ಮಂಡ್ಯ: ಮದ್ದೂರು ತಾಲ್ಲೂಕು ಹಾಗೂ ಕೊಪ್ಪ ಹೋಬಳಿ ಭಾಗದ ಗ್ರಾಮಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡಬೇಕು ಎಂದು ಆಗ್ರಹಿಸಿ ಶಿಂಷಾ ನಾಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕೊಪ್ಪ ಭಾಗದ ರೈತರು ಸೇರಿದಂತೆ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಪ್ರತಿಭಟನೆಗೆ ಬೆಂಬಲ ನೀಡಿದರು.

‘ಮದ್ದೂರು ತಾಲ್ಲೂಕು ವ್ಯಾಪ್ತಿಗೆ ಹಾಗೂ ಕಾವೇರಿ ನೀರಾವರಿ ನಿಗಮದಡಿ ಬರುವ ಕೊಪ್ಪ ಹೋಬಳಿ ಸೇರಿದಂತೆ ಹೊಸಗಾವಿ, ಮಲ್ಲಿಗೆರೆ, ಕೌಡ್ಲೆ ಹಾಗೂ ಉಪ್ಪಾರನಕೊಪ್ಪಲು ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಕೃಷಿ ಮಾಡಲು ನೀರು ಸಾಕಾಗುತ್ತಿಲ್ಲ’ ಎಂದು ಆರೋಪಿಸಿದರು.

ದೇಶಹಳ್ಳಿ ಕೆರೆ ತುಂಬಿಸಿ: ‘ಕೆಆರ್ಎಸ್ ಅಣೆಕಟ್ಟೆಯಿಂದ ಕಟ್ಟು ಪದ್ಧತಿಯಲ್ಲಿ ವಿ.ಸಿ. ವಿಭಾಗ (ಕೊಪ್ಪ), ಶಿಂಷಾ ಶಾಖಾ ನಾಲೆ, ಕೌಡ್ಲೆ ವಿತರಣಾ ನಾಲೆ ಖಾರಿಫ್ ಬೆಳೆಗೆ ಹಾಗೂ ರಭೀ ಬೆಳೆಗೆ ನೀರು ಒದಗಿಸಲಾಗುತ್ತಿದೆ. ಆದರೆ ಪರಿಪೂರ್ಣವಾಗಿ ನೀರು ಹರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ಧಾರೆ. ಕೊಪ್ಪ ಕೆರೆಯಿಂದ ಏತ ನೀರಾವರಿ ಏರು ಕೊಳವೆ ಮುಖಾಂತರ ಚಿಕ್ಕಬಳ್ಳಿ ಪಿಕ್ಅಪ್ ನಾಲೆ ಸಂಪರ್ಕ ಕಲ್ಪಿಸಿ ದೇಶಹಳ್ಳಿ ಕೆರೆಗೆ ನೀರು ತುಂಬಿಸಬೇಕು’ ಎಂದು ಒತ್ತಾಯಿಸಿದರು.

‘ಶಿಂಷಾ ನದಿಗೆ ಎಡವನಗಹಳ್ಳಿ ಹತ್ತಿರ ಚೆಕ್ ಡ್ಯಾಂ, ಪಂಪ್ ಹೌಸ್ ಮತ್ತು ಜಾಕ್ ವೇಲ್ ನಿರ್ಮಾಣ ಮಾಡಿ ನೀರು ಒದಗಿಸಬೇಕು. ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಬಳಿಯ ಲೋಕಪಾವನಿ ನದಿಯಿಂದ ನೀರನ್ನು ಎತ್ತಿ ಮದ್ದೂರು ತಾಲ್ಲೂಕಿನ ತರೀಕೆರೆ ಕಾಲೊನಿ ಶಿಂಷಾ ಉಪ ನಾಲೆಯ ರೆಗ್ಯೂಲೇಟರಿಗೆ ಏರು ಕೊಳವೆ ಮುಖಾಂತರ ಕೊಪ್ಪ ಭಾಗದ ಮಳೆಯಾಶ್ರಿತ ಗ್ರಾಮಗಳಿಗೆ ನೀರು ಹರಿಸಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಅಧ್ಯಕ್ಷ ಎಚ್. ಪುಟ್ಟಸ್ವಾಮಿಗೌಡ, ಸಿ.ತಮ್ಮಯ್ಯ, ವಿವಿಧ ಸಂಘಟ ನೆಯ ಮುಖಂಡರಾದ ವೆಂಕಟಗಿರಿಯಯ್ಯ, ರಾಜು, ಕಾಂತರಾಜ್, ತಂಗರಾಜು, ಕರೀಗೌಡ, ರಮೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-40-1952376529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.