ಮಂಡ್ಯ: ‘ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನದಲ್ಲಿ ಸರ್ಕಾರಿ ರಸ್ತೆಗೆ ಅಕ್ರಮ ಪರಿಹಾರ ಪಡೆದವರು ಮತ್ತು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ’ ಎಂದು ಕರುನಾಡು ಸಂಘಟನೆಯ ಎಂ.ಬಿ. ನಾಗಣ್ಣಗೌಡ ಹೇಳಿದರು.

‘ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದನೂರು ಸ.ನಂ. 382/7ರಲ್ಲಿ ಮಂಡ್ಯ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿರ್ಮಿಸಿರುವ ಬ್ಯಾಂಕ್ ಕಾಲೊನಿ ರಸ್ತೆ ಸರ್ಕಾರಿ ಆಸ್ತಿಯಾಗಿದ್ದು, ನಿಯಮಬಾಹಿರವಾಗಿ ಹೆದ್ದಾರಿ ಪ್ರಾಧಿಕಾರಿಂದ ₹41.41 ಲಕ್ಷ ಅಕ್ರಮ ಪರಿಹಾರ ಪಡೆದಿರುವುದು ಸಾಬೀತಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಆರೋಪಿಸಿದರು.

ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ–275 ಬೆಂಗಳೂರು– ಮೈಸೂರು ವಿಭಾಗ ರಾಮನಗರ ಅವರಿಗೆ 2026 ಏ.21ರಂದು ಪತ್ರೆ ಜಿಲ್ಲಾಧಿಕಾರಿ ಕುಮಾರ ಪತ್ರ ಬರೆದಿದ್ದಾರೆ. ನಾಗರಿಕ ಸೌಲಭ್ಯಕ್ಕಾಗಿ ಮೀಸಲಿರಿಸಿದ್ದ ಜಾಗಕ್ಕೆ ಭೂಸ್ವಾಧೀನದ ಪರಿಹಾರ ಪಾವತಿಸುವ ಸಂದರ್ಭದಲ್ಲಿ ಬೂದನೂರು ಗ್ರಾ.ಪಂ.ಗೆ ಪರಿಹಾರ ಪಾವತಿಸದೇ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಮಂಡಳಿಗೆ ಕಾನೂನು ಬಾಹಿರವಾಗಿ ವರ್ಗಾಯಿಸಲಾಗಿದೆ. ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ವಿವರಿಸಿದರು.

ಸದರಿ ಅಕ್ರಮದಲ್ಲಿ ಅಂದಿನ ಪಿಡಿಒ ಅವರ ಕಾರ್ಯವೈಖರಿ ಪರಿಶೀಲಿಸಿ ಶಿಸ್ತುಕ್ರಮ ಜರುಗಿಸಲು ತಿಳಿಸಲಾಗಿದೆ. ಬೂದನೂರು ಗ್ರಾ.ಪಂ.ವ್ಯಾಪ್ತಿಯ ಕಂದಾಯ ಹಾಗೂ ಪಂಚಾಯಿತಿ ಖಾತೆಗಳಲ್ಲಿ ಈವರೆಗೆ ಪರಿಹಾರ ಪಡೆದಿರುವವರ ಪಟ್ಟಿ ಬಿಡುಗಡೆ ಮಾಡಬೇಕು. ಪರಿಹಾರಕ್ಕೂ ಮುನ್ನ ಮಾಡಿರುವ ಜಿಪಿಎಸ್ ಸ್ಯಾಟಲೈಟ್ ಸರ್ವೆ ದಾಖಲೆ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಗ್ರಾ.ಪಂ. ಮಾಜಿ ಸದಸ್ಯರಾದ ಬಿ.ಕೆ. ಸತೀಶ್, ಕುಳ್ಳಪ್ಪ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಶಶಿಕುಮಾರ್, ರಾಜೇಂದ್ರ, ಚಂದ್ರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-40-1943011428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.