ಮಂಡ್ಯ: ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು, 36 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ 307 ಗ್ರಾಮಗಳನ್ನು ಗುರುತಿಸಲಾಗಿದೆ. ಕೆ.ಆರ್.ಪೇಟೆ. ನಾಗಮಂಗಲ ಹಾಗೂ ಮಳವಳ್ಳಿ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಸಮಸ್ಯಾತ್ಮಕ ಗ್ರಾಮಗಳಿವೆ.

ಸಮಸ್ಯಾತ್ಮಕ ಗ್ರಾಮಗಳಿಗೆ 167 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲು ಹಾಗೂ 96 ಗ್ರಾಮಗಳಲ್ಲಿ ಹೊಸದನ್ನು ಕೊರೆಯಲು ಉದ್ದೇಶಿಸಲಾಗಿದೆ. ಕೊರೆದಿರುವೆಡೆ ಪಂಪು, ಮೋಟರ್, ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.

61 ನೀರಿನ ಘಟಕ ಸ್ಥಗಿತ:

‘ಜಿಲ್ಲೆಯ 737ರ ಪೈಕಿ 676 ಶುದ್ಧ ನೀರಿನ ಘಟಕಗಳು ಚಾಲ್ತಿಯಲ್ಲಿವೆ. 61 ಘಟಕಗಳು ಸ್ಥಗಿತಗೊಂಡಿದ್ದು, ರಿಪೇರಿ ನಡೆದಿದೆ. ಆದರೆ,ಘಟಕಗಳನ್ನು ಸಕಾಲದಲ್ಲಿ ದುರಸ್ತಿ ಮಾಡುತ್ತಿಲ್ಲ ಮತ್ತು ದುರಸ್ತಿ ನಂತರವೂ ಘಟಕಗಳು ಕೆಟ್ಟು ನಿಲ್ಲುತ್ತಿವೆ’ ಎಂದು ಸಾರ್ವಜನಿಕರು ದೂರಿದ್ದಾರೆ.

ಕಾವೇರಿ ಮತ್ತು ಅದರ ಉಪನದಿಗಳಾದ ಹೇಮಾವತಿ, ಲೋಕಪಾವನಿ, ಶಿಂಷಾ, ವೀರವೈಷ್ಣವಿ ನದಿಗಳು ಹರಿದರೂ ಜಿಲ್ಲೆಯಲ್ಲಿ ಶೇ 52ರಷ್ಟು ಕೃಷಿ ಪ್ರದೇಶ, ಶೇ 48ರಷ್ಟು ಮಳೆಯಾಶ್ರಿತ ಪ್ರದೇಶವಿದೆ. ನೀರಾವರಿ ಪ್ರದೇಶಗಳ ಬಹುತೇಕ ಗ್ರಾಮಗಳಿಗೆ ಕಾವೇರಿಯಿಂದಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸಲಾಗುತ್ತಿದೆ.

ಜಿಲ್ಲೆಯ 968 ಕೆರೆಗಳಲ್ಲಿ ಈ ಬಾರಿ 407 ಕೆರೆಗಳು ತುಂಬಿದ್ದವು. 167 ಕೆರೆಗಳಲ್ಲಿ ಶೇ 75ಕ್ಕೂ ಹೆಚ್ಚು ನೀರು ಮತ್ತು 201 ಕೆರೆಗಳಲ್ಲಿ ಶೇ 50ಕ್ಕೂ ಅಧಿಕ ನೀರು ಸಂಗ್ರಹವಾಗಿತ್ತು. 104 ಕೆರೆಗಳಲ್ಲಿದ್ದ ನೀರು ಖಾಲಿಯಾಗಿದ್ದು, ಜನ–ಜಾನುವಾರುಗಳಿಗೆ ನೀರಿನ ಕೊರತೆ ಕಾಡುತ್ತಿದೆ.

‘28 ಗ್ರಾಮಗಳಿಗೆ ಟ್ಯಾಂಕರ್ ನೀರು’ ಮಂಡ್ಯ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ 28 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಜಿಲ್ಲಾ ಪಂಚಾಯಿತಿ ಚಿಂತನೆ ನಡೆಸಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹಳ್ಳಿ ಕೊತ್ತಮಾರನಹಳ್ಳಿ ಚಿಕ್ಕಹಾರನಹಳ್ಳಿ ಕೋಟಗಹಳ್ಳಿ ಮುರುಗನಕೊಪ್ಪಲು ರಾಜಘಟ್ಟ ಕಡಹೆಮ್ಮಿಗೆ ಹಲಸಿನಹಳ್ಳಿ ನಾಗರಘಟ್ಟ ದೊಡ್ಡಸೋಮನಹಳ್ಳಿ ಗಿಡದಬೊಪ್ಪನಹಳ್ಳಿ ಐಚನಹಳ್ಳಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿ ಮಂಡ್ಯ ತಾಲ್ಲೂಕಿನ ಮೊಳೆಕೊಪ್ಪಲು ನಾಗಮಂಗಲ ತಾಲ್ಲೂಕಿನ ಹಂದೇನಹಳ್ಳಿ ಕಾಲೊನಿ ಗರುಡನಹಳ್ಳಿ ಹಾಲ್ತಿ ಕೋಟೆಬೆಟ್ಟ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲು ಉದ್ದೇಶಿಸಲಾಗಿದೆ. ಪಾಂಡವಪುರ ತಾಲ್ಲೂಕಿನ ಇಳ್ಳೇನಹಳ್ಳಿ ಅಗಟಹಳ್ಳಿ ಬಿ.ಕೊಡಗಹಳ್ಳಿ ಮದೇನಹಳ್ಳಿ ತಾಳೆಕೆರೆ ಎಂ.ಸಿಂಗಾಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಗೌಡಹಳ್ಳಿ ಗಣಂಗೂರು ಶ್ರೀನಿವಾಸ ಅಗ್ರಹಾರ ಹುಂಜನಕೆರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ.

ನೀರು ಪೂರೈಕೆಗೆ ಅಗತ್ಯ ಕ್ರಮ: ಸಿಇಒ ‘ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. 206 ಗ್ರಾಮಗಳಲ್ಲಿ ಖಾಸಗಿ ಬೋರ್ವೆಲ್ಗಳನ್ನು ಗುರುತಿಸಲು ಕ್ರಮವಹಿಸಲಾಗಿದೆ. ಉಳಿದ 28 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ’ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.