ಬುಧವಾರ, ನವೆಂಬರ್ 13, 2019
22 °C

ಅನರ್ಹ ಶಾಸಕನ ಬೆಂಬಲಿಗ ಶ್ರೀನಿವಾಸ್‌ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Published:
Updated:
Prajavani

ಕೆ.ಆರ್.ಪೇಟೆ: ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಅವರ ಬೆಂಬಲಗ ಕೆ.ಶ್ರೀನಿವಾಸ್‌ ಅವರಿಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶ್ರೀನಿವಾಸ್‌ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಶ್ರೀನಿವಾಸ್‌ ಕುರುಬ ಸಮಾಜದ ಮುಖಂಡ ಕೆ.ಎನ್‌.ಕೆಂಗೇಗೌಡ ಅವರ ಪುತ್ರ. ಅವರು ಈ ಹಿಂದೆ  ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದರು. ನಂತರ ಜೆಡಿಎಸ್ ಪಕ್ಷಕ್ಕ ಸೇರ್ಪಡೆಗೊಂಡು ಅನರ್ಹ ಶಾಸಕ ನಾರಾಯಣಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)