ಮಂಡ್ಯ: ನಟ ಸಾರ್ವಭೌಮ, ಡಾ.ರಾಜ್ಕುಮಾರ್ ಅವರ ಸ್ಮಾರಕ ಸ್ಥಳದ ಬಗ್ಗೆ ಎಡಪಂಥೀಯ ವಾದಿ ಅಹಿಂಸಾ ಚೇತನ್ ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕದಂಬ ಸೈನ್ಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಡಾ.ರಾಜ್ ಅವರಿಗೆ ನೀಡಿರುವ ಸ್ಮಾರಕ ಸಂಬಂಧ ವಿವಾದಾತ್ಮಕ ಹೇಳಿಕೆಯು ಕ್ಷಮಿಸಲಾರದ ತಪ್ಪಾಗಿದೆ. ಅದು ರಾಜ್ಕುಮಾರ್ ಕುಟುಂಬದ ಆಸ್ತಿಯಲ್ಲ, ರಾಜ್ಯ ಸರ್ಕಾರದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಂಠೀರವ ಸ್ಟುಡಿಯೋಗೆ ಸೇರಿದ ಆಸ್ತಿ. ಇಂತಹ ಹೇಳಿಕೆ ಸಲ್ಲದು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

‘ಕನ್ನಡ, ನಾಡು, ನುಡಿ ಹಾಗೂ ಭಾಷೆಗೆ ಅವಿತರವಾಗಿ ಸೇವೆ ಸಲ್ಲಿಸಿರುವ ನಟ ರಾಜ್ಕುಮಾರ್ ಅವರ ಸೇವೆ ಪರಿಗಣಿಸಿ ನೀಡಿರುವ ಸ್ಮಾರಕ ನಿರ್ಮಾಣದ ಸ್ಥಳವಾಗಿದೆ. ಮೇರು ನಟರ ಬಗ್ಗೆ ಮಾತನಾಡುವಾಗ ಚೇತನ್ ಎಂಬುವ ವ್ಯಕ್ತಿಗಳು ನೂರು ಸಲ ಯೋಚನೆ ಮಾಡಬೇಕು. ಅಗೌರವದ ಹೇಳಿಕೆಗಳು ನೀಡಬಾರದು’ ಎಂದು ಎಚ್ಚರಿಕೆ ನೀಡಿದರು.

ಚೇತನ್ ಅವರು ಉದ್ದೇಶ ಪೂರ್ವಕವಾಗಿ ಸ್ಮಾರಕ ಸ್ಥಳದ ವಿಚಾರವಾಗಿ ಅಪರಸ್ವರ ಎತ್ತಿದ ಅವರ ಹೇಳಿಕೆ ಕನ್ನಡಿಗರಿಗೆ ಮಾಡಿದ ಘನಘೋರ ಅಪಚಾರವಾಗಿದೆ. ಕರ್ನಾಟಕ ವಾಣಿಜ್ಯ ಮಂಡಳಿ ತಕ್ಷಣವೇ ಇವರ ಸದಸ್ಯತ್ವ ರದ್ದು ಮಾಡಬೇಕು. ಅವರ ಹೇಳಿಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ರಾಜ್ಯ ಸರಕಾರ ಚೇತನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಉಮ್ಮಡಹಳ್ಳಿ ನಾಗೇಶ್, ಆರಾಧ್ಯ, ಸಲ್ಮಾನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-40-71713343

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.