ಭಾರತೀನಗರ: ರೈತರಿಗೆ ಚಾಂಷುಗರ್ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ನೀಡಬೇಕಾಗಿರುವ ಬಾಕಿ ಹಣ ₹50 ಅನ್ನು ಶೀಘ್ರವೇ ಬಟವಾಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಆಗ್ರಹಿಸಿದ್ದಾರೆ.

2025 -26ನೇ ಸಾಲಿನಲ್ಲಿ ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಅರೆದಿರುವ ಕಬ್ಬಿಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ₹50 ಬಾಕಿ ಹಣವನ್ನು ಸೇರಿಸಿ ಪಾವತಿ ಮಾಡುವಂತೆ ರಾಜ್ಯಸರ್ಕಾರ ಘೋಷಣೆ ಮಾಡಿದೆ. ರಾಜ್ಯ ಸರ್ಕಾರದಿಂದ ನೀಡಬೇಕಿರುವ ₹50ನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಕಾರ್ಖಾನೆಗಳು ಪ್ರತೀ ಟನ್ ಕಬ್ಬಿಗೆ ಶೀಘ್ರವೇ ₹50 ನ್ನು ಬಿಡುಗಡೆ ಮಾಡಬೇಕೆಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ಮುಂಬರುವ 2026-27ನೇ ಸಾಲಿನಲ್ಲಿ ಅರೆಯುವ ಕಬ್ಬಿನ ಬೆಲೆಗೆ ಇದುವರೆವಿಗೂ ಸಕ್ಕರೆ ಕಾರ್ಖಾನೆಗಳು ಬೆಲೆ ನಿಗದಿ ಮಾಡಿಲ್ಲ. ಇದರಿಂದ ರೈತರಿಗೆ ದ್ರೋಹವೆಸಗಲು ಕಾರ್ಖಾನೆಗಳು ಹವಣಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅವರು ಆರೋಪಿಸಿದರು.

ಒಂದು ವೇಳೆ ಬೆಲೆ ನಿಗದಿಗೊಳಿಸದೆ ಅಥವಾ ಬಾಕಿ ಹಣ ಬಟವಾಡೆ ಮಾಡದೆ ಕಾರ್ಖಾನೆ ಆರಂಭಿಸಿದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-40-1667389245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.