ಮಂಡ್ಯ: ‘ರೈತರಿಗೆ ಅವಧಿ ಮೀರಿದ ಬಿತ್ತನೆ ಬೀಜ ವಿತರಿಸುತ್ತಿದ್ದಾರೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಗುರುವಾರ ವಿತರಣೆಗೆ ತಡೆಯೊಡ್ಡಿದ್ದಾರೆ.

ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿತ್ತು. ಬಿತ್ತನೆ ಬೀಜ ಒಂದು ವರ್ಷಕ್ಕೂ ಹಿಂದೆಯೇ ಅವಧಿ ಮೀರಿರುವುದು ರೈತರ ಗಮನಕ್ಕೆ ಬಂದಿದೆ. ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿ ಅವಧಿ ಮೀರಿದ ಬಿತ್ತನೆ ಬೀಜ ಪಡೆಯಲು ನಿರಾಕರಿಸಿದ್ದಾರೆ.

ಮಾಹಿತಿ ತಿಳಿದ ಕರವೇ ಕಾರ್ಯಕರ್ತರು ಅವಧಿ ಮೀರಿದ ಬಿತ್ತನೆ ಬೀಜ ವಿತರಣೆಗೆ ತಡೆಯೊಡ್ಡಿದ್ದಾರೆ. ಅಧಿಕಾರಿಗಳು ತಕ್ಷಣ ಬಿತ್ತನೆ ಬೀಜ ವಿತರಣೆ ಸ್ಥಗಿತಗೊಳಿಸಿದ್ದಾರೆ.

ಕರವೇ ಮುಖಂಡ ಎಚ್.ಡಿ. ಜಯರಾಂ ಮಾತನಾಡಿ, ‘ಸುಮಾರು 240 ಕೆ.ಜಿ.ಯಷ್ಟು ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಸಿದ್ಧ ಮಾಡಿಕೊಂಡಿತ್ತು. ಅವಧಿ ಮೀರಿದ ಬೀಜ ವಿತರಣೆಯಾಗಿದ್ದರೆ ನೂರಾರು ಎಕರೆ ಫಸಲು ನಷ್ಟದ ಜತೆಗೆ ರೈತರ ಶ್ರಮ ಬಂಡವಾಳ ಎಲ್ಲವೂ ನಷ್ಟವಾಗುತಿತ್ತು’ ಎಂದರು.

ಈ ಸಂಬಂಧ ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ಧ ಅಗತ್ಯ ತನಿಖೆ ನಡೆಸುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-40-111965817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.