ಮೇಲುಕೋಟೆ: : ಯೋಗನರಸಿಂಹಸ್ವಾಮಿ ಬೆಟ್ಟದ ದೇಗುಲದಲ್ಲಿ ಲೋಕಕಲ್ಯಾಣಾರ್ಥವಾಗಿ ಶನಿವಾರ ನರಸಿಂಹ ಜಯಂತಿ ವೈಭವದಿಂದ ನೆರವೇರಿತು. ಸಹಸ್ರಾರು ಭಕ್ತರು ದರ್ಶನ ಪಡೆದು ಪುನೀತರಾದರು.

ಬೆಟ್ಟದ ದೇವಾಲಯದ ಗರ್ಭಾಂಕಣ ಮತ್ತು ಸುಕನಾಸಿಯ ಚಾವಣಿಯನ್ನು ಫಲವಸ್ತ್ರದಿಂದ ಭವ್ಯವಾಗಿ ಅಲಂಕಾರ ಮಾಡಲಾಗಿತ್ತು. ನರಸಿಂಹಾವತಾರ ಯೋಗಾನರಸಿಂಹಸ್ವಾಮಿಗೆ ಹಾಲು, ಮೊಸರು, ಜೇನು, ಎಳೆನೀರು, ಮಂಗಳ ದ್ರವ್ಯವಗಳಿಂದ ವೇದಮಂತ್ರಗಳೊಂದಿಗೆ ಮಹಾಭಿಷೇಕ ನೆರವೇರಿಸಿ, ಮಳೆ, ಬೆಳೆ ಸಂಮೃದ್ಧಿಯಾಗಿ ನಾಡಿನಲ್ಲಿ ಸುಭಿಕ್ಷ ಉಂಟಾಗಲಿ ಎಂದು ಪ್ರಾರ್ಥಿಸಲಾಯಿತು.

ಸಂಜೆ ದಿವ್ಯಪ್ರಬಂಧ ಪಾರಾಯಣ ಶಾತ್ತುಮೊರೆ ಮಹಾಮಂಗಳಾರತಿ ನೆರವೇರಿತು. ಚೆಲುವನಾರಾಯಣಸ್ವಾಮಿಗೆ ನರಸಿಂಹಾವತಾರ ಉತ್ಸವ ವೈಭವದಿಂದ ನೆರವೇರಿತು. ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಮ್ಮಾಳ್ವಾರ್ ತಿರುನಕ್ಷತ್ರ ಮಹೋತ್ಸವ ಸಹ ವೈಭವದಿಂದ ಆಚರಿಸಲಾಯಿತು. ಹತ್ತು ದಿನಗಳಿಂದ ನಡೆಯುತ್ತಿದ್ದ ನರಸಿಂಹ ಜಯಂತಿಯ ಕಾರ್ಯಕ್ರಮಗಳು ಶನಿವಾರ ಸಂಪನ್ನಗೊಂಡಿತು. ಬೆಟ್ಟದ 365 ಮೆಟ್ಟಿಲುಗಳಿಗೂ ಹಾಗೂ ಮಂಟಪಗಳಿಗೆ ಹೂಗಳಿಂದ ಅಲಂಕಾರ ನೋಡುಗರ ಗಮನಸೆಳೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-40-442421026

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.