ಮಂಡ್ಯ: ರೈತರ ಜಮೀನು ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡದೇ ತೊಂದರೆ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕೆ.ಆರ್. ಪೇಟೆ ತಾಲ್ಲೂಕಿನ ಬೂಕನಕೆರೆ, ಬಳ್ಳೇಕೆರೆ, ಚೌಡೇನಹಳ್ಳಿ, ನಾರ್ಗೋನಹಳ್ಳಿ, ಹೊಸಹೊಳಲು, ಮಣಿಗನಹಳ್ಳಿ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

2004ರಲ್ಲಿ ಹೇಮಾವತಿ ಜಲಾಶಯ ಯೋಜನೆಯಡಿ ನಾಲಾ ನಿರ್ಮಾಣದ ಉದ್ದೇಶಕ್ಕಾಗಿ ರೈತರ ಜಮೀನು ಭೂಸ್ವಾಧೀನ ಪಡಿಸಿಕೊಂಡು ಕಡಿಮೆ ಪರಿಹಾರ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿ ಹೆಚ್ಚಿನ ಪರಿಹಾರಕ್ಕಾಗಿ ಹೈಕೋರ್ಟ್ನಲ್ಲಿ ಮನವಿ ಮಾಡಿಕೊಂಡು ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯವು ಇಲ್ಲಿನ ಅಧಿಕಾರಿಗಳಿಗೆ 28(ಎ) ಅವಾರ್ಡ್ ಆದೇಶದಂತೆ ಪರಿಹಾರವನ್ನು ಇಲ್ಲಿವರೆಗೂ ನೀಡಿಲ್ಲ ಎಂದು ಆರೋಪಿಸಿದರು.

ಮಂಡ್ಯ ಭೂಸ್ವಾಧೀನಾಧಿಕಾರಿಗಳು ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸದರಿ ಪರಿಹಾರದ ಅವಾರ್ಡ್ ಅನುಮೋದನೆಯಾದ ನಂತರ ಸಂಬಂಧಪಟ್ಟ ಬೆಂಗಳೂರು, ಮಂಡ್ಯ ಎಲ್ಲ ಕಚೇರಿಗಳಿಗೂ ಅಲೆದಾಡಿ ಸಾಕಾಗಿದ್ದರೂ ನಮ್ಮ ಅಳಲು ಕೇಳುತ್ತಿಲ್ಲ. ಮಾನಸಿಕವಾಗಿ ರೈತರನ್ನು ಕುಗ್ಗಿಸುವ ಕೆಲಸ ಮಾಡಿರುವ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ನಮ್ಮ ರೈತರು ಅತ್ತ ಜಮೀನು ಕಳೆದುಕೊಂಡು, ಇತ್ತ ಪರಿಹಾರದ ನಿರೀಕ್ಷೆಯಲ್ಲಿರುವ ನಮಗೆ 20 ವರ್ಷ ಕೋರ್ಟ್ಗೆ ಅಲೆದಾಡಿ ಅಂತಿಮವಾಗಿ ಆದೇಶ ಮಾಡಿರುವುದನ್ನು ಈ ಅಧಿಕಾರಿಗಳು ಪಾಲಿಸುತ್ತಿಲ್ಲ. ಇದು ಹೀಗೆ ಮುಂದುವರಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸುತ್ತೇವೆ. ಮುಂದೆ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರಹೊಣೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತರಾದ ಕೆ.ಪ್ರಕಾಶ್, ಲೀಲಾವತಿ, ಶ್ರೀನಿವಾಸ್, ನಾಗಮ್ಮ, ಮಂಜು, ನಾಗರಾಜು, ರವಿ, ಜವರಯ್ಯ, ಬಿ.ಕೆ.ಸೋಮೇಶ್, ಶಾಂತಮ್ಮ, ರಾಮಕೃಷ್ಣೇಗೌಡ, ದೇವಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.