ಮಂಡ್ಯ: ‘ರಾಜ್ಯದ ಗ್ರಾಮ ಪಂಚಾಯಿತಿಗಳ ಕುಡಿಯುವ ನೀರು ಸರಬರಾಜು ಘಟಕ ಮತ್ತು ಬೀದಿ ದೀಪಗಳಿಗೆ ಮೀಟರ್ ಅಳವಡಿಸಿ, ಬಳಕೆಯಾದ ಯುನಿಟ್ಗಳಿಗೆ ಮಾತ್ರ ಬಿಲ್ ನೀಡುವ ವ್ಯವಸ್ಥೆ ಜಾರಿಯಾಗಬೇಕು’ ಎಂದು ಕರ್ನಾಟಕ ರಾಜ್ಯ ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೀಟರ್ ಅಳವಡಿಸದೆ ವಿದ್ಯುತ್ ಬಿಲ್ ನೀಡಬಾರದು ಎಂದು ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ನಿಯಂತ್ರಣ ಆಯೋಗ ಆದೇಶಿಸಿದ್ದರೂ, ಎಸ್ಕಾಂಗಳು ಮೀಟರ್ ಅಳವಡಿಸದೆ ಅಂದಾಜು ಲೆಕ್ಕಚಾರದಲ್ಲಿ ವಿದ್ಯುತ್ ಬಿಲ್ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಗ್ರಾ.ಪಂ.ಗಳಲ್ಲಿ 2015ರಿಂದ 2023ರವರೆಗೆ ಬಾಕಿ ಇರುವ ₹5,257 ಕೋಟಿ ಮೊತ್ತವನ್ನು 2024ರಲ್ಲಿ ಖಾತರೀಕರಣದ ಮೂಲಕ ಸರ್ಕಾರ ತೀರುವಳಿ ಮಾಡಲು ಮತ್ತು ಬಡ್ಡಿ ಮೊತ್ತ ₹1,252 ಕೋಟಿಯನ್ನು ಮನ್ನಾ ಮಾಡಲು ಆದೇಶಿಸಿದೆ. ಆದರೆ, ಎಸ್ಕಾಂಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಕಿಯನ್ನು ವಾಸ್ತವವಾಗಿ ಶೂನ್ಯಗೊಳಿಸಲಿಲ್ಲ. ಬದಲಾಗಿ ಮುಕ್ತಾಯಗೊಳಿಸಬೇಕಾದ ಬಾಕಿಗಳಿಗೂ ಬಡ್ಡಿ ಮತ್ತು ದಂಡ ವಿಧಿಸಲಾಗಿದೆ ಎಂದು ದೂರಿದರು.

ಗ್ರಾಮಸ್ಥರಿಗೆ ತುರ್ತಾಗಿ ಕುಡಿಯುವ ನೀರು ಪೂರೈಸಲು ಕೊಳವೆಬಾವಿ ಕೊರೆಸಿ, ವಿದ್ಯುತ್ ಸಂಪರ್ಕ ಮಾಡಿಸಿಕೊಂಡು ಗ್ರಾಮಗಳಿಗೆ ಕುಡಿಯುವ ನೀರನ್ನು ಪಂಚಾಯಿತಿಗಳು ಪೂರೈಸುತ್ತಿವೆ. ಆದರೆ ವಿದ್ಯುತ್ ಜಾಗೃತ ದಳದವರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದೀರಿ ಎಂದು ಗ್ರಾ.ಪಂ.ಗಳಿಗೆ ದಂಡ ವಿಧಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇದನ್ನು ಬೆಂಬಲಿಸಿ, ತಮ್ಮ ತಪ್ಪನ್ನು ಗ್ರಾಮ ಪಂಚಾಯಿತಿಗಳ ಮೇಲೆ ಹಾಕುತ್ತಿದ್ದಾರೆ ಎಂದು ದೂರಿದರು.

ಜಿ.ಪಂ. ಸಿಇಒ ಅವರು ಸೆಸ್ಕ್ ಅಧಿಕಾರಿಗಳ ಜತೆ ಕುಳಿತು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ನೀರು ಸರಬರಾಜು ಯೋಜನೆಗಳ ಸ್ಥಾವರ, ಬೀದಿ ದೀಪಗಳಿಗೆ ಮೀಟರ್ ಅಳವಡಿಸಬೇಕು. ಬೆಳಗಾವಿ ಜಿ.ಪಂ.ನಂತೆ ಇಂಧನ ಲೆಕ್ಕಪರಿಶೋಧನೆ ಮಾದರಿ ಹಾಗೂ ದಾವಣಗೆರೆ ಜಿ.ಪಂ, ಹೊನ್ನಾಳಿ ತಾಲ್ಲೂಕು ಸಮನ್ವಯ ಮಾದರಿಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಒಕ್ಕೂಟ ರಾಜ್ಯ ಸಂಚಾಲಕ ನಾಗೇಶ್, ಜಿಲ್ಲಾಧ್ಯಕ್ಷ ಪ್ರದೀಪ್ಕುಮಾರ್, ಎಂ.ಚಾಮರಾಜು, ಎಸ್.ಸುವರ್ಣವ, ಅರ್ಪಿತ, ಕೆಂಪರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-40-1377542905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.