ಮಂಡ್ಯ: ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 1068 ಶಿಶುಗಳು ಮತ್ತು 44 ತಾಯಂದಿರು ಮರಣ ಹೊಂದಿದ್ದಾರೆ. ಸಕಾಲದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂಬ ದೂರುಗಳಿಗೆ ಈ ಅಂಕಿಅಂಶಗಳು ಪುಷ್ಟಿ ನೀಡಿವೆ.

ಗ್ರಾಮೀಣ ಪ್ರದೇಶದ ತಾಯಂದಿರು ಮತ್ತು ಶಿಶುಗಳೇ ಹೆಚ್ಚು ಸಾವಿಗೀಡಾಗುತ್ತಿರುವುದು ಕಳವಳಕಾರಿ ಸಂಗತಿ. ಶಿಶುಗಳ ಸಾವಿಗೆ ಆರೋಗ್ಯ ಸೌಲಭ್ಯಗಳ ಕೊರತೆ, ಸಕಾಲದಲ್ಲಿ ಸಿಗದ ತುರ್ತು ಸೇವೆ, ಪೌಷ್ಟಿಕಾಂಶದ ಕೊರತೆ ಹಾಗೂ ನೈರ್ಮಲ್ಯ ಮತ್ತು ಸ್ವಚ್ಛ ನೀರಿನ ಕೊರತೆ ಪ್ರಮುಖ ಕಾರಣಗಳು ಎನ್ನಲಾಗಿದೆ.

ಹೆರಿಗೆಯಾದ ತಕ್ಷಣದ ರಕ್ತಸ್ರಾವ, ಗರ್ಭಾವಸ್ಥೆಯ ಸೋಂಕುಗಳು, ಅಧಿಕ ರಕ್ತದೊತ್ತಡ (ಹೈಪರ್ಟೆನ್ಷನ್), ಗ್ರಾಮೀಣ ಭಾಗದಲ್ಲಿ ಸಿಗದ ಆರೋಗ್ಯ ಸೇವೆ, ನಗರ ಮತ್ತು ಪಟ್ಟಣದಲ್ಲಿರುವ ಆಸ್ಪತ್ರೆಗಳಿಗೆ ಹಳ್ಳಿಗಳಿಂದ ಹೋಗಲು ಸಿಗದ ವಾಹನ ವ್ಯವಸ್ಥೆ ಮುಂತಾದ ಕಾರಣಗಳು ತಾಯಂದಿರ ಮರಣ ಪ್ರಮಾಣವನ್ನು ಹೆಚ್ಚಿಸಿವೆ.

ಕಳೆದ ನಾಲ್ಕು ವರ್ಷಗಳಿಂದ ಪ್ರತಿ ವರ್ಷ 200ಕ್ಕೂ ಅಧಿಕ ಶಿಶುಗಳು ಮೃತಪಟ್ಟಿವೆ. ಪ್ರಸಕ್ತ ವರ್ಷ 137ಕ್ಕೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿ. ಪ್ರತಿ ಒಂದು ಸಾವಿರ ಜೀವಂತ ಜನನಗಳಿಗೆ ಒಂದು ವರ್ಷದೊಳಗಿನ ಶಿಶುಗಳ ಸಾವಿನ ಸಂಖ್ಯೆಯನ್ನು ‘ಶಿಶು ಮರಣ ಪ್ರಮಾಣ’ (ಐ.ಎಂ.ಆರ್) ಎಂದು ಪರಿಗಣಿಸಲಾಗುತ್ತದೆ. 2021ರಲ್ಲಿ 13.27ರಷ್ಟಿದ್ದ ಶಿಶು ಮರಣ ಪ್ರಮಾಣ ಪ್ರಸಕ್ತ ವರ್ಷ 11.57ಕ್ಕೆ ಇಳಿಕೆಯಾಗಿದೆ.

