ಮಂಡ್ಯ: ಜಿಲ್ಲೆಯಲ್ಲಿ ಒಟ್ಟು 1,808 ಸರ್ಕಾರಿ ಶಾಲೆಗಳಿದ್ದು, 1,328 ಶಾಲೆಗಳಿಗೆ ಮಾತ್ರ ಭೂದಾಖಲೆಗಳು ಸಮರ್ಪಕವಾಗಿವೆ. ಆದರೆ 480 ಶಾಲೆಗಳಿಗೆ ಆಸ್ತಿ ನೋಂದಣಿ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದೆ.

ಕೆಲವು ಸರ್ಕಾರಿ ಶಾಲೆಗಳ ಜಾಗ ಇಂದಿಗೂ ದಾನ ಕೊಟ್ಟವರ ಹೆಸರಿನಲ್ಲಿಯೇ ಇವೆ. ಹಕ್ಕುಪತ್ರ ಇಲ್ಲದಿದ್ದರೆ ಜಾಗವನ್ನು ದಾನ ಕೊಟ್ಟ ಕುಟುಂಬಸ್ಥರು ‘ಶಾಲೆ ಮುಚ್ಚಿದೆ’ ಎಂಬ ನೆಪವೊಡ್ಡಿ ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗುತ್ತಿರುವ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬಂದಿವೆ. ಪೂರ್ವಿಕರು ಕೊಟ್ಟ ಜಾಗ ನಮಗೆ ಸೇರಿದ್ದು ಎಂದು ಕೆಲವು ಕುಟುಂಬಗಳ ಮಕ್ಕಳು ಮತ್ತು ಮೊಮ್ಮಕ್ಕಳು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

ಕೆಲವು ಸರ್ಕಾರಿ ಶಾಲೆಗಳ ಪಹಣಿಗಳಲ್ಲಿ ಕೆರೆ–ಕಟ್ಟೆ, ಗೋಮಾಳಗಳ ಹೆಸರುಗಳಿವೆ. ಕೆಲವು ಪಹಣಿಗಳಲ್ಲಿ ‘ಸರ್ಕಾರ’ ಎಂದು ಇದೆ. ಭೂದಾಖಲೆಗಳು ಸಮರ್ಪಕವಾಗಿ ಇಲ್ಲದಿದ್ದರೆ ಆ ಜಾಗವನ್ನು ಕಬಳಿಸಲು ಖಾಸಗಿ ವ್ಯಕ್ತಿಗಳು ಹೊಂಚು ಹಾಕುತ್ತಾರೆ. ಹೀಗಾಗಿ ಎಲ್ಲ ಸರ್ಕಾರಿ ಶಾಲೆಗಳ ಜಾಗಗಳು ಆಯಾಯ ಶಾಲೆಯ ಹೆಸರಿನಲ್ಲೇ ಆಸ್ತಿ ನೋಂದಣಿಯಾಗುವುದು ಅತ್ಯಗತ್ಯ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನವಾದ ಜಮೀನುಗಳ ಮಾಲೀಕರಿಗೆ ಕೋಟ್ಯಂತರ ರೂಪಾಯಿ ಪರಿಹಾರ ಸಿಕ್ಕಿದೆ. ಹೀಗಾಗಿ ಹೆದ್ದಾರಿ ಅಕ್ಕಪಕ್ಕದ ಸರ್ಕಾರಿ ಶಾಲೆಗಳಿಗೆ ಜಾಗ ನೀಡಿದ ದಾನಿಗಳ ಕುಟುಂಬಸ್ಥರು ‘ನಮ್ಮ ಜಮೀನು ನಮಗೆ ಬಿಟ್ಟುಕೊಡಿ’ ಎಂದು ತಗಾದೆ ತೆಗೆದಿದ್ದಾರೆ.

ಆಸ್ತಿ ಸಂರಕ್ಷಣಾ ಅಭಿಯಾನ: ‘ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಾಗ, ನಿವೇಶನ ಮತ್ತು ಕಟ್ಟಡಗಳ ಆಸ್ತಿಗಳನ್ನು ಆಯಾಯ ಸರ್ಕಾರಿ ಶಾಲೆಗಳ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ‘ಸರ್ಕಾರಿ ಶಾಲಾ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿ ಸಂರಕ್ಷಣಾ ಅಭಿಯಾನ’ವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಮುಚ್ಚಿರುವ ಶಾಲೆಗಳು ಸೇರಿದಂತೆ ಎಲ್ಲ ಸರ್ಕಾರಿ ಶಾಲೆಗಳ ಆಸ್ತಿಗಳ ವಿವರವನ್ನು ನಮೂದಿಸಲು ಮತ್ತು ದಾಖಲೆ ಸಲ್ಲಿಸಲು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಡಿಡಿಪಿಐ ಜಿ.ಎ.ಲೋಕೇಶ್ ತಿಳಿಸಿದ್ದಾರೆ.

ಶಾಲೆಯ ಮುಖ್ಯಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರಿ ಶಾಲೆಗಳನ್ನು ನೋಂದಣಿ ಮಾಡಿಸಲು ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಡಿಒಗಳಿಗೆ ಮನವಿ ಸಲ್ಲಿಸಿದ್ದಾರೆ.

