ಕಿಕ್ಕೇರಿ: ಹೋಬಳಿಯ ಗಡಿಯಂಚಿನ ಊಗಿನಹಳ್ಳಿ ಗ್ರಾಮದಲ್ಲಿ ನಡೆದಿರುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಾರ್ವಜನಿಕರು ನಿತ್ಯ ಬಿದ್ದು ಎದ್ದು ಓಡಾಡುವಂತಾಗಿದೆ. ಕೆಲವು ತಿಂಗಳುಗಳ ಹಿಂದೆ ಶ್ರೀರಾಮ ದೇವರ ಉತ್ತರ ನಾಲೆ ಅಚ್ಚುಕಟ್ಟು ಅನುದಾನದಿಂದ ಗ್ರಾಮದ ಹೊಸಬೀದಿಗಾಗಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ಆರಂಭಿಸಲಾಗಿತ್ತು. ಗ್ರಾಮದಿಂದ ಶ್ರೀರಾಮದೇವರ ನಾಲೆಗೆ ಸಾಗುವ ಮುಖ್ಯರಸ್ತೆಗೆ ಈ ಹೊಸಬೀದಿ ರಸ್ತೆ ಕೂಡು ರಸ್ತೆಯಾಗಿದ್ದು, ವರ್ಷಗಳಿಂದ ಗುಂಡಿಬಿದ್ದು ಸಾರ್ವಜನಿಕರು ಓಡಾಡಲು ಕಷ್ಟವಾಗಿತ್ತು. ಈಗ ಅಸಮರ್ಪಕ ರಸ್ತೆ ನಿರ್ಮಾಣದಿಂದ ಮತ್ತಷ್ಟು ಸಮಸ್ಯೆ ಉಂಟಾಗಿದೆ.

ಒಳಚರಂಡಿ ಸರಿ ಮಾಡದ ಕಾರಣ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಚರಂಡಿ ಮೇಲೆ ಸರಿಯಾಗಿ ಸ್ಲಾಬ್ ಹಾಕದೆ ರಸ್ತೆಯನ್ನು ಎತ್ತರವಾಗಿ ನಿರ್ಮಿಸಲಾಗಿದೆ. ‘ಈ ಎರಡು ಕೂಡು ರಸ್ತೆ ಬಳಿಯ ಅಡ್ಡಲಾದ ಚರಂಡಿ ಬಳಿ ಗುಂಡಿ ತೆಗೆದು ದುರಸ್ತಿ ಮಾಡದೆ ಬಿಡಲಾಗಿದೆ. ಪರಿಣಾಮ ಮಕ್ಕಳು, ಮಹಿಳೆಯರು, ವಯೋವೃದ್ಧರು ರಸ್ತೆಯ ಗುಂಡಿಯ ಬಳಿ ಓಡಾಡಲು ಕಷ್ಟವಾಗಿದೆ. ರಸ್ತೆಗೆ ಅಡ್ಡವಾಗಿರುವ ವಿದ್ಯುತ್ ಕಂಬ ಸ್ಥಳಾಂತರಿಸದೆ ವಾಹನ ಅಪಘಾತ ಸಂಭವಿಸುತ್ತಿದೆ. ಗುತ್ತಿಗೆದಾರನ ಬಳಿ ವಿಚಾರಿಸಿದರೆ ಬೇಜಾವ್ದಾರಿಯಿಂದ ಉತ್ತರಿಸುತ್ತಾರೆ’ ಎಂದು ಗ್ರಾಮಸ್ಥ ಕೃಷ್ಣೇಗೌಡ ಅಲವತ್ತುಕೊಂಡಿದ್ದಾರೆ. ಕಾಮಗಾರಿ ಬಹುಕೋಟಿ ವೆಚ್ಚದ್ದಾಗಿದೆ. ನಾಮಫಲಕ ಅಳವಡಿಸದೆಮಾಹಿತಿ ಇಲ್ಲವಾಗಿದೆ. ರೈತರಿಗೆ ಅನುಕೂಲವಾಗಬೇಕಿರುವ ರಸ್ತೆ ಕಾಮಗಾರಿ ಸಾರ್ವಜನಿಕರಿಗೆ ಮರಣದ ರಸ್ತೆಯಾಗಿ ಪರಿಣಮಿಸಿದೆ. ಕಾಮಗಾರಿ ಬಗ್ಗೆ ತನಿಖೆ ಆಗಬೇಕಿದೆ ಎಂದು ಗ್ರಾಮಸ್ತರು ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-40-824840763

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.