ಮದ್ದೂರು: ನಗರದ ಗ್ರಾಮದೇವತೆಯಾದ ಮದ್ದೂರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಭಾರಿ ದನಗಳ ಜಾತ್ರೆಯಲ್ಲಿ ಎತ್ತೊಂದು ಸಾವನ್ನಪ್ಪಿದೆ.

ಶಾಮಿಯಾನದ ಕೆಳಗೆ ಕಟ್ಟಿದ್ದ ಎತ್ತು ಮಧ್ಯಾಹ್ನದ ವೇಳೆಗೆ ನಿತ್ರಾಣಗೊಂಡಿತು. ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೋವಿಂದ್ ಸ್ಥಳಕ್ಕೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡುವಷ್ಟರಲ್ಲಿ ಎತ್ತು ಅಸುನೀಗಿತ್ತು.

ಅತಿಯಾದ ತಾಪಮಾನ (ಉಷ್ಣತೆ )ಯಿಂದಾಗಿ ಎತ್ತು ಸಾವನ್ನಪ್ಪಿರುವುದಾಗಿ ಗೋವಿಂದ್ ತಿಳಿಸಿದರು. ಇಲಾಖೆಯಿಂದ ₹15 ಸಾವಿರ ಪರಿಹಾರ ನೀಡುವುದಾಗಿ ತಿಳಿಸಿದರು.

ತಾಲ್ಲೂಕಿನ ತಗ್ಗಹಳ್ಳಿ ಗ್ರಾಮದ ರೈತ ರಾಜು ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದ್ದು, ನಗರದ ಶಿoಷಾ ಬ್ಯಾಂಕ್ ಬಳಿ ಜಾತ್ರೆಯಲ್ಲಿ ತನ್ನ ಎತ್ತುಗಳೊಂದಿಗೆ ಭಾನುವಾರದಿಂದ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-40-1974230448

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.