ಮಳವಳ್ಳಿ: ಪಟ್ಟಣದ ಹೊರವಲಯದ ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವವು ಮೇ 26ರಿಂದ ಜೂನ್ 7ರವರಗೆ ನಡೆಯಲಿದ್ದು, ಜೂನ್ 3ರಂದು ದಿವ್ಯ ಬ್ರಹ್ಮರಥೋತ್ಸವ ಜರುಗಲಿದೆ.

ಐತಿಹಾಸಿಕ ಹಿನ್ನೆಲೆಯುಳ್ಳ ಮಾರೇಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇನಸ್ಥಾನದಲ್ಲಿ 26ರಂದು ಉತ್ಸವವನ್ನು ಮಳವಳ್ಳಿಯಿಂದ ದೇವಸ್ಥಾನಕ್ಕೆ ತರಲಾಗುತ್ತದೆ. 27 ಮತ್ತು 28ರಂದು ನಿತ್ಯಕಟ್ಲೆ, ರಾತ್ರಿ ಅಂಕುರಾರ್ಪಣ, ಧ್ವಜಾರೋಹಣ ನಡೆಯಲಿದೆ. 29ರಂದು ನಿತ್ಯಕಟ್ಲೆ, 30ರಂದು ಸೌರಮಾನ ನರಸಿಂಹ ಜಯಂತಿ, 31ರಂದು ಹಗಲು ಹಂಸವಾಹನೋತ್ಸವ, ರಾತ್ರಿ ಪುಷ್ಪ ಮಂಟಪೋತ್ಸವ ಜರುಗಲಿದೆ.

ಜೂನ್ 1ರಂದು ಬೆಳಿಗ್ಗೆ ಶೇಷವಾಹನೋತ್ಸವ, ರಾತ್ರಿ ಪ್ರಹ್ಲಾದ ಪರಿಪಾಲನೋತ್ಸವ, ಗರುಡೋತ್ಸವ, ಜೂನ್ 2ರಂದು ಗಜವಾಹನೋತ್ಸವ, ಮಧ್ಯಾಹ್ನ ನಿವೇದನ, ರಾತ್ರಿ ಕಲ್ಯಾಣೋತ್ಸವ, ಗಜೇಂದ್ರಮೋಕ್ಷ ಸೇವೆ, ಜೂನ್ 3ರಂದು ಮಧ್ಯಾಹ್ನ 1.59ರಿಂದ 2.20ರೊಳಗೆ ದಿವ್ಯ ಬ್ರಹ್ಮರಥೋತ್ಸವ, ಪುಷ್ಪಾ ಅಲಂಕಾರ, ಯಾತ್ರಾದಾನ, ಮಂಟಪೋತ್ಸವ ಶಾಂತೋತ್ಸವ, ಜೂನ್ 4ರಂದು ಬೆಳಿಗ್ಗೆ ಹನುಮಂತ್ಯುತ್ಸವ, ಗರುಡೋತ್ಸವ, ನೈವೇದ್ಯ ಪ್ರಸಾದ, ರಾತ್ರಿ ಶಯನೋತ್ಸವ ನಡೆಯಲಿದೆ.

5ರಂದು ವಸಂತೋತ್ಸವ, ತೀರ್ಥಸ್ನಾನ, ಅವರೋಹನ, ಫನಿಮಾಲೆ ಉತ್ಸವ, ಜೂನ್ 6ರಂದು ಅಹಾಭಿಷೇಕ, ಆರಾಧನೆ, ಜೂನ್ 7ರಂದು ಸೊಪ್ಪಿನ ಸೇವೆ, ಅಭಿಷೇಕದ ನಂತರ ಉತ್ಸವವನ್ನು ಮಾರೇಹಳ್ಳಿಯಿಂದ ಮಳವಳ್ಳಿಗೆ ಬಿಜಯ ಮಾಡಿಸುವುದರ ಮೂಲಕ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-40-316694014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.