ಮಂಡ್ಯ: ‘ತಾಲ್ಲೂಕಿನ ಗುತ್ತಲು– ಯತ್ತಗದಹಳ್ಳಿ ಕೆರೆಗೆ ಸೇರ್ಪಡೆಯಾಗುತ್ತಿರುವ ಗಲೀಜು ನೀರನ್ನು ಕೂಡಲೇ ತಡೆಗಟ್ಟಬೇಕು. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣ ಕಾಮಗಾರಿಗೆ ₹40 ಕೋಟಿ ಮಂಜೂರಾಗಿದೆ. ಸಮರ್ಪಕವಾಗಿ ಕೆಲಸ ಮಾಡದಿದ್ದರೆ ನಿಮ್ಮ ಮನೆಯನ್ನು ಜಪ್ತಿ ಮಾಡಿಸುತ್ತೇನೆ’ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅವರು ನಗರಸಭೆ ಎಂಜಿನಿಯರುಗಳಿಗೆ ಎಚ್ಚರಿಕೆ ನೀಡಿದರು.

ಗುರುವಾರ ಬೆಳಿಗ್ಗೆ 7.30ಕ್ಕೆ ಕೆರೆ ಪ್ರದೇಶಕ್ಕೆ ಬಿ.ವೀರಪ್ಪ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೊಳಚೆ ನೀರು ಇನ್ನೂ ಕೆರೆಯ ಒಡಲು ಸೇರುತ್ತಿರುವುದನ್ನು ಕಂಡು ಕುಪಿತರಾದರು. ದುಡ್ಡು ಮಾತ್ರ ಕರಗಿ ಹೋಗುತ್ತಿದೆ, ಕೊಳಚೆ ನೀರು ಮಾತ್ರ ನಿಲ್ಲುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಒಳಚರಂಡಿ ನೀರು ಕೆರೆ ಸೇರುತ್ತಿರುವುದನ್ನು ಏಕೆ ತಡೆಗಟ್ಟಿಲ್ಲ? ಕೆರೆಯ ದಡದಲ್ಲಿ ತಿಪ್ಪೆಯ ರಾಶಿ ಹಾಕಲು ಏಕೆ ಬಿಟ್ಟಿದ್ದೀರಿ? ಕಾಲುವೆಗಳಿಗೆ ಕಸ, ಮಣ್ಣು ಸುರಿಯಲು ಬಿಟ್ಟವರಾರು? ಎಂದು ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಲ್ಲಿಯ ನೆರೆದಿದ್ದ ಗ್ರಾಮಸ್ಥರು ‘ಒಳಚರಂಡಿ ನೀರನ್ನು ತಡೆಗಟ್ಟಿದರೆ ಕೆರೆಯ ಕಳೆಗಿಡಗಳು ಒಣಗಿ ಹೋಗುತ್ತದೆ. ನಂತರ ಅದನ್ನು ತೆರವುಗೊಳಿಸಿ ಕಾಲುವೆ ಮೂಲಕ ಚಾನಲ್ ನೀರನ್ನು ಹರಿಸಬೇಕು’ ಎಂದು ಮನವಿ ಮಾಡಿದರು.

ಲಂಚ ತಿಂದರೆ ಶಾಪ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಮಂಡ್ಯ ಮತ್ತು ಮಳವಳ್ಳಿ ತಾಲೂಕಿನ ಬಾಕಿ ಇರುವ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಂಚ ತಿಂದರೆ ಅದು ನಿಮಗೆ ಶಾಪವಾಗಿ ಕಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

‘ನಮ್ಮ ಶ್ರಮದ ದುಡಿಮೆಯ ಅನ್ನ ಯಾವತ್ತೂ ಆರೋಗ್ಯಕರ. ಅದೇ ಅನ್ಯಾಯದ ಲಂಚದಿಂದ ತಿನ್ನುವ ಅನ್ನ ಋಣಾತ್ಮಕ ಶಕ್ತಿಯಿಂದ ಕೂಡಿರುತ್ತದೆ. ಲಂಚದಲ್ಲಿಯೇ ಜೀವನ ನಡೆಸಿದರೆ ಅದು ನಿಮ್ಮ ಕೊನೆಗಾಲದಲ್ಲಿ ಶಾಪವಾಗಿ ಬದಲಾಗುತ್ತದೆ. ನಿಮ್ಮ ಕುಟುಂಬದವರೇ ನಿಮ್ಮನ್ನು ತಿರಸ್ಕಾರ ಮಾಡುತ್ತಾರೆ’ ಎಂದು ಉಪವಿಭಾಗಾಧಿಕಾರಿಯೊಬ್ಬರ ಉದಾಹರಣೆ ಕೊಟ್ಟು ಹೇಳಿದರು.

ಹಣ ಪಡೆದು ಮತ ಹಾಕುವುದನ್ನು ನಿಲ್ಲಿಸಿ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ. ಜನಪ್ರತಿನಿಧಿಗಳು ನೆಟ್ಟಗೆ ಇದ್ದಿದ್ದರೆ ನಾನು ಸರ್ಕಾರಿ ಕಚೇರಿಗಳಿಗೆ ಹೋಗಿ ತಪಾಸಣೆ ಮಾಡುವ ಅಗತ್ಯವೇ ಬರುತ್ತಿರಲಿಲ್ಲ. ಕೆ.ಆರ್.ಪೇಟೆ ಪಟ್ಟಣದಲ್ಲಿ 18 ವರ್ಷದೊಳಗಿನ ಬಾಲಗರ್ಭಿಣಿಯರಿಗೆ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಲು ಅಕ್ರಮ ಸ್ಕ್ಯಾನಿಂಗ್ ಮಾಡಿದ ಪ್ರಕರಣದಲ್ಲಿ ಮೂವರು ವೈದ್ಯರನ್ನು ಬಂಧಿಸಲಾಗಿದೆ. ಹೆಣ್ಣಿಗೆ ಹೆಣ್ಣೇ ಶತ್ರುವಾಗಿದ್ದಾರೆ. ಮಹಿಳಾ ಅಧಿಕಾರಿಗಳು ಕೂಡ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಳವಳಕಾರಿ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಉಪಲೋಕಾಯುಕ್ತ ಬಿ.ವೀರಪ್ಪ ಅವರು ನ್ಯಾಯಮೂರ್ತಿಯಾಗಿ 30 ಸಾವಿರ ಪ್ರಕರಣ ಹಾಗೂ ಲೋಕಾಯುಕ್ತದಲ್ಲಿ 7 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳನ್ನು ವಿಲೇವಾರಿ ಮಾಡಿ ಜನರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆದು ನ್ಯಾಯವನ್ನು ಕೊಡಿಸಿದ್ದಾರೆ ಎಂದು ಹೇಳಿದರು.

ಲೋಕಾಯುಕ್ತ ಉಪ ನಿಬಂಧಕ ಅರವಿಂದ್, ಜಿಲ್ಲಾ ಪ್ರಧಾನ ನ್ಯಾಯಾಧೀಶ ಸುಬ್ರಹ್ಮಣ್ಯ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ, ಲೋಕಾಯುಕ್ತ ಎಸ್ಪಿ ಸುರೇಶ್ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-40-383835952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.