ಮದ್ದೂರು: ತಾಲ್ಲೂಕಿನ ಕೊಪ್ಪ ಹೋಬಳಿಯ ನಿಲುವಾಗಿಲು ಗ್ರಾ.ಪಂ. ಪಿಡಿಒ ರವಿಕುಮಾರ್ ಅವರಿಗೆ ಮಾಹಿತಿ ಆಯೋಗವು ₹25 ಸಾವಿರ ದಂಡ ವಿಧಿಸಿದೆ.

ದಂಡ ಮೊತ್ತವನ್ನು ಮೇ ತಿಂಗಳ ಸಂಬಳದಲ್ಲಿ ಕಟಾಯಿಸಿ ಆರ್ಟಿಐ ಖಾತೆಗೆ ಜಮಾ ಮಾಡುವಂತೆ ಮದ್ದೂರು ತಾ.ಪಂ. ಇಒ ಅವರಿಗೆ ಸೂಚನೆ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗ್ರಾ.ಪಂ ವ್ಯಾಪ್ತಿಯ ಮಾರಸಿಂಗನಹಳ್ಳಿ ಗ್ರಾಮದ ರಾಮಕೃಷ್ಣ ಎಂಬುವರು 2004ರಲ್ಲಿ ಮಾರಸಿಂಗನಹಳ್ಳಿ ಗ್ರಾಮದ ಖಾತಾ ಆಂದೋಲನಕ್ಕೆ ಸಂಬಂಧಿಸಿ ಗ್ರಾಮ ಠಾಣಾ ವ್ಯಾಪ್ತಿಯ ಆಸ್ತಿಗಳ ಸಂಖ್ಯೆ ಮತ್ತು ಗ್ರಾಮಸಭೆ ನಡಾವಳಿ ಪತ್ರಕೋರಿ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರು.

ಆದರೆ ನಿಲುವಾಗಿಲು ಗ್ರಾ.ಪಂ. ಪಿಡಿಒ ರವಿಕುಮಾರ್ ಅರ್ಜಿದಾರರಿಗೆ ಕಳೆದ ಎರಡು ವರ್ಷಗಳಿಂದಲೂ ಮಾಹಿತಿ ನೀಡಿರಲಿಲ್ಲ. ಅರ್ಜಿದಾರರು ಮೇಲ್ಮನವಿ ಸಲ್ಲಿಸಿದಾಗ, ಮೇಲ್ಮನವಿ ಪ್ರಾಧಿಕಾರದ ಸಭೆಗೂ ಹಾಜರಾಗದೆ ನಿರ್ಲಕ್ಷ್ಯ ಮಾಡಿದ್ದರು. ದೂರು ಸ್ವೀಕರಿಸಿದ ಮಾಹಿತಿ ಆಯೋಗವು ಪಿಡಿಒ ಸೇರಿದಂತೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ನೋಟೀಸ್ ಜಾರಿಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದಾಗ್ಯೂ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಶಿಸ್ತು ಕ್ರಮವಾಗಿ ₹25 ಸಾವಿರ ದಂಡ ಮತ್ತು ಪಿಡಿಒ ವಿರುದ್ಧ ಕಾನೂನು ರೀತಿಯ ಕ್ರಮವಹಿಸುವಂತೆ ಮಂಡ್ಯ ಜಿ.ಪಂ. ಸಿಇಒ ಅವರಿಗೆ ಆಯೋಗವು ಸೂಚನೆ ನೀಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-40-1313055446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.