ಮಂಡ್ಯ: ಸರ್ಕಾರ ಹಾಗೂ ಸಂಸ್ಥೆಗಳ ಸವಲತ್ತುಗಳನ್ನು ಅಂಗ ವಿಕಲರು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಮೆರಿಕನ್ ಇಂಡಿಯಾ ಫೌಂಡೇಷನ್ ಹಾಗೂ ಸ್ವಾಭಿಮಾನಿ ಫೌಂಡೇಷನ್ ವತಿಯಿಂದ ಅಂಗವಿಕಲರಿಗೆ ವಿದ್ಯುತ್ ಚಾಲಿತ ವಾಹನ ವಿತರಿಸಿ ಅವರು ಮಾತನಾಡಿದರು.

ಅಂಗವಿಕಲರಲ್ಲಿ ವಿಶೇಷ ಚೇತನ ಶಕ್ತಿ ಇದೆ. ಅಂಗವಿಕಲರಿಗೆ ಸವಲತ್ತು ಕೊಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸಹಕರಿಸಬೇಕು ಎಂದರು.

12 ಮಂದಿ ಅಂಗವಿಕಲರಿಗೆ ₹1.15 ಲಕ್ಷ ವೆಚ್ಚದ ಅತ್ಯುತ್ತಮವಾದ ವಾಹನ ಕೊಡಲಾಗುತ್ತಿದೆ. ಸಂಸ್ಥೆಯವರೇ ಇವರನ್ನು ಗುರುತಿಸಿ ಈ ರೀತಿಯ ಕೆಲಸ ಮಾಡುತ್ತಿ ದ್ದಾರೆ. ಈ ವಾಹನ ಮನೆಯಲ್ಲಿ ಇದ್ದರೆ ವೀಲ್ ಚೇರ್, ಹೊರಗಡೆ ಬೈಕ್ ವಾಹನವಾಗಿ ಬಳಸಬಹುದು. ಇಂತಹ ಸಂಸ್ಥೆಗಳು ಸಮಾಜದಲ್ಲಿ ಹೆಚ್ಚಾಗಬೇಕು ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೋಮಲ್ ಕುಮಾರ್, ಅಮೇರಿಕನ್ ಇಂಡಿಯಾ ಫೌಂಡೇಷನ್ ನರೇಂದ್ರನ್, ಸ್ವಾಭಿಮಾನಿ ಫೌಂಡೇಷನ್ ನಂದೀಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-40-1082368741

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.