ಮಂಡ್ಯ: ‘ಸಹಜ ಹೆರಿಗೆ’ಗೆ (ನಾರ್ಮಲ್ ಡೆಲಿವರಿ) ಉತ್ತೇಜನ ನೀಡಲು ‘ಮಿಡ್ವೈಫರಿ ನೇತೃತ್ವದ ಆರೈಕೆ ಘಟಕ’ವನ್ನು (ಎಂ.ಎಲ್.ಸಿ.ಯು) ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆಸ್ಪತ್ರೆಯಲ್ಲಿ ತೆರೆಯಲಾಗಿದೆ.

ಈ ಘಟಕದಲ್ಲಿ ಕಡಿಮೆ ಅಪಾಯದ (ಲೋ ರಿಸ್ಕ್) ಗರ್ಭಧಾರಣೆ ಪ್ರಕರಣಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಗರ್ಭಧಾರಣೆಯ ಸಮಯದಿಂದ ಹೆರಿಗೆಯಾಗುವವರೆಗೆ ತಾಯಿ ಮತ್ತು ಮಗುವಿನ ಆರೋಗ್ಯ, ಆರೈಕೆ ಮತ್ತು ಬೆಳವಣಿಗೆಯ ಹಂತಗಳ ಮೇಲೆ ಶುಶ್ರೂಷಕಿಯರು ವಿಶೇಷ ನಿಗಾ ಇಟ್ಟು, ಸಹಜ ಹೆರಿಗೆ ಮಾಡಿಸಲು ಶ್ರಮಿಸುತ್ತಾರೆ. ಅಗತ್ಯವಿದ್ದರಷ್ಟೇ ತಜ್ಞವೈದ್ಯರ ನೆರವು ಪಡೆಯುತ್ತಾರೆ.

ಮಿಮ್ಸ್ ಆಸ್ಪತ್ರೆಯ ನಾಲ್ವರು ಶುಶ್ರೂಷಕಿಯರು ಈಗಾಗಲೇ ‘ವಿಶೇಷ ತರಬೇತಿ’ ಪಡೆದುಕೊಂಡು ಬಂದಿದ್ದಾರೆ. ಘಟಕಕ್ಕೆ ಬೇಕಾದ ಬೆಡ್ಗಳನ್ನು ಅಳವಡಿಸಲಾಗಿದೆ. ಹಾಟ್ ವಾಟರ್ ಬ್ಯಾಗ್, ಮೆತ್ತನೆಯ ತಲೆದಿಂಬು, ಕೋಲ್ಡ್ ಪ್ಯಾಕ್, ಜಿಮ್ ಬಾಲ್ಸ್, ಟೆನಿಸ್ ಬಾಲ್, ಯೋಗಾ ಮ್ಯಾಟ್, ಡ್ರೆಸಿಂಗ್ ಟ್ರಾಲಿ, ರೆಫ್ರಿಜರೇಟರ್ ಸೇರಿದಂತೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಜೋಡಿಸಲಾಗಿದೆ. ಜಿಲ್ಲಾ ಪಂಚಾಯಿತಿಯಿಂದ ₹25 ಲಕ್ಷ ಅನುದಾನ ಭರಿಸಲಾಗಿದೆ.

‘ನರ್ಸ್ ಪ್ರಾಕ್ಟೀಷನರ್ ಇನ್ ಮಿಡ್ವೈಫರಿ‘ (ಎನ್.ಪಿ.ಎಂ) ಸಿಬ್ಬಂದಿ ಆಸ್ಪತ್ರೆಗೆ ಬಂದ ಗರ್ಭಿಣಿಯರನ್ನು ಕೌನ್ಸೆಲಿಂಗ್ ಮಾಡಿ, ಆತಂಕವನ್ನು ನಿವಾರಿಸುತ್ತಾರೆ. ಲೋ ರಿಸ್ಕ್ ಪ್ರಕರಣಗಳ ಗರ್ಭಿಣಿಯರಿಗೆ ಮ್ಯೂಸಿಕ್, ಅರೋಮಾ, ವ್ಯಾಯಾಮ ಮುಂತಾದ ಥೆರಪಿಗಳನ್ನು ನೀಡುತ್ತಾರೆ. ಈ ಮೂಲಕ ಸಿಸೇರಿಯನ್ ಡೆಲಿವರಿಗಳನ್ನು ನಿಯಂತ್ರಿಸಿ, ಸಹಜ ಹೆರಿಗೆಗೆ ಉತ್ತೇಜನ ನೀಡಲಾಗುತ್ತದೆ’ ಎನ್ನುತ್ತಾರೆ ಮಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಮನೋಹರ್.

ವೇಗದ ಚೇತರಿಕೆ:

‘ಶಸ್ತ್ರಚಿಕಿತ್ಸೆಯಿಂದ (ಸಿಸೇರಿಯನ್) ಉಂಟಾಗುವ ಅಪಾಯಗಳು ಮತ್ತು ಸೋಂಕುಗಳನ್ನು ಕಡಿಮೆ ಮಾಡಿ, ಸಹಜ ಹೆರಿಗೆಗೆ ಆದ್ಯತೆ ನೀಡುವುದರಿಂದ ತಾಯಿಯ ಚೇತರಿಕೆ ವೇಗವಾಗಿರುತ್ತದೆ ಹಾಗೂ ಮಗುವಿಗೆ ನೈಸರ್ಗಿಕ ರೋಗನಿರೋಧಕ ಶಕ್ತಿ ದೊರೆಯಲು ಸಹಾಯವಾಗುತ್ತದೆ’ ಎನ್ನುತ್ತಾರೆ ವೈದ್ಯರು.

