ಮಂಡ್ಯ: ಕೇಂದ್ರ ಸರ್ಕಾರವು ಏಪ್ರಿಲ್ನಿಂದ ಕಾರ್ಮಿಕ ಸಂಹಿತೆಗಳಿಗೆ ನಿಯಮ ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಸಿಐಟಿಯು ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ನಗರದ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಸಿಡಿಪಿಒ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ದೇಶದಾದ್ಯಂತ ಕಪ್ಪುದಿನ ಆಚರಣೆಗೆ ಬೆಂಬಲ ಸೂಚಿಸಿದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮಂಡಿಸಿರುವ ಬಜೆಟ್ ಅಸಾರ್ಥಕ ಎಂದು ಅನಿಸುತ್ತಿದೆ. ಮುಂದಿನ ವರ್ಷಗಳಲ್ಲಿ ಹೂಡಿಕೆ ಹರಿವು, ಪೂರೈಕೆ ಸರಪಳಿ ಮತ್ತು ಬೆಳವಣಿಗೆ ಭಾರತೀಯ ಆರ್ಥಿಕತೆ ಮೇಲೆ ಪ್ರಭಾವ ಬೀರಲಿದೆ ಎಂದು ಆರೋಪಿಸಿದರು.

ಕಾರ್ಮಿಕ ವಿರೋಧಿ, ಕಾರ್ಮಿಕ ಸಂಹಿತೆಗಳನ್ನು ಅಧಿಸೂಚಿಸುವುದು ಮತ್ತು ಗುಣಮಟ್ಟ ನಿಯಂತ್ರಣ ಮಾನದಂಡಗಳನ್ನು ದುರ್ಬಲಗೊಳಿಸಲಾಗಿದೆ. ಇದು ಕಾರ್ಮಿಕ ಹಕ್ಕುಗಳು ಮತ್ತು ದೇಶೀಯ ಕೈಗಾರಿಕೆಯನ್ನು ನಾಶ ಮಾಡುತ್ತದೆ. ದೇಶದಲ್ಲಿ ಯುವಜನತೆಗೆ ಉದ್ಯೋಗ ಕೊಡಿ ಎಂದು ಆಗ್ರಹಿಸಿದರು.

‘ಉದ್ಯೋಗದಾತರ ಕಾನೂನುಗಳ ಉಲ್ಲಂಘನೆಗಳನ್ನು ಅಪರಾಧವಲ್ಲ ಎಂಬಂತೆ ಮಾಡುತ್ತಿದೆ. ಕಾರ್ಮಿಕ ಸಂಘಟನೆಗಳ ಚಟುವಟಿಕೆಗಳನ್ನು ಅಪರಾಧೀಕರಣವೆಂದು ಬಿಂಬಿಸಲಾಗುತ್ತದೆ. ಕೆಲಸದ ಗಂಟೆಗಳಿಗೆ ಮಿತಿ ಇಲ್ಲದಂತೆ ಮಾಡುವುದು. ಮುಷ್ಕರ ಹಕ್ಕು ಅಸಾಧ್ಯವಾಗುತ್ತದೆ. ಕಾಯಂ ಅವಧಿಯ ಉದ್ಯೋಗಗಳನ್ನು ಇಲ್ಲವಾಗಿಸುವುದು ಇತ್ಯಾದಿ ಎಲ್ಲವೂ ನಿಯಮದಲ್ಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈಲ್ವೆ ಹಂಚಿಕೆಯು ಐಷಾರಾಮೀಕರಣವನ್ನು ಪ್ರೋತ್ಸಾಹಿಸುತ್ತಿದೆ. ಮುಂಬೈ-ಪುಣೆ ಮತ್ತು ಹೈದರಾಬಾದ್-ಚೆನ್ನೈನಂತಹ ಏಳು ಹೈಸ್ಪೀಡ್ ರೈಲು ಹಾದಿಗಳಿಗೆ ಸಂಪನ್ಮೂಲಗಳನ್ನು ಸುರಿಯುತ್ತಿದೆ. ಆದರೆ, ಸಾಮಾನ್ಯ ಪ್ರಯಾಣಿಕರು ತುಂಬಿ ಹೋದ ಬೋಗಿಗಳಲ್ಲಿ ಕಷ್ಟಪಡುತ್ತಿದ್ದಾರೆ. ವೃದ್ಧರ ರಿಯಾಯಿತಿಗಳನ್ನು ಮರಳಿ ನೀಡಿಲ್ಲ’ ಎಂದು ಆರೋಪಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮುಖಂಡರಾದ ಉಮಾ, ರಾಧಾ, ಶಶಿಕಲಾ, ಗೀತಾ, ರೇಣುಕಾ, ಧನಲಕ್ಷ್ಮಿ, ಮಂಗಳಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-40-542783766

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.