ಮಂಡ್ಯ: ಮಿಮ್ಸ್ನಲ್ಲಿ ಭ್ರಷ್ಟಾಚಾರ, ಅವ್ಯವಸ್ಥೆ, ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ವಿಜ್ಞಾನ ಸಂಸ್ಥೆಯ ಮುಖ್ಯ ದ್ವಾರದಲ್ಲಿಯೇ ಧರಣಿ ಕುಳಿತ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಮಿಮ್ಸ್ ಭ್ರಷ್ಟಾಚಾರದ ಕೊಂಪೆಯಾಗಿ ಅವ್ಯವಸ್ಥೆಯ ಆಗರವಾಗಿದೆ. 158 ಜನ ವೈದ್ಯರಿದ್ದರೂ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ₹2ರಿಂದ ₹3 ಲಕ್ಷ ವೇತನ ಪಡೆಯುವ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಿಲ್ಲ. ಬದಲಿಗೆ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿ ಕಮಿಷನ್ ಪಡೆಯುವುದು ಇವರ ಕಾಯಕವಾಗಿದೆ’ ಎಂದು ಕಿಡಿಕಾರಿದರು.

ಆಸ್ಪತ್ರೆಯ ಯಂತ್ರೋಪಕರಣಗಳು ಹಾಗೂ ಚಿಕಿತ್ಸೆಗೆಂದು ಕೋಟ್ಯಂತರ ರೂಪಾಯಿ ಹಣವನ್ನು ನೀಡಲಾಗುತ್ತಿದೆ. ಯಂತ್ರಗಳನ್ನು ತುಕ್ಕು ಹಿಡಿಯಲು ಬಿಟ್ಟಿದ್ದಾರೆ. ಔಷಧಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಈಗಾಗಲೇ ಆರೋಗ್ಯ, ಶಿಕ್ಷಣ, ವಸತಿ ಆಹಾರ ಎಲ್ಲವೂ ದುಬಾರಿಯಾಗಿರುವ ಹೊತ್ತಿನಲ್ಲಿ ಜನಸಾಮಾನ್ಯರಿಗೆ ತೊಂದರೆ ಕೊಡುವುದು ನ್ಯಾಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾನ್ಸರ್ ಚಿಕಿತ್ಸೆ ಕೇಂದ್ರದ ಕಟ್ಟಡ ನಿರ್ಮಾಣವಾಗಿ ಹಲವು ವರ್ಷವೇ ಆದರೂ ಇನ್ನೂ ಉದ್ಘಾಟನೆ ಮಾಡಿಲ್ಲ. ಪರಿಣಾಮ ಬಡ ರೋಗಿಗಳು ಬೆಂಗಳೂರು-ಮೈಸೂರಿಗೆ ಹೋಗಿ ದುಬಾರಿ ಹಣ ಕೊಟ್ಟು ಚಿಕಿತ್ಸೆ ಪಡೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

‘ಉಪಲೋಕಾಯುಕ್ತರು ಛೀಮಾರಿ ಹಾಕಿದ್ದರೂ ಇಲ್ಲಿ ಸುಧಾರಣೆ ಕಂಡಿಲ್ಲ. ವೈದ್ಯರು, ದಾದಿಯರ ವಸತಿಗೃಹಗಳು ಇವೆ. ಅಲ್ಲಿ ಯಾರೂ ಇರುವುದಿಲ್ಲ. ಅವರೆಲ್ಲರೂ ಹೊರಗೆ ಇದ್ದಾರೆ. ಈ ಆಸ್ಪತ್ರೆ ಸುಧಾರಣೆ ಕಾಣುವವರೆಗೂ ಧರಣಿ ವಾಪಸ್ ಪಡೆಯುವ ಮಾತಿಲ್ಲ’ ಎಂದು ಮುಖಂಡರಾದ ಅಣ್ಣಯ್ಯ, ಎಚ್.ಡಿ.ಜಯರಾಂ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಣಿ ಹುಳ್ಳೇನಹಳ್ಳಿ, ಮಮತಾ, ವಿಜಯಕುಮಾರ್, ಶಿವರಾಮು, ಕಿರಣ್, ಕೃಷ್ಣ, ಲತಾ ಶಂಕರ್, ಸಾಗರ್, ಕನ್ನಲಿ ನವೀನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.