ಜಿಲ್ಲೆಯಲ್ಲಿ 2021ರಲ್ಲಿ 67.48ರಷ್ಟಿದ್ದ ತಾಯಂದಿರ ಮರಣ ಪ್ರಮಾಣ ಪ್ರಸಕ್ತ ವರ್ಷ 48.48ಕ್ಕೆ ಇಳಿಕೆಯಾಗಿದೆ. ಪ್ರತಿ 1 ಲಕ್ಷ ಗರ್ಭಿಣಿಯರಲ್ಲಿ ಸಂಭವಿಸುವ ಸಾವುಗಳ ಸಂಖ್ಯೆಯನ್ನು ‘ತಾಯಂದಿರ ಮರಣ ಪ್ರಮಾಣ (ಎಂ.ಎಂ.ಆರ್) ಎಂದು ಪರಿಗಣಿಸಲಾಗುತ್ತದೆ. ಶಿಶು ಮತ್ತು ತಾಯಂದಿರ ಮರಣ ಪ್ರಮಾಣವು ದೇಶದ ಆರೋಗ್ಯ ವ್ಯವಸ್ಥೆ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅಳೆಯುವ ಪ್ರಮುಖ ಸೂಚಕವಾಗಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.

‘ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ) ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುತ್ತಿಲ್ಲ. ರಾತ್ರಿ ವೇಳೆ ವೈದ್ಯರು ಲಭ್ಯವಿರುವುದಿಲ್ಲ. ಸರ್ಕಾರಿ ವೈದ್ಯರಲ್ಲಿ ಸೇವಾ ಬದ್ಧತೆ ಕಡಿಮೆಯಾಗಿದೆ. ಇದರಿಂದ ಬಡಕುಟುಂಬಗಳ ಶಿಶು ಮತ್ತು ತಾಯಂದಿರು ಸಾವಿಗೀಡಾಗುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರಿದ್ದಾರೆ.

‘ಶಿಶು ಮರಣ ತಡೆಗಟ್ಟಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ನಡೆಸಿ, ಸಕಾದಲ್ಲಿ ಮಗುವಿಗೆ ಲಸಿಕೆ ಹಾಕಲಾಗುತ್ತಿದೆ. ತಾಯಿಗೆ ಹೆರಿಯಾಗಿ ಮನೆಗೆ ತಲುಪಿದ ದಿನದಿಂದ 42 ದಿನಗಳವರೆಗೆ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ, ತಾಯಿ ಕಾರ್ಡ್ನಲ್ಲಿ ವಿವರ ದಾಖಲಿಸುತ್ತಿದ್ದಾರೆ. ರಿಸ್ಕ್ ಇರುವ ಶಿಶುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗುತ್ತಿದ್ದಾರೆ. ಪಿಎಚ್ಸಿಗಳಲ್ಲಿ ಮಗುವಿಗೆ ಆರೈಕೆ ಮತ್ತು ಎದೆ ಹಾಲು ಮಹತ್ವದ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ’ ಎಂದು ಆರ್ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವತ್ಥ್ ತಿಳಿಸಿದರು.

‘ಹೈರಿಸ್ಕ್ ಇರುವ ಗರ್ಭಿಣಿಯರನ್ನು ತಾಲ್ಲೂಕು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಶಿಫಾರಸು ಮಾಡಿ ಚಿಕಿತ್ಸೆ ಪಡೆಯಲು ಸೂಚಿಸಲಾಗುತ್ತಿದೆ. ಸುರಕ್ಷಿತ ಹೆರಿಗೆಗಾಗಿ ಆರೋಗ್ಯ ಶಿಕ್ಷಣ ನೀಡಿ, ಮನೆ ಹೆರಿಗೆ ತಪ್ಪಿಸಿ, ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ರಕ್ತಹೀನತೆಗೆ ಮಾತ್ರೆ ಕೊಡುವುದು ಸೇರಿದಂತೆ ಹಲವಾರು ಕ್ರಮಗಳ ಮೂಲಕ ತಾಯಂದಿರ ಮರಣ ಪ್ರಮಾಣ ನಿಯಂತ್ರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-40-804424925

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.