ಮಂಡ್ಯ: ‘ಕೈಗಾರಿಕಾ ಪ್ರದೇಶಾಭಿವೃದ್ಧಿ ಮಾಡುವ ನೆಪದಲ್ಲಿ ರೈತರ ಜೀವನೋಪಾಯಕ್ಕಿರುವ ತುಂಡು ಜಮೀನನ್ನು ಕಿತ್ತುಕೊಳ್ಳುವುದನ್ನು ಕೈಬಿಟ್ಟು, ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು’ ಎಂದು ಮದ್ದೂರು, ಮಂಡ್ಯ ತಾಲ್ಲೂಕಿನ ರೈತರು ಸಭೆ ಬಹಿಷ್ಕರಿಸಿ ಹೊರನಡೆದರು.

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾಧಿಕಾರಿ ಕುಮಾರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ಕರೆಯಲಾಗಿತ್ತು.

ಮಂಡ್ಯ ತಾಲ್ಲೂಕಿನ ನೊದೆಕೊಪ್ಪಲು, ಎಲೆಚಾಕನಹಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ಕುದರಗುಂಡಿ ಹಾಗೂ ಅಕ್ಕಪಕ್ಕದ ರೈತರ ಜೊತೆ ನಡೆದ ಸಭೆಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಬಾರದೆಂದು ಎಲ್ಲರೂ ಹೊರನಡೆದು, ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ಹಲವು ರೈತಪರ ಸಂಘಟನೆಗಳು ರೈತರ ಪರವಾಗಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಜಮೀನು ಉಳಿಸಿಕೊಡುವಂತೆ ಆಗ್ರಹಿಸಿದರು.

‘ಮದ್ದೂರು ತಾಲ್ಲೂಕಿನ ಕುದುರುಗುಂಡಿ ಸ.ನಂ.245ರಲ್ಲಿ 109 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಶಪಡಿಸಿಕೊಳ್ಳಲು ಹೊರಟಿರುವ ಕ್ರಮ ಸರಿಯಿಲ್ಲ. ಈ ಭಾಗದಲ್ಲಿ ಹಳ್ಳಿಗಳನ್ನು ಸ್ಥಾಪಿಸಲು ಬಡ ಕೂಲಿಕಾರರು, ದಲಿತರು ವಲಸೆ ಬಂದಾಗ ಸರ್ಕಾರ ಬಡ ರೈತರಿಗೆ ಜೀವನ ಮಾಡುವ ಉದ್ದೇಶಕ್ಕಾಗಿ ಸರ್ಕಾರ ಜಮೀನು ನೀಡಿದೆ. ಈ ಜಮೀನಿನಲ್ಲಿ ಜೀವನೋಪಾಯಕ್ಕೆಂದು ಆಹಾರ ಧಾನ್ಯಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಆ ಜೀವನವನ್ನೇ ಕಸಿದುಕೊಳ್ಳಲು ಹೊರಟಿರುವುದು ಯಾವ ನ್ಯಾಯ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಲ್. ಭರತ್ರಾಜ್ ಪ್ರಶ್ನಿಸಿದರು.

‘ನೊದೆಕೊಪ್ಪಲು ಹಾಗೂ ಎಲೆಚಾಕನಹಳ್ಳಿ ಗ್ರಾಮದ ರೈತರು ಸಭೆಯನ್ನು ಬಹಿಷ್ಕರಿಸಿ ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ. ಈ ಹಿಂದೆಯೂ ಮೂರು ಬಾರಿ ಚರ್ಚೆ ಮಾಡಿದ್ದೆವು. ಅಲ್ಲಿ ಪ್ರತಿಯೊಬ್ಬರೂ ಜಮೀನು ಕೊಡುವುದಿಲ್ಲ ಎಂದು ಮೈಸೂರು ಕೆಐಎಡಿಬಿ ಕಚೇರಿಗೆ ರೈತರು ಭೂ ಸ್ವಾಧೀನಾಧಿಕಾರಿಗಳ ಮುಂದೆ ಲಿಖಿತ ಬರವಣಿಗೆ ನೀಡಿದ್ದೇವೆ’ ಎಂದು ಆರೋಪಿಸಿದರು.

ವಿವಿಧ ಗ್ರಾಮದ ಮುಖಂಡರಾದ ಮಹದೇವು, ಸಿದ್ದಯ್ಯ, ಪುನೀತ್, ಶ್ರೀನಿವಾಸ್, ಬಿ.ಕುಮಾರ್, ರೆಡ್ಡಿ ಗೋಪಾಲ್, ಸತೀಶ್, ದಿನೇಶ್, ಸಂತೋಷ್, ರವಿ, ಪಾಪ,ಶ್ರೀನಿವಾಸ್, ಲಿಖಿತ್ಗೌಡ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-40-1929904983

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.