ಕಿಕ್ಕೇರಿ: ಮಳೆಗಾಗಿ ಪ್ರಾರ್ಥಿಸಿ ಕೆರೆಕಟ್ಟೆ ತುಂಬುವಂತೆ ವರುಣದೇವರಲ್ಲಿ ಮೊರೆ ಇಟ್ಟು ಗುರುವಾರ ರಾತ್ರಿ ಹೋಬಳಿಯ ಗೂಡೇಹೊಸಹಳ್ಳಿ ಗ್ರಾಮದ ರೈತಾಪಿ ಜನತೆ ತಿಂಗಳ ಮಾಮನ(ಸೂರ್ಯ-ಚಂದ್ರ) ಮದುವೆಯನ್ನು ಗುರುವಾರ ರಾತ್ರಿ ಆಚರಿಸಿದರು.

ಗ್ರಾಮದಲ್ಲಿನ ಮಕ್ಕಳನ್ನು ವಾರದಿಂದ ಒಂದೆಡೆ ಕಲೆ ಹಾಕಿ ಮಳೆರಾಯ ಬರಲು ಜಾನಪದ ನಂಬುಗೆಯ ಮದುವೆ ಶಾಸ್ತ್ರ ಮಾಡಲು ಮುಂದಾದರು. ಮಕ್ಕಳನ್ನು ದೇವರಂತೆ ಪ್ರಾರ್ಥಿಸಿಕೊಂಡು ತಿಂಗಳ ಮಾಮನ ಮದುವೆ ನೆರವೇರಿಸಿದರೆ ಮಳೆ ತಪ್ಪದೆ ಬರಲಿದೆ ಎಂದು ಮದುವೆ ಶಾಸ್ತ್ರದ ವಿವಿಧ ಕಾರ್ಯಗಳಿಗೆ ಅಣಿಯಾದರು.

ಮದುವೆಗಾಗಿ ವರ ಹಾಗೂ ವಧುವಾಗಿ ಇಬ್ಬರನ್ನು ಗಂಡು ಮಕ್ಕಳನ್ನೆ ಗ್ರಾಮ ಮುಖಂಡರು ಹುಡುಕಾಡಿ ಆಯ್ಕೆ ಮಾಡಿಕೊಂಡರು. ವರವಾದ ಸೂರ್ಯದೇವನಾಗಿ ಕುಶಾಲ್, ಮಧುಮಗಳಾದ ಚಂದ್ರಮತಿಯಂತೆ ವಿಶಿತ್ರನ್ನು ವಧು–ವರರಾಗಿ ಸಜ್ಜುಗೊಳಿಸಿದರು. ಕುಶಾಲ್ಗೆ ಮೈಸೂರು ಪೇಟ, ಬಿಳಿ ಷರ್ಟು, ಕಚ್ಚೆ ತೊಡಿಸಿದರೆ, ವಿಶಿತ್ಗೆ ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಶೃಂಗರಿಸಿದರು.

ವರನ ಕಡೆಯಿಂದ ಕೌಶಲ್ಯಾ ನಾಗೇಶ್ ಹಾಗೂ ವಧುವಿನ ಕಡೆಯಿಂದ ಭಾರತಿ ಲೋಕೇಶ್ ತಿಂಗಳ ಮಾಮನ ಮದುವೆಗೆ ಸಾರಥ್ಯ ವಹಿಸಿದರು. ವಿವಾಹಕ್ಕೂ ಮುನ್ನ ವಾರದಿಂದ ಗ್ರಾಮದ ಪ್ರತಿಮನೆಗಳಿಗೆ ತೆರಳಿದ ಮಕ್ಕಳು ಮನೆ ಮನೆಗಳಲ್ಲಿ ಕೇಳಿ ರೊಟ್ಟಿ ಹಿಟ್ಟನ್ನು ತಂದರು. ಎಲ್ಲವನ್ನು ಒಂದೆಡೆ ಕಲೆಹಾಕಿ ನೀರಿನಿಂದ ಕಲೆಸಿ ಹದವಾಗಿ ರೊಟ್ಟಿ ತಯಾರಿಸಿದರು. 9 ದಿನಗಳ ಕಾಲ ನಡೆದ ಮದುವೆ ಶಾಸ್ತ್ರದಲ್ಲಿ ದಿನಕ್ಕೊಂದು ರೊಟ್ಟಿಯಂತೆ 9 ರೊಟ್ಟಿ ಹಾಗೂ 9 ಸಿಹಿ ಹೋಳಿಗೆ ತಯಾರಿಸಲಾಯಿತು.

ರೊಟ್ಟಿಯ ಮೇಲೆ ನಿತ್ಯವೂ ಚಂದಿರನ ಚಿತ್ತಾರ ಬಿಡಿಸಿದರು. ಕಲೆ ಹಾಕಿದ್ದ ರೊಟ್ಟಿಗಳನ್ನು ಮದುವೆಯ ದಿನದಂದು ಮಕ್ಕಳು ಪೈಪೋಟಿಯಲ್ಲಿ ಪರಸ್ಪರ ಕಸಿಯಲು ಯತ್ನಿಸಿದರು. ಅಂತಿಮವಾಗಿ ಒಂದೆಡೆ ಕಲೆತು ಮಳೆರಾಯನ ಕುರಿತು ಹಾಡಿದರು. ನೃತ್ಯ ಮಾಡಿ ‘ಬಾರೋ ಮಳೆರಾಯ’ ಎಂದು ಮಳೆರಾಯನ ಕರೆದರು. ಪರಸ್ಪರ ನೀರು ಎರಚಾಡಿ ಸಂಭ್ರಮಿಸಿದರು. ಊರಿನ ಗ್ರಾಮಸ್ಥರು ಮಕ್ಕಳಿಗೆ ಸಾಥ್ ನೀಡಿ ಮಕ್ಕಳೊಂದಿಗೆ ತಾವು ನೃತ್ಯ ಮಾಡಿದರು.

ಗ್ರಾಮದಲ್ಲಿ ಮದುವೆ ಸಮಾರಂಭದಂತೆ ನಗುನಗುತ್ತ ವರಪೂಜೆ, ಬಳೆ, ಮಾಂಗಲ್ಯ ಶಾಸ್ತ್ರ ಸೇರಿದಂತೆ ವಿವಿಧ ಶಾಸ್ತ್ರಗಳನ್ನು ಆಚರಿಸಿ ವಿವಾಹ ಸಂಭ್ರಮವನ್ನು ಸವಿದರು. ಬಿಜುಗಿನ ಪೆಟ್ಟಿಗೆಯನ್ನು ಮಹಿಳೆಯರು ತಲೆಮೇಲೆ ಒತ್ತುಕೊಂಡು ಗಂಡು ಹೆಣ್ಣಿನ ಪರವಾಗಿ ಮುಖಂಡರೊಂದಿಗೆ ಆಂಜನೇಯ ದೇಗುಲದಿಂದ ವೆಂಕಟೇಶ್ವರ ದೇಗುಲದವರಿಗೆ ಮೆರವಣಿಗೆಯಲ್ಲಿ ಸಾಗಿದರು.

ಬಾವಿ ಮನೆ ಕುಮಾರ್, ನಾಗೇಶ್, ಜಿ.ಬಿ. ನಾಗೇಶ್, ರೇಣುಕಾ, ಜಯಮ್ಮ, ಭಾರತಿ, ಬೇಬಿ, ಲಕ್ಷ್ಮಮ್ಮ, ಶಾಂತಮ್ಮ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-40-1163529721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.