ಮಂಡ್ಯ: ‘ನಗರಸಭೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಕೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ಪಾರದರ್ಶಕ ನಿಯಮ ರೂಪಿಸಬೇಕು ಮತ್ತು ಈ ನಿಯಮ ಎಲ್ಲರಿಗೂ ಅನ್ವಯವಾಗಬೇಕು’ ಎಂದು ಒತ್ತಾಯಿಸಿ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ನೇತೃತ್ವದಲ್ಲಿ ನಗರಸಭೆಗೆ ಮನವಿ ಸಲ್ಲಿಸಲಾಯಿತು.

‘ಫ್ಲೆಕ್ಸ್ ಅಳವಡಿಕೆಯ ಇಡೀ ಪ್ರಕ್ರಿಯೆಯನ್ನು ಆನ್ಲೈನ್ ಗೆ ಒಳಪಡಿಸಬೇಕು. ನಿರ್ದಿಷ್ಟ ಜಾಹೀರಾತಿಗೆ ಅನುಮತಿ ನೀಡಿದ ಮೇಲೆ ಅದನ್ನು ತೆರವುಗೊಳಿಸುವ ಜವಾಬ್ದಾರಿ ಅಳವಡಿಸಿದವರಿಗೆ ವಹಿಸಿ ಕ್ಯೂ.ಆರ್. ಕೋಡ್ ನಮೂದಿಸಬೇಕು. ಕರ್ತವ್ಯ ಲೋಪ ಎಸಗಿದ ನಗರಸಭೆ ಸಿಬ್ಬಂದಿ ವಿರುದ್ದ ಅಗತ್ಯ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಯಾವುದೇ ವಿದ್ಯುತ್ ಕಂಬಗಳಿಗೆ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ಫ್ಲೆಕ್ಸ್ ಅಳವಡಿಕೆಗೆ ಕಡ್ಡಾಯವಾಗಿ ನಿಷೇಧ ಹೇರಬೇಕು’ ಎಂದು ಮನವಿ ಮಾಡಿದರು.

‘ಮಂಡ್ಯ ಜಿಲ್ಲೆಯ ಪ್ರತಿಭೆ ಗಾಯಕ ನವೀನ್ ಸಜ್ಜು ನಾಯಕರಾಗಿ ಅಭಿನಯಿಸಿದ್ದ ‘ಲೋ ನವೀನ’ ಸಿನಿಮಾವನ್ನು ಪ್ರೋತ್ಸಾಹಿಸಲು ಅಭಿಮಾನಿಗಳು ಅಳವಡಿಸಿದ್ದ ಫ್ಲೆಕ್ಸ್ ಗಳನ್ನು ನಗರಸಭೆ ಸಿಬ್ಬಂದಿ ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ. ರಾಜಕಾರಣಿಗಳು, ವಾಣಿಜ್ಯ ಜಾಹೀರಾತುಗಳ ಮೇಲೆ ಜಾರಿಯಾಗದ ನಿಯಮ ಕನ್ನಡ ಸಿನಿಮಾದ ಮೇಲೆ ಪ್ರಯೋಗಿಸಿರುವುದು ಸರಿಯಾದ ಕ್ರಮವಲ್ಲ’ ಎಂದು ಖಂಡಿಸಿದ್ದಾರೆ.

ನಗರಸಭೆ ವ್ಯವಸ್ಥಾಪಕಿ ಕಲ್ಪಶ್ರೀಯವರಿಗೆ ಮನವಿ ಸಲ್ಲಿಸಲಾಯಿತು. ರಾಜೇಂದ್ರ ಬಾಬು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ. ಜಯರಾಂ, ಆಟೋ ವೆಂಕಟೇಶ್, ಸೋಮಶೇಖರ್, ನವೀನ್ ಸಜ್ಜು ಅಭಿಮಾನಿ ಬಳಗದ ನವೀನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-40-1627728721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.