ನಾಗಮಂಗಲ: 44 ವರ್ಷಗಳ ನಂತರ ನಡೆಯುತ್ತಿರುವ ಕಾಟಣ್ಣ ಸ್ವಾಮಿಯವರ ಏಳು ಕೂಟದ ಬೀರೇದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆಯಿಂದಲೆ ಕಾಟಣ್ಣಸ್ವಾಮಿ ಸನ್ನಿಧಿಯಲ್ಲಿ ಅನ್ನಸಂತರ್ಪಣೆ ನಡೆಯಿತು. ಬೆಳಗ್ಗೆ 10.30ಕ್ಕೆ ಕಾಟಣ್ಣಸ್ವಾಮಿ ದೇಗುಲದಿಂದ ಏಳುಕೂಟದ ದೇವರುಗಳ ಉತ್ಸವ ಹೊರಟು ಬನ್ನಿ ಮಂಟಪದಲ್ಲಿ ಸೇರಿ, ಹಣ್ಣು-ತುಪ್ಪ ಪ್ರಸಾದ ಸೇವೆಯೊಂದಿಗೆ ದೇವರ ಶಿವಪೂಜೆ ನಡೆಸಿ ನಂತರ ಬೀರೇಶ್ವರಪುರ ಗ್ರಾಮಕ್ಕೆ ಆಗಮನವಾಯಿತು.

ದೇವರ ಆಗಮನದ ಹಿನ್ನೆಲೆಯಲ್ಲಿ ಗ್ರಾಮದ ಪ್ರತಿ ಬೀದಿ ರಂಗೋಲಿಯಿಂದ ಕಂಗೊಳಿಸಿದವು. ಮಹಿಳೆಯರು ಹೆಣ್ಣು ಮಕ್ಕಳು ತೊಂಬಿಟ್ಟಿನಾರತಿ ಕಳಸ ಹೊತ್ತು ಏಳುಕೂಟದ ದೇವರನ್ನು ಸ್ವಾಗತಿಸಿದರು. ಏಳು ಕೂಟದ ದೇವರು ಪ್ರತಿ ಬೀದಿಯಲ್ಲಿ ಮೆರವಣಿಗೆ ಹೊರಟು ಗ್ರಾಮಸ್ಥರ ಭಕ್ತಿ ಪರವಶತೆಗೆ ಮೆರುಗು ನೀಡಿದವು. ಮಧ್ಯಾಹ್ನದ ನಂತರ ಆರತಿ ಪೂಜೆ ಬಳಿಕ ಪುರುಷರಿಂದ ಓಕುಳಿ ಆಟ ನಡೆಯಿತು. ಸಂಜೆ ಹೆಣ್ಣು ಮಕ್ಕಳ ಓಕುಳಿ ಆಟ ಜರುಗಿತು. ರಾತ್ರಿ ಕಾಟಣ್ಣಸ್ವಾಮಿ ದೇಗುಲದಲ್ಲಿ ಅನ್ನಸಂತರ್ಪಣೆ ನೆರವೇರಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-40-1476853277

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.