ಮಂಡ್ಯ: ‘ಶುದ್ಧ ಆಹಾರ ಕೊಡುತ್ತಿಲ್ಲ. ಭೇದಿ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಕೆಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಔಷಧವನ್ನೂ ಕೊಡಿಸುತ್ತಿಲ್ಲ. ನಮ್ಮ ನೋವು ಕೇಳುವವರೇ ಇಲ್ಲ’ ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಮುಂದೆ ಅಳಲು ತೋಡಿಕೊಂಡರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ, ನಗರದ ಬಂದೀಗೌಡ ಬಡಾವಣೆಯಲ್ಲಿ ಇರುವ ಎರಡು ಹಾಸ್ಟೆಲ್ಗಳಿಗೆ ಉಪಲೋಕಾಯುಕ್ತರು ಶುಕ್ರವಾರ ದಿಢೀರ್ ಭೇಟಿ ನೀಡಿದ ವೇಳೆ ಅವ್ಯವಸ್ಥೆ ಕಣ್ಣಿಗೆ ರಾಚಿತು.

ಗಾಳಿ–ಬೆಳಕು ಬಾರದ, ಕಿರಿದಾದ ಕೊಠಡಿಗಳುಳ್ಳ ಎರಡಂತಸ್ತಿನ ಬಾಡಿಗೆ ಮನೆಯೊಂದರಲ್ಲಿ 100 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿರು
ವುದನ್ನು ಕಂಡು, ಅಧಿಕಾರಿಗಳು ಮತ್ತು ವಾರ್ಡನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಓದು, ನಿದ್ದೆ, ಊಟ, ವಿಶ್ರಾಂತಿ ಎಲ್ಲವೂ ಹಾಸಿಗೆ ಮೇಲೆಯೇ ನಡೆಯಬೇಕು. ಪ್ರತ್ಯೇಕ ಸ್ಥಳವಿಲ್ಲ. ಸ್ನಾನಕ್ಕೆ ಬಿಸಿ ನೀರಿಲ್ಲ. 3–4 ಶೌಚಾಲಯಗಳಷ್ಟೇ ಇವೆ. ಹರಿದ ಹಾಸಿಗೆ, ದಿಂಬುಗಳೇ ಗತಿಯಾಗಿವೆ. ಸಣ್ಣ ಬಲ್ಬ್ ಬೆಳಕಿನಲ್ಲೇ 10–15 ಮಂದಿ ಓದಬೇಕು’ ಎಂದು ವಿದ್ಯಾರ್ಥಿನಿಯರು ದೂರಿದರು.

ಅರಳುವ ಮನಸ್ಸನ್ನು ಬಾಡಿಸಬೇಡಿ: ನಂತರ ಮಾತನಾಡಿದ ಉಪ ಲೋಕಾಯುಕ್ತರು, ‘ಒಂದು ವರ್ಷ ದಿಂದ ವಿದ್ಯಾರ್ಥಿನಿಯರು ಜೈಲಿಗಿಂತ ಕಡೆಯಾದ ವಾತಾವರಣ ದಲ್ಲಿದ್ದಾರೆ. ಹಾಸ್ಟೆಲ್ಗಳನ್ನು ಕಳಪೆಯಾಗಿ ನಿರ್ವಹಿಸಿ, ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಹೆಸರಿಗೆ ಅಧಿಕಾರಿಗಳು ಕಳಂಕ ತರುತ್ತಿದ್ದಾರೆ’ ಎಂದರು.

‘ಮಕ್ಕಳನ್ನು ಹೀಗೆ ಶೋಷಿಸಿದರೆ ವ್ಯವಸ್ಥೆ ಬಗ್ಗೆ ದ್ವೇಷ, ಆಕ್ರೋಶ ಹೆಚ್ಚಾಗುತ್ತದೆ. ಅರಳುವ ಮನಸುಗಳು ಕಮರಿ ಹೋಗುತ್ತವೆ’ ಎಂದೂ ಬೇಸರ ವ್ಯಕ್ತಪಡಿಸಿದರು.

‘ಬಾಲಕಿಯರು ಕೆಟ್ಟ ವಾತಾವರಣ ದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಬದುಕು ತ್ತಿದ್ದಾರೆ. ಬಾಲಕರಾಗಿದ್ದರೆ ದೊಡ್ಡ ಗದ್ದಲವನ್ನೇ ಮಾಡುತ್ತಿದ್ದರು. 15 ದಿನದೊಳಗೆ ವಿಶಾಲವಾದ ಹಾಸ್ಟೆಲ್ಗೆ ವಿದ್ಯಾರ್ಥಿನಿಯರನ್ನು ಸ್ಥಳಾಂತರಿಸಬೇಕು. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನಿಗಾ ಇಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.