ಮಂಡ್ಯ: ‘ರಾಜ ಮಹಾರಾಜರ ಕಾಲದಲ್ಲಿ ಸಂಗೀತ, ನೃತ್ಯ ಮತ್ತು ಕಲೆಗಳಿಗೆ ಅದ್ಭುತವಾದ ಪ್ರೋತ್ಸಾಹ ದೊರೆಯುತ್ತಿತ್ತು. ಮೈಸೂರು ಅರಸರು ಕೇವಲ ಆಡಳಿತಗಾರರಾಗಿರದೆ, ಕಲೆಗಳ ಪೋಷಕರೂ ಆಗಿದ್ದರು’ ಎಂದು ಮೈಸೂರು ಅರಮನೆ ಪೊಲೀಸ್ ಬ್ಯಾಂಡ್ ನಿವೃತ್ತ ವಾದ್ಯಗಾರ ವಿನ್ಸೆಂಟ್ ಅಭಿಪ್ರಾಯ ಪಟ್ಟರು.

ನಗರದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಕಚೇರಿಯಲ್ಲಿ ಗುರುವಾರ ನಡೆದ ಪ್ರತಿಭಾಂಜಲಿ- 25ನೇ ವರ್ಷದ ಸಂಭ್ರಮಾಚರಣೆ ಸಂಚಿಕೆ-4 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಅವರು ವಿದೇಶಗಳಿಂದ ಸಂಗೀತಗಾರರನ್ನು ಆಹ್ವಾನಿಸಿ ಸಂಗೀತ ಪರಂಪರೆಗೆ ನಾಂದಿ ಹಾಡಿದ್ದರು ಎಂದು ತಿಳಿಸಿದರು.

ದೇವರ ಸೃಷ್ಟಿಯಲ್ಲಿ ಸಂಗೀತವೂ ಒಂದು. ಕಲ್ಲು ಹೃದಯವನ್ನೂ ಕರಗಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತವು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು, ಏಕಾಗ್ರತೆ, ತಾಳ್ಮೆ ಎಲ್ಲವನ್ನೂ ಕಲಿಸುತ್ತದೆ. ವಿಶೇಷ ಗೌರವವೂ ಸಿಗುತ್ತದೆ. ಹಾಡುಗಾರಿಕೆ ಮತ್ತು ವಾದ್ಯ ನುಡಿಸುವಿಕೆಯತ್ತ ಯುವಜನರು ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತ ನವೀನ್ ಚಿಕ್ಕಮಂಡ್ಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡೇವಿಡ್ ಪ್ರತಿಭಾಂಜಲಿ, ಗಾಯಕರಾದ ಶಂಕರ್ ರಾಚಪ್ಪ, ಹಂಸಾ, ವಂದನಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-40-1000545154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.