅವರ ಸಿ.ಎಲ್. ರಜೆ ತೆಗೆದುಕೊಂಡಾಗ ಸಂಬಳ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದರು.

ಸಂಬಂಧಪಟ್ಟ ಅಧಿಕಾರಿ ಡಿಸಿಪಿಒ ಅವರ ಗಮನಕ್ಕೆ ತಂದರು ಮೌನ ವಹಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಾಡಬೇಕಾದ ತಮ್ಮ ಇಲಾಖೆಯಲ್ಲಿಯೇ ಈ ರೀತಿ ಮಹಿಳೆಯರ ಮೇಲಿನ ಶೋಷಣೆ ಸರಿಯಲ್ಲ, ಮತ್ತೆ ಕೆಲಸಕ್ಕೆ ಸೇರಿಸಿಕೊಂಡು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಸಂತೆಕಸಲಗೆರೆ ಬಸವರಾಜು ಎಚ್.ಡಿ.ಜಯರಾಮ್, ಟಿ.ಡಿ.ನಾಗರಾಜು, ಎಂ.ವಿ.ಕೃಷ್ಣ, ದೇವರಾಜ್ ಕೊಪ್ಪ, ಎಂ.ಬಿ.ನಾಗಣ್ಣಗೌಡ, ಎಂ.ವೆಂಕಟೇಶ್, ಗೋವಿಂದರಾಜು, ಶೋಭಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-40-1884402761

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.