ಪಾಂಡವಪುರ: ‘ಪುರುಷರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಿ, ರಕ್ಷಣೆ ನೀಡುವ ಉದ್ದೇಶದಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿಯನ್ನು ರೂಪಿಸಲಾಗಿದೆ’ ಎಂದು ಸಮಿತಿಯ ಗೌರವ ಅಧ್ಯಕ್ಷ ಎ.ಎಚ್.ವಿಶ್ವನಾಥ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಸಮಿತಿಯು ಎಲ್ಲಾ ಕ್ಷೇತ್ರದವರನ್ನು ಒಳಗೊಳ್ಳಲಿದೆ. ಸದಸ್ಯರು ಜಾತಿ, ಧರ್ಮ, ಪಕ್ಷಭೇದ ಮರೆತು ಕೆಲಸ ಮಾಡಬೇಕು’ ಎಂದರು.

ರಾಷ್ಟ್ರೀಯ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ‘ಪುರುಷರ ಹಕ್ಕುಗಳು, ರಕ್ಷಣೆಗಾಗಿ ನಿರ್ಮಾಣಗೊಂಡಿರುವ ಪ್ರಥಮ ಸಂಘಟನೆ ಇದು’ ಎಂದರು.

ಸಮಿತಿಯ ಪದಾಧಿಕಾರಿ ವಕೀಲ ಗುರುಪ್ರಸಾದ್, ಸಂಸ್ಥಾಪಕ ಅಧ್ಯಕ್ಷೆ ರಜಿನಿರಾಜ್, ಉಪಾಧ್ಯಕ್ಷ ಎಂ.ಎನ್.ನಟರಾಜು, ಖಜಾಂಚಿ ವೇದಾವಲ್ಲಿ, ಸಹಕಾರ್ಯದರ್ಶಿ ಜಿ.ಟಿ.ವೀರಪ್ಪ, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾಅರಸ್ಸು, ಉಪಾಧ್ಯಕ್ಷ ಈ.ಸಿ.ನಿಂಗರಾಜೇಗೌಡ, ನಿರ್ದೇಶಕರಾದ ಚಿದಂಬರ್, ಕೊಪ್ಪಕುಮಾರ್, ಮಂಡ್ಯ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕೃಷ್ಣೇಗೌಡ, ತಗ್ಗಹಳ್ಳಿ ವೆಂಕಟೇಶ್, ಗುರುಪ್ರಸಾದ್ ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-40-1702939903

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.