‘ಎರಡು ತಿಂಗಳಿಂದ ಇ–ಸ್ವತ್ತು ಸರ್ವರ್ ಸಮಸ್ಯೆಯಿಂದಾಗಿ ಶಾಲೆಗಳ ಆಸ್ತಿ ನೋಂದಣಿ ವಿಳಂಬವಾಗಿದೆ. ಆರ್ಟಿಸಿ ನಮ್ಮ ಹಿರಿಯರ ಹೆಸರಿನಲ್ಲಿದೆ ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಭೂಮಾಪಕರು ಎರಡು ತಿಂಗಳಿಂದ ಮುಷ್ಕರದಲ್ಲಿ ನಿರತರಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಖಾತೆ ಮಾಡಿಸಿಕೊಳ್ಳಲು ತೊಡಕಾಗಿದೆ’ ಎಂದು ಮುಖ್ಯಶಿಕ್ಷಕರು ಸಮಸ್ಯೆ ತೋಡಿಕೊಂಡರು.

ಶಾಲೆಗಳ ಪಹಣಿಗಳಲ್ಲಿ ಕೆರೆ–ಕಟ್ಟೆ, ಗೋಮಾಳಗಳ ಹೆಸರು

ಕೆಲವು ಪಹಣಿಗಳಲ್ಲಿ ‘ಸರ್ಕಾರ’ ಎಂದು ನಮೂದು

ಕೋರ್ಟ್ ಮೊರೆ ಹೋದ ಭೂದಾನಿಗಳ ಕುಟುಂಬ ಸದಸ್ಯರು

351 ಶಾಲೆಗಳ ಸಂರಕ್ಷಣೆಯೇ ಸವಾಲು

ಮಂಡ್ಯ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಕನ್ನಡ ಮಾಧ್ಯಮದ 351 ಶಾಲೆಗಳು ಬಾಗಿಲು ಮುಚ್ಚಿವೆ. ಶೂನ್ಯ ದಾಖಲಾತಿ ಕಾರಣದಿಂದ ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಈ ಶಾಲೆಗಳ ಆಸ್ತಿಯನ್ನು ಸಂರಕ್ಷಣೆ ಮಾಡುವುದೇ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ.

‘ಬಾಗಿಲು ಮುಚ್ಚಿದ ಶಾಲೆಗಳ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವರು ದನ ಕಟ್ಟಲು, ವಾಹನಗಳ ಪಾರ್ಕಿಂಗ್, ವ್ಯಾಪಾರ ಮುಂತಾದ ಕಾರಣಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಇಂಥ ಶಾಲೆಗಳ ಕಟ್ಟಡಗಳು ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ ಎಂಬ ದೂರು ಕೇಳಿಬಂದಿದೆ. ಅತಿಕ್ರಮ ಪ್ರವೇಶ ತಡೆಗಟ್ಟಿ, ಈ ಜಾಗಗಳನ್ನು ಇಲಾಖೆಯು ಸಂರಕ್ಷಣೆ ಮಾಡಬೇಕು’ ಎಂದು ರೈತ ಸಂಘದ ಮುಖಂಡರು ಮತ್ತು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.

ತುರ್ತು ಕ್ರಮಕ್ಕೆ ಆಯುಕ್ತರ ನಿರ್ದೇಶನ

ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ ಅಧಿನಿಯಮ 2026ರಂತೆ ರಾಜ್ಯ ಸರ್ಕಾರದ ಸರ್ಕಾರಿ ಶಾಲಾ–ಕಾಲೇಜುಗಳು ಕನಿಷ್ಠ 12 ವರ್ಷಗಳಿಂದ ನಿರಂತರವಾಗಿ ಬಳಸುತ್ತಿರುವ ಭೂಮಿಯು ಎಲ್ಲ ಹಕ್ಕು ದಾವೆಗಳು ಮತ್ತು ಬಾಧ್ಯತೆಗಳಿಂದ ಮುಕ್ತಗೊಂಡು ರಾಜ್ಯ ಸರ್ಕಾರದ ಪರವಾಗಿ ನಿಹಿತವಾಗಿರುವುದಾಗಿ ಪರಿಗಣಿಸಲಾಗುತ್ತದೆ ಎಂದು ಕಂದಾಯ ಆಯುಕ್ತರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಸರ್ಕಾರಿ ಶಾಲೆಯ ಹೆಸರನ್ನು ಭೂದಾಖಲೆಗಳಲ್ಲಿ ದಾಖಲಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಮತ್ತು ಅತಿಕ್ರಮಣ ಅಥವಾ ಅನಧಿಕೃತ ಬಳಕೆ ಕಂಡುಬಂದಲ್ಲಿ ಜಿಲ್ಲಾಡಳಿತದ ಮೂಲಕ ನಿಯಮಾನುಸಾರ ಅಗತ್ಯ ಕ್ರಮವಹಿಸಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ತುರ್ತಾಗಿ ವರದಿ ಸಲ್ಲಿಸಲು ಆದೇಶಿಸಿದ್ದಾರೆ.

ಆಸ್ತಿ ನೋಂದಣಿಗೆ ಬಾಕಿ ಇರುವ ಶಾಲೆಗಳ ವಿವರ

ತಾಲ್ಲೂಕು;ನೋಂದಣಿ;ಬಾಕಿ

ಕೆ.ಆರ್.ಪೇಟೆ;223;100

ಮದ್ದೂರು;196;37

ಮಳವಳ್ಳಿ;210;45

ಮಂಡ್ಯ ಉತ್ತರ;116;55

ಮಂಡ್ಯ ದಕ್ಷಿಣ;86;51

ನಾಗಮಂಗಲ;141;65

ಪಾಂಡವಪುರ;246;101

ಶ್ರೀರಂಗಪಟ್ಟಣ;110;26

ಒಟ್ಟು;1328;480

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.