ಮದ್ದೂರು: ನಗರದ ಗ್ರಾಮದೇವತೆ ಮದ್ದೂರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ (ಹಬ್ಬ) ಇದೇ 25ರಿಂದ ಮೇ 6ರವರೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅದ್ದೂರಿಯಾಗಿ ಮದ್ದೂರಮ್ಮನವರ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.

25ರಂದು ಬೆಳ್ಳಿಗ್ಗೆ 6ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಓಟ ಸ್ಪರ್ಧೆ (ಹಾಫ್ ಮ್ಯಾರಥಾನ್) ಹಮ್ಮಿಕೊಳ್ಳುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಿದ್ದು, ಏ. 30ರವರೆಗೆ ದನಗಳ ಜಾತ್ರೆಯೂ ನಡೆಯಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉತ್ತಮ ರಾಸುಗಳಿಗೆ 1ನೇ ಚಾoಪಿಯನ್ ಬಹುಮಾನವನ್ನಾಗಿ ₹2 ಲಕ್ಷ, 2ನೇ ಚಾoಪಿಯನ್ ರಾಸಿಗೆ ₹1 ಲಕ್ಷ, 3ನೇ ಚಾoಪಿಯನ್ ರಾಸಿಗೆ ₹50 ಸಾವಿರ ಸೇರಿದಂತೆ 10 ರಾಸುಗಳಿಗೆ ಸಮಾಧಾನಕರ ಬಹುಮಾನವನ್ನಾಗಿ ₹10 ಸಾವಿರ ಬಹುಮಾನ ನೀಡಲಾಗುವುದು ಎಂದರು. ಅಷ್ಟೇ ಅಲ್ಲದೇ ಉತ್ತಮ ಟಗರುಗಳಿಗೆ ಪ್ರಥಮ ಬಹುಮಾನವನ್ನಾಗಿ ₹10 ಸಾವಿರ ಹಾಗೂ ದ್ವಿತೀಯ ಬಹುಮಾನವನ್ನಾಗಿ ₹5 ಸಾವಿರ ನೀಡಲಾಗುತ್ತದೆ ಎಂದರು.

ನಂತರ ಏ.30ರಂದು ಬಹುಮಾನ ಪಡೆದ ರಾಸುಗಳು ಹಾಗೂ ಟಗರುಗಳನ್ನು ನಗರದ ಐ.ಬಿ. ವೃತ್ತದಿಂದ ಪೇಟೆ ಬೀದಿಯ ಮುಖಾಂತರ ನಗರದ ಉಗ್ರ ನರಸಿಂಹಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿ ಬಹುಮಾನ ವಿತರಿಸಲಾಗುವುದು ಎಂದರು.

ಮೇ 28 ಹಾಗೂ ಮೇ 29ರಂದು ನಗರದ ಕ್ರೀಡಾoಗಣದಲ್ಲಿ ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿಯನ್ನು ಮದ್ದೂರು ವಿಧಾನಸಭಾ ವ್ಯಾಪ್ತಿಯ 18 ವರ್ಷ ಮೇಲ್ಪಟ್ಟ ಯುವಕ– ಯುವತಿಯರಿಗೆ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ವಿಜೇತ ತಂಡಗಳಿಗೆ ಪ್ರಥಮ ₹50 ಸಾವಿರ, ದ್ವಿತೀಯ ₹25 ಸಾವಿರ, ತೃತೀಯ ₹10 ಸಾವಿರ ಬಹುಮಾನ ನೀಡಲಾಗುವುದು ಎಂದರು.

ಉತ್ತಮ ರಾಸುಗಳಿರುವ ರೈತರು ಶಿವಪುರದಲ್ಲಿರುವ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ರೈತರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್. ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ಎಂ.ಬಿ. ಸಚಿನ್, ಸರ್ವಮಂಗಳಾ, ಸಿದ್ದರಾಜು, ಬಸವರಾಜು, ವೆಂಕಟೇಶ್ ಪೂಜಾರಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಮಮತಾ ಶಂಕರೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು , ಮುಖಂಡರಾದ ಎಂ.ಡಿ. ಮಹಾಲಿಂಗಯ್ಯ, ಸಿದ್ದರಾಮಣ್ಣ, ಚನ್ನೇಗೌಡನದೊಡ್ಡಿ ಹೊಂಬಯ್ಯ, ಮರಿದೇವರು, ಎಂ.ಸಿ.ಲಿಂಗರಾಜು, ಸಂತೋಷ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-40-1285298445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.