ಮದ್ದೂರು : ತಾಲ್ಲೂಕು ವ್ಯಾಪ್ತಿಯಲ್ಲಿರುವ ನಿವೇಶನ ರಹಿತ ದಲಿತರಿಗೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಬೇಕು ಹಾಗೂ ಪ್ರತಿಯೊಬ್ಬರಿಗೂ ನಿವೇಶನ ನೀಡಬೇಕೆಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಸದಸ್ಯರು ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಆರ್.ಕೃಷ್ಣ ಮಾತನಾಡಿ, ನಿವೇಶನ ರಹಿತರು 2025 ರಲ್ಲಿ ವಿವಿಧ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಿದ್ದರು. ಪಟ್ಟಿಗೆ ಸೇರಿಸಲು ಹಾಗೂ ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸಲು ಇದೇ ಮೇ 30 ವರೆಗೆ ಗಡುವು ನೀಡಲಾಗಿತ್ತು. ಕೆಲವರು ಅರ್ಜಿ ಸಲ್ಲಿಸದ ಕಾರಣ ದಿನಾಂಕ ವಿಸ್ತರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಒಂದು ಕೋಟಿಗೂ ಹೆಚ್ಚು ದಲಿತರನ್ನು ಬರಿ ಮತದಾನಕ್ಕೆ ಬಳಸಿಕೊಳ್ಳಲಾಗುತ್ತಿದೆ, ಅಭಿವೃದ್ಧಿಗೆ ಬರುತ್ತಿರುವ ಅನುದಾನಗಳು ಸಮರ್ಪಕ ಬಳಕೆಯಾಗುತ್ತಿಲ್ಲ ಎಂದರು.

ಆತಗೂರು, ಹೆಮ್ಮನಹಳ್ಳಿ, ಸೋಮನಹಳ್ಳಿ ಹಾಗೂ ಸಾದೊಳಲು ಗ್ರಾಮ ಪಂಚಾಯತಿಗಳಲ್ಲಿ 2025 ರ ನವೆಂಬರ್ 17, ರಂದು ಅರ್ಜಿಗಳನ್ನು ಸಲ್ಲಿಸಲಾಗಿದೆ. ಪಂಚಾಯಿತಿಗಳು ನಿವೇಶನ ರಹಿತರಿಗೆ ನಿವೇಶನ ನೀಡಲು ಖಾಲಿ ಜಾಗ ಗುರುತಿಸಿಲ್ಲ ಆರೋಪಿಸಿದರು.

ಸೋಮನಹಳ್ಳಿಯ ಮಲ್ಲಯ್ಯನಗರದ ಕೆ.ಡಿ.ಬಿ. ಜಾಗದಲ್ಲಿ 3 ಎಕರೆ , ಆತಗೂರು ಗ್ರಾಮ ಪಂಚಾಯಿತಿಯ ಆಲಂಶೆಟ್ಟಹಳ್ಳಿಯಲ್ಲಿ 1.20 ಎಕರೆ ಸರ್ಕಾರಿ ಜಾಗ ಇದೆ. ಉಳಿದ ಪಂಚಾಯ್ತಿಗಳಲ್ಲಿಯೂ ಜಾಗಗಳನ್ನು ಗುರುತಿಸಲು ಸಮಿತಿ ಒತ್ತಾಯಿಸುತ್ತದೆ ಎಂದು ವಿವರಿಸಿದ ಮನವಿಪತ್ರವನ್ನು ತಾ.ಪಂ ವ್ಯವಸ್ಥಾಪಕ ಮುನೇಂದ್ರಕುಮಾರ್ ಅವರಿಗೆ ಸಲ್ಲಿಸಲಾಯಿತು.

ಸಮಿತಿ ಜಿಲ್ಲಾ ಕಾರ್ಯದರ್ಶಿ ಅಂಬೂಜಿ, ಖಜಾಂಚಿ ಎಂ.ವಿಜೇಂದ್ರಕುಮಾರ್, ಉಪಾಧ್ಯಕ್ಷರಾದ ಕೆ.ಶಿವಲಿಂಗಯ್ಯ, ವೆಂಕಟೇಶ್, ಸಹ ಕಾರ್ಯದರ್ಶಿ ಜಯರಾಮಯ್ಯ, ಸಮಿತಿ ಸದಸ್ಯರಾದ ರೇಣುಕಮ್ಮ, ಕೆ.ಬೋರಯ್ಯ, ಟಿ.ಎಲ್.ಮಹೇಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-40-938853987

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.