ಮಳವಳ್ಳಿ: ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಸಾಕು ನಾಯಿಯನ್ನು ಗುಂಡು ಹಾರಿಸಿ ಕೊಂದು ಪರಾರಿಯಾಗಿದ್ದ ಮುಸುಕುಧಾರಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಬುಗತಗಹಳ್ಳಿ ಗ್ರಾಮದ ಎಂ.ಬಾಲಾಜಿ(26) ಹಾಗೂ ಪಟ್ಟಣ ವ್ಯಾಪ್ತಿಯ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.

ಆರೋಪಿಗಳು ಹಂದಿ ಬೇಟೆಗಾರರಾಗಿದ್ದು, ಏ.5ರಂದು ಮಾಗನೂರು ಬಳಿ ಬೈಕ್ವೊಂದನ್ನು ಕಳವು ಮಾಡಿಕೊಂಡು ಎರಡು ಬೈಕ್ಗಳಲ್ಲಿ ಶೆಟ್ಟಹಳ್ಳಿಗೆ ತೆರಳಿ ಅಲ್ಲಿನ ನಾಲೆಯ ಬಳಿ ಒಂದು ಬೈಕ್ ನಿಲ್ಲಿಸಿ ಮೂವರು ಒಂದೇ ಬೈಕ್ ನಲ್ಲಿ ಮಧ್ಯರಾತ್ರಿ ಹಂದಿ ಬೇಟೆಗೆ ತೆರಳಿದ್ದರು. ಶೆಟ್ಟಹಳ್ಳಿ ಗ್ರಾಮದ ಹೊರವಲಯದ ಮನೆಯೊಂದರ ಬಳಿ ಕಟ್ಟಿಹಾಕಿದ್ದ ನಾಯಿಯ ಮೇಲೆ ಗುಂಡು ಹಾರಿಸಿ ಕೊಂದು ಪರಾರಿಯಾಗಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದಕ್ಕೂ ಮುನ್ನ ಏ.2ರಂದು ಬೇಟೆಗೆ ಹೋಗಿದ್ದ ವೇಳೆಯಲ್ಲಿಯೂ ಅದೇ ನಾಯಿ ಆರೋಪಿಗಳನ್ನು ಕಂಡು ಬೊಗಳಿತ್ತು. ಅಲ್ಲದೇ ಮನೆಯ ಮಾಲೀಕ ಶಿವಕುಮಾರ್ ಹೊರಗಡೆ ಬಂದು ನೋಡಿದ್ದರು. ಅದೇ ವೇಳೆಗೆ ಪೊಲೀಸರು ಸಹ ಅಲ್ಲಿಯೇ ತಿರುಗಾಡಿದ್ದರು. ಮನೆ ಮಾಲೀಕನೇ ಪೊಲೀಸರಿಗೆ ಕರೆ ಮಾಡಿದ್ದರು ಎನ್ನುವ ಅನುಮಾನ ಆರೋಪಿಗಳಲ್ಲಿ ಕಾಡಿತ್ತು.

ಹಿಂದೆ ಬೇಟೆ ಕೈತಪ್ಪಿರುವುದಕ್ಕೆ ನಾಯಿ ಮೇಲೆ ದ್ವೇಷಸಾಧಿಸಿ ಗುಂಡಿನ ದಾಳಿ ನಡೆಸಿ ನಾಯಿಯನ್ನು ಸಾಯಿಸಿದ್ದರು. ಈ ವೇಳೆ ಮನೆಯ ಕಿಟಕಿಗೂ ಗುಂಡು ತಗುಲಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳನ್ನು ಮಲೆಮಹದೇಶ್ವರ ಬೆಟ್ಟದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ನಾಡ ಬಂದೂಕು, ಮದ್ದು-ಗುಂಡುಗಳು, ಎರಡು ಬೈಕ್ ಹಾಗೂ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-15-1045384541

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.