ಹಂಪಾಪುರ: ಇಲ್ಲಿನ ಜಿನ್ನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಜನಾಯಕ, ಉಪಾಧ್ಯಕ್ಷರಾಗಿ ಮರಳೂರು ನಾಯಕ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜನಾಯಕ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮರಳೂರು ನಾಯಕ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಪ್ರೇಮಾ ಅವಿರೋಧ ಆಯ್ಕೆ ಘೋಷಿಸಿದರು.

ನೂತನವಾಗಿ ಅಧ್ಯಕ್ಷ ರಾಜನಾಯಕ ಮಾತನಾಡಿ, ‘ಜಿನ್ನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಾರಂಭವಾಗಿ ಕೇವಲ ಐದು ವರ್ಷಗಳಲ್ಲಿ ₹2.5 ಲಕ್ಷದಿಂದ 3 ಲಕ್ಷ ರೂವರೆಗೆ ಲಾಭಾಂಶ ಹೊಂದಿದೆ. 10 -20 ವರ್ಷ ಪ್ರಾರಂಭವಾಗಿ ಲಾಭಾಂಶ ಇಲ್ಲದಿರುವ ಸಹಕಾರ ಸಂಘವನ್ನು ನಾವು ತಾಲ್ಲೂಕಿನಲ್ಲಿ ನೋಡಿದ್ದೇವೆ. ಸಹಕಾರ ಸಂಘಕ್ಕೆ ಬಂದ ಲಾಭವನ್ನು ವ್ಯರ್ಥವಾಗದ ರೀತಿಯಲ್ಲಿ ಕಾಪಾಡಿಕೊಂಡು ಬಂದಿದ್ದೇವೆ. ಸಹಕಾರ ಸಂಘವು ಅಭಿವೃದ್ಧಿಗೆ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಮುನ್ನಡೆಸಿಕೊಂಡು ಬಂದಿದ್ದೇವೆ’ ಎಂದರು.

ನಿರ್ದೇಶಕರಾದ ಹೇಮಂತ್ ಕುಮಾರ್, ಕಂಠೀರವ, ರಾಜನಾಯಕ, ಮರಳೂರು ನಾಯಕ, ಪ್ರೇಮ, ಕಮಲಮ್ಮ, ರಾಜಮ್ಮ, ರವಿ, ಜವರ ನಾಯಕ ಸಂಘದ ಕಾರ್ಯದರ್ಶಿ ವಿಜಯಕುಮಾರ್, ಪರೀಕ್ಷಿಕ ಪವನ್ ಕುಮಾರ್, ಮುಖಂಡರಾದ ಚಿಕ್ಕಣ್ಣನಾಯ್ಕ, ಸಿದ್ದನಾಯ್ಕ, ಸಿದ್ದಯ್ಯ, ಸ್ವಾಮಿ, ಮಂಜು, ಮಹೇಶ್, ರುದ್ರಪ್ಪ, ಪುಟ್ಟಣ್ಣ, ಶಿವಕುಮಾರ್, ಪರಶಿವ, ಸುರೇಶ್, ಮಹೇಶ್, ಚಾಮರಾಜ, ಜವರ ನಾಯಕ, ಚಾಮನಾಯಕ, ಚೇತನ್, ಮಹೇಶ್, ರಾಜು, ಚಿಕ್ಕಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-38-1224324146

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.