ಮದ್ದೂರು: ನಾಗಣ್ಣ ಬಾಣಸವಾಡಿರವರು ಒಕ್ಕಲಿಗರ ಏಳಿಗೆಗೆ ಶ್ರಮಿಸಿದ ಅಜಾತಶತ್ರುವಾಗಿದ್ದರು ಎಂದು ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಹೊನ್ನೇರು ಬಳಗ, ಕಾಲ ಭೈರವ ಕ್ರೀಯಾಶೀಲ ಒಕ್ಕಲಿಗ ಕಾರ್ಯಪಡೆ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ನಗರದ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ಒಕ್ಕಲಿಗ ವಜ್ರ ನಾಗಣ್ಣ ಬಾಣಸವಾಡಿ ಅವರ 61ನೇ ಜನ್ಮದಿನಾಚರಣೆ ಹಾಗೂ ನಾಗಣ್ಣ ಬಾಣಸವಾಡಿ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೀಪ ತನ್ನನ್ನು ತಾನು ಸುಟ್ಟುಕ್ಕೊಂಡು ಇತರರಿಗೆ ಬೆಳೆಕು ಕೊಡುವ ಹಾಗೆ ನಾಗಣ್ಣಬಾಣಸವಾಡಿ ಅವರು ಒಕ್ಕಲಿಗ ಜನಾಂಗದ ಹಿತಕ್ಕಾಗಿ ತಮ್ಮ ಕುಟುಂಬದ ಹಿತವನ್ನು ಬದಿಗೊತ್ತಿ ಶ್ರಮಿಸಿದರು’ ಎಂದರು.

‘ಉತ್ತರ ಕರ್ನಾಟಕದ ಕುಡು ಒಕ್ಕಲಿಗರನ್ನು ಮುಖ್ಯವಾಹಿನಿಗೆ ಕರೆ ತಂದು ಅವರಿಗೆ ಒಕ್ಕಲಿಗ ಜನಾಂಗದ ಜಾತಿ ಪ್ರಮಾಣಪತ್ರವನ್ನು ಕೊಡಿಸಬೇಕು. ಆ ಮೂಲಕ ಆ ಭಾಗದಲ್ಲಿ ನಿರಂತರ ಶೋಷಣೆ ಹಾಗೂ ತುಳಿತಕ್ಕೆ ಒಳಗಾದ ಕಡುಒಕ್ಕಲಿಗರ ರಕ್ಷಿಸಬೇಕೆಂದು ಅಹರ್ನಿಶಿ ಶ್ರಮಿಸಿದ ನಾಗಣ್ಣಬಾಣಸವಾಡಿ ಅವರ ಸಾಧನೆ ಆಪಾರವಾದದ್ದು’ ಎಂದರು.

‘ನಾಗಣ್ಣ ಬಾಣಸವಾಡಿ ಅವರ ಹೆಸರಿನ ಸಮಾಜ ಸೇವಾ ಪ್ರಶಸ್ತಿಯನ್ನು ಸಮುದಾಯ ಹಿತಕ್ಕಾಗಿ ಶ್ರಮಿಸಿದವರಿಗೆ ನೀಡುತ್ತಾ ಬಂದಿರುವುದು ಶ್ಲಾಘನೀಯ. ಈ ಬಾರಿ ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಲರಾಮೇಗೌಡ ಅವರಿಗೆ ನಾಗಣ್ಣ ಬಾಣಸವಾಡಿ ಸಮಾಜ ಸೇವಾ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ’ ಎಂದರು.

ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಉಪಾಧ್ಯಕ್ಷ ಸಾಗರ್ ಗೌಡ, ಜಯಶ್ರೀ, ಅಂಬರೀಶ್ ಗೌಡ, ಹೊನ್ನೇರು ಬಳಗದ ಎಸ್ ದಯಾನಂದ್, ಕಾಲಭೈರವ ಕ್ರೀಯಾಶೀಲ ಒಕ್ಕಲಿಗ ಕಾರ್ಯಪಡೆಯ ಅಧ್ಯಕ್ಷ ಎಂ.ಪಿ.ಲಿಂಗೇಗೌಡ, ನ.ಲಿ.ಕೃಷ್ಣ, ಪ್ರೊ. ಕೃಷ್ಣೇಗೌಡ ಗುಡಿಗೆರೆ ಮಂಜುನಾಥ್, ಗೋಪಾಲ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-40-950599272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.