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಈ ಎಂ.ಎಲ್.ಸಿ.ಯು ಘಟಕ ಈಗಾಗಲೇ ಚಾಲ್ತಿಯಲ್ಲಿದೆ. ಅದೇ ಮಾದರಿಯಲ್ಲಿ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲೂ ಘಟಕ ಆರಂಭವಾಗಬೇಕು ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಕೆಲವು ತಿಂಗಳ ಹಿಂದೆ ಯೋಜನೆ ರೂಪಿಸಿದರು. ಆ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದಿದೆ.

ಸ್ವಾಭಾವಿಕ ಹೆರಿಗೆಗೆ ಉತ್ತೇಜನ, ಮಹಿಳಾ ಕೇಂದ್ರಿತ ಆರೈಕೆ, ಆರಾಮದಾಯಕ ವಾತಾವರಣ, ಲೋ ರಿಸ್ಕ್ ಪ್ರಕರಣಗಳನ್ನು ಶುಶ್ರೂಷಿಕಿಯರೇ ಯಶಸ್ವಿಯಾಗಿ ನಿರ್ವಹಣೆ ಮಾಡುವುದು ಎಂ.ಎಲ್.ಸಿ.ಯು ಘಟಕದ ಮೂಲ ಉದ್ದೇಶವಾಗಿದೆ.

ಪ್ರಯೋಜನಗಳು: ‘ಸಿಸೇರಿಯನ್ ಡೆಲಿವರಿಗಳನ್ನು ಕಡಿತ ಮಾಡಿ, ನೈಸರ್ಗಿಕ ವಿಧಾನದಲ್ಲಿ ಹೆರಿಗೆ ಮಾಡಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಉತ್ತಮ ಕ್ಲಿನಿಕಲ್ ಫಲಿತಾಂಶಗಳನ್ನು ಪಡೆಯಬಹುದು. ಸಿಸೇರಿಯನ್ ಡೆಲಿವರಿಗೆ ತಗಲುವ ದುಬಾರಿ ವೆಚ್ಚವನ್ನು ಕಡಿತಗೊಳಿಸಿ, ಬಡವರಿಗೆ ಕಡಿಮೆ ಖರ್ಚಿನಲ್ಲಿ ಹೆರಿಗೆ ಮಾಡಿಸಬಹುದು’ ಎನ್ನುತ್ತಾರೆ ‘ಮಿಮ್ಸ್’ ನಿರ್ದೇಶಕ ಡಾ.ನರಸಿಂಹಸ್ವಾಮಿ.

ಇದು ತಾಯಂದಿರ ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಅನಗತ್ಯ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ಕಡಿಮೆ ಮಾಡಲು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ.) ಅಡಿಯಲ್ಲಿ ಬರುವ ಒಂದು ವಿಶೇಷ ಕಾರ್ಯಕ್ರಮವಾಗಿದೆ.

‘ತಾಯಿ ಮರಣ ನಿಯಂತ್ರಿಸಲು ಸಹಕಾರಿ’

‘ಮಿಡ್ವೈಫರಿ ನೇತೃತ್ವದ ಆರೈಕೆ ಘಟಕ’ವು ತಾಯಿ ಮರಣವನ್ನು ನಿಯಂತ್ರಿಸಲು ಸಹಕಾರಿಯಾಗಬಲ್ಲದು. ಪ್ರತಿ ಒಂದು ಲಕ್ಷ ಗರ್ಭಿಣಿಯರಲ್ಲಿ ಸಂಭವಿಸುವ ಸಾವುಗಳ ಸಂಖ್ಯೆಯನ್ನು ‘ತಾಯಂದಿರ ಮರಣ ಪ್ರಮಾಣ’ (ಎಂ.ಎಂ.ಆರ್) ಎಂದು ಪರಿಗಣಿಸಲಾಗುತ್ತದೆ. ಮಿಮ್ಸ್ ಆಸ್ಪತ್ರೆಯಲ್ಲಿ ಮರಣ ಪ್ರಮಾಣ 37.5 ಇದೆ. ಇದನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ’ ಎನ್ನುತ್ತಾರೆ ಮಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಆರ್. ಮನೋಹರ್.

‘ಬಡ ಜನರಿಗೆ ಆಶಾಕಿರಣ’

‘ನರ್ಸಿಂಗ್ ಹೋಮ್ಗಳಲ್ಲಿ ಸಿಸೇರಿಯನ್ ಡೆಲಿವರಿಗಳಿಗೆ ತಗಲುವ ದುಬಾರಿ ವೆಚ್ಚವನ್ನು ಬಡಜನರಿಂದ ಭರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ‘ಸಹಜ ಹೆರಿಗೆ’ಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಮಿಮ್ಸ್ ಆಸ್ಪತ್ರೆಯಲ್ಲಿ ‘ಎಂ.ಎಲ್.ಸಿ.ಯು’ ಆರಂಭಿಸಿದ್ದು ಬಡಜನರ ಪಾಲಿಗೆ ಆಶಾಕಿರಣವಾಗಲಿದೆ. ವಿಶೇಷ ತರಬೇತಿ ಪಡೆದ ಶುಶ್ರೂಷಕಿಯರೇ ನಿರ್ವಹಣೆ ಮಾಡುವುದರಿಂದ ತಜ್ಞವೈದ್ಯರ ಕೊರತೆ ನೀಗಿಸಬಹುದು. ಈ ಕ್ರಮ ‘ಸಂಪನ್ಮೂಲಗಳ ನಿರ್ವಹಣೆ‘ಗೆ ಉತ್ತಮ ಉದಾಹರಣೆಯಾಗಿದೆ’ ಎನ್ನುತ್ತಾರೆ ಮಂಡ್ಯ ಜಿಪಂ ಸಿಇಒ ಕೆ.ಆರ್. ನಂದಿನಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-40-1694094614

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.