ಮಂಡ್ಯ: ಮಳವಳ್ಳಿ ನೀರಾವರಿ ಕಾಣದ ಬರಡು ಪ್ರದೇಶವಾಗಿದೆ. ನಂಜುಂಡಪ್ಪ ವರದಿಯೂ ಇದನ್ನೇ ಹೇಳಿದೆ. ಇಷ್ಟೆಲ್ಲಾ ಇದ್ದರೂ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಮಳವಳ್ಳಿ ತಾಲ್ಲೂಕಿನಲ್ಲಿ ನಡೆದ ಭೂ ಹಗರಣದ ಬಗ್ಗೆ ಹಾಗೂ ಆಡಳಿತದ ವೈಖರಿ ಬಗ್ಗೆ ಉಪಲೋಕಾಯುಕ್ತರು ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ ಎಂದು ಜೆಡಿಎಸ್ ಮುಖಂಡ ಕೆ.ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಳವಳ್ಳಿ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪುರಸಭೆ ಮುಖ್ಯ ಆಡಳಿತಗಾರರ ವೈಫಲ್ಯದ ಬಗ್ಗೆಯೂ ಲೋಕಾಯುಕ್ತರೇ ಬೆಳಕು ಚೆಲ್ಲಿದ್ದಾರೆ. ಮಳವಳ್ಳಿ ಆಡಳಿತವು ದಿಕ್ಕು ದಿಸೆಯಿಲ್ಲದೇ ಸಾಗುತ್ತಿದೆ. ಮೂರು ಬಾರಿ ಶಾಸಕರಾಗಿರುವವರ ಕ್ಷೇತ್ರದ ಬಗ್ಗೆ ಲೋಕಾಯುಕ್ತರು ತಪ್ಪನ್ನು ಹುಡುಕಿ ಹೇಳುತ್ತಿದ್ದಾರೆ ಎಂದರೆ ಇದರ ಅರ್ಥ ಏನು ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಪ್ರಶ್ನಿಸಿದರು.

ಅಕ್ರಮವಾಗಿ ಖಾತೆ ಮಾಡಲಾಗಿದ್ದ 305 ಎಕರೆಯನ್ನು ವಜಾ ಮಾಡಿದ್ದೇನೆ ಎನ್ನುವ ತಹಶೀಲ್ದಾರ್ ಅವರು ಲೋಕಾಯುಕ್ತರು ಕೇಳುವ ಪ್ರಶ್ನೆಗೆ ಉತ್ತರ ನೀಡಿಲ್ಲ, ಇಲ್ಲಿ 305 ಎಕರೆ ಆರ್ಟಿಸಿ ವಜಾ ಮಾಡಿದ್ದೇನೆ ಎಂದ ಮೇಲೆ ಮುಂದೆ ಏನು ಕ್ರಮ ಆಗಿದೆ ಎನ್ನುವ ಉತ್ತರವೇ ಇಲ್ಲ, ನಿಷ್ಕ್ರಿಯ ತಾಲ್ಲೂಕು ಆಡಳಿತ ಎನ್ನುವುದು ಸಾಬೀತಾಗಿದೆ, ಇಲ್ಲಿ ಹಾಲಿ ಶಾಸಕರ ಕೆಲಸ ಏನು ಎಂಬುದೆ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಕ್ಷೇತ್ರದ ಮಾಜಿ ಶಾಸಕನಾಗಿ ಈ ಸಂಬಂಧ ಸಾಕಷ್ಟು ಬಾರಿ ಕ್ರಮ ವಹಿಸಲು ಮನವಿ ಮಾಡಿದ್ದೆ. ಆದರೆ, ಯಾವುದೇ ಕ್ರಮ ಕೈಗೊಳ್ಳದ ಕಾರಣ ನಮ್ಮ ಮುಖಂಡ ಸಿದ್ದಾಚಾರ್ ಅವರ ಮೂಲಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ಇದೀಗ ತಾಲ್ಲೂಕು ಆಡಳಿತ ಭೂಗಳ್ಳರ ಪರವಾಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತಾಲ್ಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಹಾಲಿ ಶಾಸಕರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಟೀಕಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ನಿರ್ಮಿಸಲಾದ ಅಂಬೇಡ್ಕರ್ ಪ್ರತಿಮೆ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಲಾಗಿಲ್ಲ, ಕೇಂದ್ರ ಸಚಿವರು ನೀಡಿದ ₹10 ಲಕ್ಷದಲ್ಲಿ ಕಾಂಪೌಂಡ್ ನಿರ್ಮಿಸಿರುವುದು ಬಿಟ್ಟರೆ ಬೇರೆ ಕೆಲಸ ಮಾಡಿಲ್ಲ. ಜಲಜೀವನ್ ಮಿಷನ್ ಯೋಜನೆಯು ತಾಲ್ಲೂಕಿನ ಯಾವ ಗ್ರಾಮದಲ್ಲೂ ಜಾರಿಯಾಗಿಲ್ಲ. ಇದಕ್ಕಾಗಿ ರಸ್ತೆ ಅಗೆದಿರುವುದನ್ನು ಸರಿಪಡಿಸಿಲ್ಲ. ಕನಕ ಭವನ ಮತ್ತು ಬಸವ ಭವನ ನಿರ್ಮಾಣ ಮಾಡುವಲ್ಲಿ ಶಾಸಕರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪೂರಿಗಾಲಿ ಏತನೀರಾವರಿ ಯೋಜನೆ ಶೇ 90 ರಷ್ಟು ಕಾಮಗಾರಿ ಸೇರಿ ಇತರೆ ಕೆಲಸ ನಾನೆ ಮಾಡಿಸಿದ್ದೆ ಎಂಬುದನ್ನು ಜನರೇ ಹೇಳುತ್ತಾರೆ. ಇನ್ನುಳಿದ ಶೇ 10 ರಷ್ಟು ಕೆಲಸವನ್ನು ಹಾಲಿ ಶಾಸಕರು ಮಾಡಿಸಲು ಆಗುತ್ತಿಲ್ಲ, ಅಲ್ಲಿ ಪೈಪ್ಲೈನ್ಗಳು ಕಿತ್ತು ಹೊರ ಬಂದಿವೆ, ಈಗ ನೀರು ಬಿಟ್ಟರೂ ಅದೆಲ್ಲಿ ಕಿತ್ತುಕೊಂಡು ಹರಿಯುತ್ತದೋ ಆ ದೇವರೇ ಬಲ್ಲ, ಇನ್ನೂ ಜನರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಸುಮೋಟೊ ಪ್ರಕರಣ ದಾಖಲಿಸುವಂತೆ ಶಾಸಕರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಸಾರ್ವಜನಿಕರ ಕೆಲಸ ಮಾಡಲು ಪ್ರಶ್ನೆ ಮಾಡಬಾರದೆ, ಶಾಸಕರು ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಹನುಮಂತು, ಶಂಕರ್, ಚೇತನ್, ಸಿದ್ದಾಚಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-40-1437366066

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.