ಕಿಕ್ಕೇರಿ: ಅವಳಿ ಗ್ರಾಮಗಳಾದ ಕಿಕ್ಕೇರಿ-ಲಕ್ಷ್ಮೀಪುರ ಗ್ರಾಮದ ಕ್ಷೇತ್ರಪಾಲಕಿ ಕಿಕ್ಕೇರಮ್ಮ ದೇವಿಯ ಜಾತ್ರಾ ಮಹೋತ್ಸವ ಇಲ್ಲಿನ ಸಿರಿಗೆರೆ (ಅಮಾನಿಕೆರೆ)ಯ ಸುಂದರ ತಾಣದಲ್ಲಿ ತೆಪ್ಪೋತ್ಸವದ ಮೂಲಕ ಭಾನುವಾರ ರಾತ್ರಿ ಸಂಪನ್ನವಾಯಿತು.

ಯುಗಾದಿಯಂದು ಆರಂಭವಾದ ಜಾತ್ರಾ ಸಡಗರ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು. ಇಡೀ ಗ್ರಾಮ ವಿದ್ಯುತ್ ದೀಪಗಳ ಅಲಂಕಾರದಿಂದ ಹಗಲು ರಾತ್ರಿ ಒಂದಾಗಿಸಿತ್ತು. ನಿತ್ಯ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಮುಂಜಾನೆ, ಮುಸ್ಸಂಜೆಯಲ್ಲಿ ದೇವಿಯ ಮೆರವಣಿಗೆ, ಭಕ್ತರಿಗೆ ದೇವಿ ದರ್ಶನ, ಹಣ್ಣು, ತುಪ್ಪ ರಸಾಯನ ಪ್ರಸಾದ ಸೇವೆ ನಡೆಯಿತು.

ಓಕುಳಿ ಹಬ್ಬ, ವಸಂತನ ಹಬ್ಬ, ಬಾಣಬಿರುಸು ಪ್ರದರ್ಶನ, ಕುರುಕ್ಷೇತ್ರ ನಾಟಕ, ಹೂವಿನ ಪಲ್ಲಕ್ಕಿ ಉತ್ಸವ ಜರುಗಿತು. ಅಂತಿಮವಾಗಿ ಗ್ರಾಮದೇವಿಯನ್ನು ಭಕ್ತರು ಆಗಮಿಸಿ ಕಣ್ತುಂಬಿಕೊಂಡರು. ಯಲ್ಲಕ್ಕಿಗೌಡರ ಕುಟುಂಬದವರು ತೆಪ್ಪೋತ್ಸವ ಉಸ್ತುವಾರಿ ವಹಿಸಿದ್ದರು. ಲಕ್ಕಮ್ಮನ ವಠಾರದ ಬೂನಾಸಿ, ಕೆಂಚಮ್ಮ, ಮಾರಮ್ಮ, ದೊಡ್ಡಹಟ್ಟಿ ಪ್ರಮುಖರು, ಕಿಕ್ಕೇರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-40-1078476750

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.