ಕೆ.ಆರ್. ಪೇಟೆ: ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಹಬ್ಬದ ಅಂಗವಾಗಿ ಮಂಗಳವಾರ ಬಸವಣ್ಣದೇವರ ಹಬ್ಬ ರಂಗದಹಬ್ಬ ಮತ್ತು ಓಕುಳಿ ಸಂಭ್ರಮ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಯುವಕರು ಓಕುಳಿಯಲ್ಲಿ ಭಾಗವಹಿಸಿ, ಪರಸ್ಪರ ತೀರ್ಥದ ನೀರನ್ನು ಎರಚಿ ಹಬ್ಬ ಆಚರಿಸಿದರು. ಸಂಪ್ರದಾಯದಂತೆ ಗ್ರಾಮದ ರಂಗದಲ್ಲಿರುವ ಬಸವಣ್ಣ(ನಂದೀಕೇಶ್ವರ) ದೇವರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಹೋಮ, ಅಭಿಷೇಕ ಮತ್ತು ವಿಶೇಷ ಪೂಜೆಗಳು ನಡೆದವು. ಅರ್ಚಕರು ಮತ್ತು ಗ್ರಾಮದ ಮುಖಂಡರ ಭಾಗವಹಿಸಿ ಸಂಕಲ್ಪ ಪೂಜೆ ಸಲ್ಲಿಸಿದರು.

ನಂತರ ದೇವಸ್ಥಾನದ ಮುಂಭಾಗದಲ್ಲಿರುವ ಓಕುಳಿ ಕೊಳದಲ್ಲಿ ದೇವರಗುಡ್ಡಪ್ಪ ಮತ್ತು ಮಹಿಳೆಯರು ಕಲ್ಯಾಣಿಯಿಂದ ತಂದ ನೀರಿಗೆ ಸಪ್ತ ನದಿಗಳನ್ನು ಆವಾಹಿಸಿ, ಓಕುಳಿ ಕೊಳಕ್ಕ ತುಂಬಿದ ನೀರಿಗೆ ಹರಿದ್ರಾಕುಂಕುಮ ಅಕ್ಷತೆ ಹೂವಿನಿಂದ ಪೂಜೆ ಸಲ್ಲಿಸಿದರು.

ಪೂಜೆಯ ನಂತರ ನಂತರ ಎಲ್ಲಾ ವಯೋಮಾನದ ಜನರು ವೋಕುಳಿ ಕೊಳಕ್ಕೆ ಇಳಿದು ಚೊಂಬುಗಳಲ್ಲಿ ತೀರ್ಥದ ನೀರನ್ನು ತುಂಬಿಕೊಂಡು ನೆರೆದಿದ್ದ ಜನರಿಗೆ ಎರಚುವ ಮೂಲಕ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ಹಬ್ಬದ ಅಂಗವಾಗಿ ರಂಗಸ್ಥಳ ಮತ್ತು ಕುರ್ಜನ್ನು ಅಲಂಕರಿಸಲಾಗಿತ್ತು. ಮನೆ- ಮನೆಯಿಂದ ದೇವರಿಗೆ ಶಾವಿಗೆ ಪ್ರಸಾದ ಎಡೆಯಿಟ್ಟು ಪೂಜೆ ಸಲ್ಲಿಸಿದರು. ರಾತ್ರಿಯಿಡೀ ರಂಗದ ಕುಣಿತ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-40-1212653053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.