ಕಿಕ್ಕೇರಿ: ಲಕ್ಷ್ಮೀಪುರ-ಕಿಕ್ಕೇರಿ ಗ್ರಾಮಗಳ ನಡುವೆ ನೆಲೆಸಿರುವ ಗ್ರಾಮದೇವಿ ಕಿಕ್ಕೇರಮ್ಮನವರ ಜಾತ್ರಾ ಮಹೋತ್ಸವದ ಪಂಚಮಿ ದಿನವಾದ ಸೋಮವಾರ ವಿಪ್ರ ಸಮುದಾಯದ ಜೋಯಿಸ್ ಕುಟುಂಬ ಹಾಗೂ ಪಂಚಮಿ ಸೇವಾ ಸಮಿತಿಯವರು ಪಂಚಮಿ ಸೇವಾ ಪೂಜೆ ನೆರವೇರಿಸಿದರು.

ಬ್ರಾಹ್ಮಿ ಮುಹೂರ್ತದಲ್ಲಿ ಆರಂಭವಾದ ಹೋಮ-ಹವನ ಹಾಗೂ ದೇವಿ ಪೂಜಿಸಲು ವಿಪ್ರ ವೃಂದದವರು ತಂಡೋಪತಂಡವಾಗಿ ಪೂಜೆಗೆ ಆಗಮಿಸಿದ್ದರು. ಹೋಬಳಿಯ ಸುತ್ತಮುತ್ತಲ ಪ್ರದೇಶ ಸೇರಿದಂತೆ ಜಿಲ್ಲೆ, ಹೊರಜಿಲ್ಲೆಗಳಿಂದ ದೇವಿಯ ಆರಾಧಕರು ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು.

ಬಲು ಹಿಂದೆ ವಿಪ್ರ ವೃಂದ ಹಾಗೂ ಕುರುಬ ಸಮುದಾಯದವರಿಗೆ ಪೂಜಾ ವಿಷಯದಲ್ಲಿ ಪಂಥವೇರ್ಪಟ್ಟು ಮಹಾಭಕ್ತೆ ಕುರುಬರ ಲಕ್ಕಮ್ಮ ವಿಜಯಿ ಆಗುತ್ತಾಳೆ. ಅಂದಿನಿಂದ ವರ್ಷಪೂರ್ತಿ ದೇವಿಗೆ ಹಾಲುಮತದವರು ಪೂಜಿಸಲಾಗುತ್ತಿದೆ. ಈ ವೇಳೆ ವಿಪ್ರರು ಮನವಿ ಮಾಡಿಕೊಂಡಿದ್ದರಿಂದ ಜಾತ್ರೆಯ ಪಂಚಮಿ ದಿನದ ಒಂದು ದಿನ ಪೂಜಿಸಲು ಅವಕಾಶ ಕಲ್ಪಿಸಲಾಗಿದೆ.

ದೇವಿಗೆ ಗಂಗಾಜಲಾಭಿಷೇಕ ನೆರವೇರಿಸಿದ ಬಳಿಕ ಪಂಚಾಮೃತ, ವಿವಿಧ ದ್ರವ್ಯಗಳ ಅಭಿಷೇಕಗಳನ್ನು ನೆರವೇರಿಸಿದರು. ಪರಿಮಳ ಪುಷ್ಪಗಳಿಂದ ದೇವಿಗೆ ಅಲಂಕರಿಸಿ, ವಡವೆ, ವಸ್ತ್ರಗಳಿಂದ ಶೃಂಗರಿಸಿದರು. ವೇದಾಪಾರಾಯಣ ಮಾಡಿದರು. ಧೂಪ ದೀಪಾಧಾರತಿ ಬೆಳಗಿದರು. ದೇವಿಗೆ ಸೀರೆ, ಕುಪ್ಪಸ, ಬಳೆ, ಬೆಲ್ಲ, ಅಕ್ಕಿ ಮತ್ತಿತರ ಮಂಗಳದ್ರವ್ಯ ವಸ್ತುಗಳಿಂದ ಮಡಿಲು ತುಂಬಿದರು. ಸುಹಾಸಿನಿ ಪೂಜೆ, ಲಲಿತಾ ಸಹಸ್ರನಾಮಾವಳಿ, ಕುಂಕುಮಾರ್ಚನೆ ಮತ್ತಿತರ ಅರ್ಚನೆಗಳನ್ನು ದೇವಿಗೆ ಅರ್ಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-40-1211543357

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.