ಕಿಕ್ಕೇರಿ: ಹೋಬಳಿಯ ಊಗಿನಹಳ್ಳಿ ಬಳಿ ಸರ್ಕಾರಿ ಜಾಗಗಳಲ್ಲಿ ಮಣ್ಣು ತೆಗೆಯುತ್ತಿರುವ ದಂಧೆಗೆ ಕಡಿವಾಣ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರೈತರ ಜಮೀನಿನಲ್ಲಿದ್ದ ಫಲವತ್ತಾದ ಮಣ್ಣನ್ನು ತೆಗೆಯುತ್ತಿದ್ದ ದಂಧೆ ಈ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳ, ಪಾಳುಭೂಮಿಯಲ್ಲಿ ಎಗ್ಗಿಲ್ಲದೆ ತೆಗೆಯಲಾಗುತ್ತಿದೆ. ಬಹುತೇಕ ಇಟ್ಟಿಗೆ ತಯಾರಿ, ರಸ್ತೆ ಕಾಮಗಾರಿ, ಮನೆ ನಿರ್ಮಾಣಕ್ಕೆ ಗುಣಮಟ್ಟದ ಮಣ್ಣು ಬಳಸಲು ಈ ದಂಧೆ ನಡೆಯುತ್ತಿದೆ. ಉದ್ದಿನಮಲ್ಲನಹೊಸೂರು ಹಾಗೂ ಊಗಿನಹಳ್ಳಿ ಕೊಪ್ಪಲು ಬಳಿ ರಸ್ತೆ ಎರಡು ಬದಿಯಲ್ಲಿ ಮಣ್ಣು ಬಗೆದು ಬಾರಿ ಪ್ರಮಾಣದಲ್ಲಿ ಗುಂಡಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಾಕಷ್ಟು ವಿಶಾಲವಾದ ಪ್ರದೇಶವಾಗಿದ್ದ ಈ ಜಾಗ ರೈತರು ಜಾನುವಾರು ಮೇಯಿಸಲು ಸೂಕ್ತ ಸ್ಥಳವಾಗಿತ್ತು. ಎಗ್ಗಿಲ್ಲದೆ ಮಣ್ಣು ತೆಗೆದು ಮಣ್ಣಿನ ಫಲವತ್ತತೆ ಹಾಳಾಗಿದೆ. ಮರಗಿಡಗಳು ಹಾಳಾಗಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಮಾಜ ಸೇವಾಕರ್ತ ಯಶ್ವಂತ್ ಒತ್ತಾಯಿಸಿದ್ದಾರೆ.

‘ಸರ್ಕಾರಿ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಬಾರದು. ಯಾವುದೇ ಭೂಮಿಯಲ್ಲಿ ಮಣ್ಣು ತೆಗೆದು ಫಲವತ್ತತೆ, ಮೂಲ ಸ್ವರೂಪಕ್ಕೆ ಹಾನಿ ಮಾಡುವುದು ಅಪರಾಧ. ಸಾರ್ವಜನಿಕರ ಹಿತರಕ್ಷಣೆಗೆ ಧಕ್ಕೆ ಬರುವಂತೆ ಪ್ರಾಕೃತಿಕ ಸಂಪತ್ತಿಗೆ ಸಮಸ್ಯೆ ಮಾಡಬಾರದು. ಇಂತಹ ಕೃತ್ಯಗಳು ನಡೆಯದಂತೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಹಶೀಲ್ದಾರ್ ಎಸ್.ಯು. ಅಶೋಕ್ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-40-34199887

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.