ಮಂಡ್ಯ: ‘ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು’ ಎಂಬ ಪ್ರಖ್ಯಾತ ಕವಿತೆ ಬರೆದ ‘ಪ್ರೇಮಕವಿ’ ಕೆ.ಎಸ್.ನ ಗೌರವಾರ್ಥವಾಗಿ ಅವರ ಸ್ವಗ್ರಾಮ ಕಿಕ್ಕೇರಿಯ ಅಮಾನಿಕೆರೆಗೆ ‘ಕೆ.ಎಸ್. ನರಸಿಂಹಸ್ವಾಮಿ ಸರೋವರ’ ಎಂದು ನಾಮಕರಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ.

‘ಮೈಸೂರು ಮಲ್ಲಿಗೆ’ ಕವಿಯ ಅನೇಕ ಕಾವ್ಯಗಳಲ್ಲಿ ಸಿರಿಗೆರೆಯ ನೀರು ಹರಿದಿದೆ, ತಾವರೆ ಹೂವಿನ ಸುವಾಸನೆಯಿದೆ. ಕೆರೆಯ ಏರಿಯ ಮೇಲೆ ಬಂಡಿಗಳು ಸಾಗಿದ ಮಣ್ಣಿನ ಘಮವಿದೆ, ಶಾನುಭೋಗರ ಮಗಳು ಕೆರೆಯ ನೀರನ್ನು ತಂದ ನೆನಪುಗಳಿವೆ.

‘ಒಲವಿನ ಕವಿ’ಯು ಹುಟ್ಟೂರಿನ ಕೆರೆಯನ್ನು ‘ಸಿರಿಗೆರೆ’ ಎಂದು ಕರೆದಿದ್ದರು. ಅದೇ ಅವರ ಕವಿತೆಗಳಿಗೆ ಸ್ಫೂರ್ತಿಯಾಗಿತ್ತು. ಕಾವ್ಯ ರಚನೆಗೆ ನಲ್ಮೆಯ ತಾಣವಾಗಿತ್ತು. ಕೆರೆಯ ದಡದಲ್ಲಿರುವ ಐತಿಹಾಸಿಕ ಬ್ರಹ್ಮೇಶ್ವರ ದೇವಾಲಯ, ಕೆರೆಯ ಏರಿ, ತೆಂಗಿನ ಮರಗಳ ಸಾಲು, ಬಾಳೆ, ಮಲ್ಲಿಗೆ ತೋಟಗಳು ಅವರ ಕವಿತೆಗಳಲ್ಲಿ ಅನಾವರಣಗೊಂಡಿವೆ.

ಕೆರೆಯ ತಟದಲ್ಲಿ ನವಿಲುಗಳ ನಾಟ್ಯವನ್ನು ನೋಡಿದ್ದ ಕವಿ ಹೃದಯ ಕಿಕ್ಕೇರಿಯನ್ನು ‘ನವಿಲೂರು’ ಎಂದು ಕರೆದಿದೆ. ಸೋಪಾನ ಕಟ್ಟೆಯ ಸಮೀಪದ ಅಶ್ವತ್ಥಕಟ್ಟೆಯೇ ಅವರ ಕಾವ್ಯೋದಯದ ತಾಣವಾಗಿತ್ತು.

1915ರ ಜ.26ರಂದು ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮದಲ್ಲಿ ಕೆಎಸ್ನ ಹುಟ್ಟೂರಿನಲ್ಲೇ ಬಾಲ್ಯ ಕಳೆದಿದ್ದರು. ಗ್ರಾಮದ ಹಳೆಯ ಅಂಚೆ ಕಚೇರಿ ಮುಂಭಾಗದ ಅವರ ಮನೆಗೆ ಕೂಗಳತೆ ದೂರದಲ್ಲೇ ಸುಮಾರು 358 ಎಕರೆ ವಿಸ್ತೀರ್ಣದ ಕಿಕ್ಕೇರಿ ಕೆರೆ ಇದೆ.

ಕೆರೆ ಅಭಿವೃದ್ಧಿಗೆ ಪ್ರಸ್ತಾವ: ಕೆರೆಯ ಸೌಂದರ್ಯೀಕರಣ, ಕಾಲ್ನಡಿಗೆ ಮಾರ್ಗ, ದೋಣಿ ವಿಹಾರ ಹಾಗೂ ಮೂಲಸೌಕರ್ಯ ಒದಗಿಸಲು ₹5.50 ಕೋಟಿ ಮೊತ್ತದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೋದನೆ ಕೊಡಿಸಿ, ಹಣ ಬಿಡುಗಡೆ ಮಾಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೆ.ಎಸ್.ನ ಟ್ರಸ್ಟ್ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ.

‘ಕಿಕ್ಕೇರಿ ಕೆರೆ ‘ಕೆ.ಎಸ್.ನ ಸರೋವರ’ ಆಗಿರುವುದು ಹರ್ಷ ತಂದಿದೆ. ಮನೆಯಲ್ಲಿ ಬಡತನ, ಕಾವ್ಯದಲ್ಲಿ ಸಿರಿತನವೇ ಈ ಕವಿಯ ವೈಶಿಷ್ಟ್ಯ’ ಎಂದು ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-719899639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.