ಪಾಂಡವಪುರ: ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವದ ವೈರಮುಡಿ ಮತ್ತು ರಾಜಮುಡಿ ವಜ್ರ ಕಿರೀಟಗಳನ್ನು ಇರಿಸಲಾಗುವ ಚಾರಿತ್ರಿಕ ಅರವಟ್ಟಿಗೆ ಮಂಟಪಗಳನ್ನು (ವೈರಮುಡಿ ಮಂಟಪ) ಸುಣ್ಣಬಣ್ಣಗಳೊಂದಿಗೆ ಸಿದ್ಧಗೊಳಿಸಲಾಗಿದೆ.

ಶ್ರೀರಂಗಪಟ್ಟಣದ ಕಿರಂಗೂರು ಬಳಿಯಿಂದ ಪ್ರಾರಂಭಗೊಳ್ಳುವ ಮೆರವಣಿಗೆ ಸಿದ್ಧತೆ ನಡೆಸಿದ್ದಾರೆ. ವೈರಮುಡಿ ಮತ್ತು ರಾಜಮುಡಿ ವಜ್ರಖಚಿತ ಕಿರೀಟಗಳನ್ನು ಶನಿವಾರ ಸ್ವಾಗತಿಸಿ ಪೂಜೆ ಸಲ್ಲಿಸಲಾಗುತ್ತದೆ. ಬೆಳಿಗ್ಗೆ ಮಂಡ್ಯ ನಗರದ ಜಿಲ್ಲಾ ಖಜಾನೆಯಲ್ಲಿ ವಜ್ರಖಚಿತ ಕಿರೀಟಗಳಿಗೆ ಜಿಲ್ಲಾಡಳಿತ ಮತ್ತು ಭಕ್ತರು ಪೂಜೆ ಸಲ್ಲಿಸಿದ ಮೇಲೆ ಮೈಸೂರಿನ ರಾಜ ಒಡೆಯರ್ ಅವರ ರಾಜಗುರು ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ವಾಹನದಲ್ಲಿ ರಾಜಮುಡಿ ಮತ್ತು ರಾಜಮುಡಿ ವಜ್ರ ಖಚಿತ ಕಿರೀಟಗಳನ್ನು ಬಿಗಿಪೊಲೀಸ್ ಭದ್ರತೆಯೊಂದಿಗೆ ಶ್ರೀರಂಗಪಟ್ಟಣ–ಪಾಂಡವಪುರದ ಮೂಲಕ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಪಾಂಡವಪುರ ಪಟ್ಟಣಕ್ಕೆ ಆಗಮಿಸಿದಾಗ ತಾಲ್ಲೂಕು ಆಡಳಿತದಿಂದ ಸ್ವಾಗತಿಸಿ ಪೂಜೆ ಸಲ್ಲಿಸಲಾಗುತ್ತದೆ.

ಪಾಂಡವಪುರ ತಾಲ್ಲೂಕಿನ ಕೆನ್ನಾಳು ಗೇಟ್, ಹರಳಹಳ್ಳಿ ಬಳಿ, ಪಾಂಡವಪುರ ಪಟ್ಟಣ, ಬನಘಟ್ಟ, ಮಹದೇಶ್ವರಪುರ ಬಳಿ, ನೀಲನಹಳ್ಳಿ ಗೇಟ್ ಬಳಿ, ಬೆಳ್ಳಾಳೆ, ಜಕ್ಕನಹಳ್ಳಿ, ಕದಲಗೆರೆ ಸೇರಿದಂತೆ ಇತರ ಗ್ರಾಮಗಳಲ್ಲಿ ಇರುವ ವೈರಮುಡಿ ಮಂಟಪಗಳಲ್ಲಿ ವೈರಮುಡಿ ಮತ್ತು ರಾಜಮುಡಿ ವಜ್ರಖಚಿತ ಕಿರೀಟಗಳಿಗೆ ಭಕ್ತರು ಮತ್ತು ಸಾರ್ವಜನಿಕರು ಪೂಜೆ ಸಲ್ಲಿಸುತ್ತಾರೆ.

ಸಂಜೆ ಮೇಲುಕೋಟೆಗೆ ತಲುಪುವ ವೈರಮುಡಿ ಕಿರೀಟವನ್ನು ಚಲುವನಾರಾಯಣಸ್ವಾಮಿಯ ದೇವರಿಗೆ ಧಾರಣೆ ಮಾಡಲಾಗುತ್ತದೆ. 1610ರಲ್ಲಿ ರಾಜ ಒಡೆಯರ್ ಕಾಲದಲ್ಲಿ ಶ್ರೀರಂಗಪಟ್ಟಣ ರಾಜಧಾನಿಯಾಗಿತ್ತು. ರಾಜ ಒಡೆಯರ್ ಅವರು ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವರನ್ನು ತನ್ನ ಆರಾಧ್ಯ ದೇವರನ್ನಾಗಿ ಮಾಡಿಕೊಂಡಿದ್ದರು. ಮೇಲುಕೋಟೆಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ವೈರಮುಡಿ ಬ್ರಹ್ಮೋತ್ಸವಕ್ಕೆ ತಾವು ಭಾಗವಹಿಸಿ ವಜ್ರದ ವೈರಮುಡಿ ಮತ್ತು ರಾಜಮುಡಿ ಕಿರೀಟಧಾರಣೆಯೊಂದಿಗೆ ಕಂಗೊಳಿಸುವ ಚಲುವನಾರಾಣಸ್ವಾಮಿ ಉತ್ಸವನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ರಾಜ ಒಡೆಯರ್ ಅವರು 1617ರಲ್ಲಿ ಮೇಲುಕೋಟೆಯಲ್ಲಿಯೇ ಸಾವನ್ನಪ್ಪುತ್ತಾರೆ.

ಶ್ರೀರಂಗಪಟ್ಟಣದಿಂದ ಪಾಂಡವಪುರ ಮಾರ್ಗವಾಗಿ ಮೇಲುಕೋಟೆಗೆ ಈ ವಜ್ರ ಕಿರೀಟಗಳು ಭದ್ರತೆಯೊಂದಿಗೆ ಹೋಗುತ್ತಿದ್ದವು. ಹೀಗಾಗಿ ದಾರಿಯುದ್ದಕ್ಕೂ ಅಲ್ಲಲ್ಲಿ ಅರವಟ್ಟಿಗೆ ಮಂಟಪಗಳನ್ನು (ವೈರಮುಡಿ ಮಂಟಪ) ರಾಜ ಒಡೆಯರ್ ಅವರ ನಿರ್ಮಿಸಿದ್ದರು. ಪ್ರತಿ ವರ್ಷ ವೈರಮುಡಿ ಬ್ರಹ್ಮೋತ್ಸವದ ವೇಳೆ ಈ ಮಂಟಪಗಳಿಗೆ ಭಕ್ತರು ಸುಣ್ಣಬಣ್ಣಗಳನ್ನು ಹಚ್ಚಿ ಅಲಂಕರಿಸುತ್ತಾರೆ. ವೈರಮುಡಿ ಮತ್ತು ರಾಜಮುಡಿ ಕಿರೀಟಗಳು ಬಂದಾಗ ಸಡಗರ ಸಂಭ್ರಮದಿಂದ ಸ್ವಾಗತಿಸಿಕೊಂಡು ಪೂಜೆ ಸಲ್ಲಿಸುತ್ತಾರೆ. ಬಳಿಕ ಮೇಲುಕೋಟೆಗೆ ಕಳುಹಿಸಿ ಕೊಡುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-40-108468550

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.