ಕೆ.ಆರ್. ಪೇಟೆ: ಪಟ್ಟಣದ ಜಯನಗರ ಬಡಾವಣೆಯ ಮುಖ್ಯ ರಸ್ತೆಯಾದ ಸಾರ್ವಜನಿಕ ಆಸ್ಪತ್ರೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 1 ಕಿ.ಮೀ ಮಾರ್ಗ ಸಂಪೂರ್ಣ ಹಾಳಾಗಿದ್ದು ಅಲ್ಲಲ್ಲಿ ಡಾಂಬರ್ ಕಿತ್ತು ಹೋಗಿ, ಹೊಂಡಗಳಿಂದ ಕೂಡಿದ್ದು ವಾಹನದಲ್ಲಿ ಸಾಗಲು, ನಡೆದುಕೊಂಡು ಹೋಗಲು ದುಸ್ತರವಾಗಿದೆ.

ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಆಸ್ಪತ್ರೆಗೆ ಹೋಗುವವರು, ಶಾಲಾ ಮಕ್ಕಳು ಮತ್ತು ಸಂತೆಗೆ ಹೋಗುವವರು ಇದೇ ರಸ್ತೆ ಬಳಸಬೇಕಿದೆ. ಸ್ಕೂಲ್ ಆಫ್ ಇಂಡಿಯಾದಿಂದ ಸಾರ್ವಜನಿಕ ಆಸ್ಪತ್ರೆಯವರೆಗಿನ ರಸ್ತೆ ಮೈಸೂರಿಗೆ ಪ್ರವಾಸಿಮಂದಿರ ವೃತ್ತ ಬಳಸದೆ ಪರ್ಯಾಯ ರಸ್ತೆಯಾಗಿದೆ.

ಆದರೆ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಪಟ್ಟಣದ ಪುರಸಭೆ ಗಮನಹರಿಸದ್ದರಿಂದ ವಾಹನ ಸವಾರರು ಹೊಂಡಗಳಿಗೆ ಬಿದ್ದು ಗಾಯಗೊಳ್ಳುತಿದ್ದಾರೆ. .ಒಂದು ಕಿ.ಮೀ.ರಸ್ತೆಯ ಈ ಮುಖ್ಯ ರಸ್ತೆಯಲ್ಲಿ 100 ರಿಂದ 200 ಮೀಟರ್ ರಸ್ತೆ ಬಿಟ್ಟರೆ ಉಳಿದೆಲ್ಲವೂ ಹಾಳಾಗಿದೆ. ರಸ್ತೆಯಲ್ಲೇ ಚರಂಡಿ ನೀರು, ಮ್ಯಾನ್ಹೋಲ್ ಗಳ ನೀರು ಹರಿಯುತ್ತಿ ದೆ. ಈ ರಸ್ತೆಯಲ್ಲಿ ವಾಹನ ಸಂಚಾರವೂ ಅಧಿಕ ಇರುವದರಿಂದ ರಸ್ತೆ ನವೀಕರಿಸಿದರೆ ಪ್ರಯಾಣಿಕರಿಗೆ ಉಪಯುಕ್ತವಾಗಲಿದೆ.

ಪುರಸಭೆಯ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳು ಇತ್ತ ಗಮನಹರಿಸಿ ಮಳೆಬರುವ ಮುನ್ನ ರಸ್ತೆ ನವೀಕರಿಸುವುರೊಂದಿಗೆ ಬೆಳೆದಿರುವ ಗಿಡಗಂಟಿ ತೆರವು ಮಾಡಿಸಬೇಕು ಎಂದು ಜಯನಗರ ಬಡಾವಣೆಯ ನಿವಾಸಿಗಳು ಮತ್ತು ವಾಹನ ಸವಾರರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-40-615208947

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.